Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರಜಾಪ್ರಭುತ್ವದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ – ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dakshina Kannada | ಪ್ರಜಾಪ್ರಭುತ್ವದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ – ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

Dakshina Kannada

ಪ್ರಜಾಪ್ರಭುತ್ವದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ – ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

Public TV
Last updated: April 25, 2023 2:04 pm
Public TV
Share
2 Min Read
MALLIKARJUN KHARGE 1
SHARE

ಮಂಗಳೂರು: ಪ್ರಜಾಪ್ರಭುತ್ವದಲ್ಲಿ (Democracy) ಕಳ್ಳರ ಹಾವಳಿ ಹೆಚ್ಚಾಗಿದೆ. ಬೇರೆ ಬೇರೆ ರಾಜ್ಯದಲ್ಲಿ ನಮ್ಮವರ ಕಳ್ಳತನ ಆಗಿದೆ. ಇಡಿ, ಐಟಿ ಎಲ್ಲವೂ ಬಿಜೆಪಿಯವರ (BJP) ಕೈಯಲ್ಲಿದೆ. ಹಾಗಾಗಿ ಕಳ್ಳತನ ಆಗುತ್ತಿದೆ ಎಂದು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಗಳವಾರ ಮಂಗಳೂರಿನಲ್ಲಿ (Mangaluru) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಎಲ್ಲಾ ಕಡೆ ಎಟಿಎಂ ಇಟ್ಟಿದ್ದಾರೆ. ದುಡ್ಡಿನ ಮೇಲೆ ಬಿಜೆಪಿ ಚುನಾವಣೆ (Election) ನಡೆಸುತ್ತಿದೆ. ಅಲ್ಲದೇ ಮನಿ ಮತ್ತು ಮಸಲ್ ಪವರ್ ಬಳಸುತ್ತಿದ್ದಾರೆ. ರಾಜ್ಯದ ಬಜೆಟ್‌ನಲ್ಲಿ 3 ಲಕ್ಷ ಕೋಟಿ ಹಣ ಇದೆ. ಅದರಲ್ಲಿ 40 ಪರ್ಸೆಂಟ್ ಕಮಿಷನ್ ಹೋಗುತ್ತದೆ. ಅನೇಕ ಎಂಎಲ್‌ಎಗಳು ಹಾಗೂ ಅವರ ಸಂಬಂಧಿಗಳು ಭ್ರಷ್ಟಾಚಾರ (Corruption) ಮಾಡುತ್ತಿದ್ದಾರೆ. ಈಗ ಅವರ ಬಗಲಲ್ಲೇ ಭ್ರಷ್ಟಾಚಾರ ನಡೆಯುತ್ತಿದ್ದರೂ ಅವರು ಮಾತನಾಡುವುದಿಲ್ಲ. ಒಂಭತ್ತು ವರ್ಷಗಳಲ್ಲಿ ಅವರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸ್ವಾಭಿಮಾನಿಗಳು ಜೆಡಿಎಸ್‌ನಲ್ಲಿ ಇರಲ್ಲ ಎಂಬುದು ಮತ್ತೆ ಪ್ರೂವ್ ಆಗಿದೆ: ಸುಮಲತಾ 

BJP Congress

40% ಕಮಿಷನ್ ಕೊಟ್ಟರೆ ಎಲ್ಲಾ ಕೆಲಸ ಆಗುತ್ತದೆ ಎನ್ನುವುದು ಜಗತ್ತಿಗೇ ಗೊತ್ತಾಗಿದೆ. ಇದಕ್ಕೆ ನಾವು ಸಾಕ್ಷಿ ಕೊಡಬೇಕಾಗಿಲ್ಲ. ಕರ್ನಾಟಕದಲ್ಲಿದ್ದ ಕಾಂಟ್ರಾಕ್ಟರ್ ಸೇರಿದಂತೆ ಎಲ್ಲರೂ ಬರವಣಿಗೆಯ ರೂಪದಲ್ಲಿ ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲ ಹಾಗೂ ಲೋಕಾಯುಕ್ತರಿಗೆ ಕಳುಹಿಸಿದ್ದಾರೆ. ಇಂತಹ ಭ್ರಷ್ಟಾಚಾರದ ಸರ್ಕಾರ ಇರುವುದರಿಂದ ಇದನ್ನು ತೆಗೆದು ಹಾಕಲು ಜನರು ನಿರ್ಧರಿಸಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ: ಬಿಜೆಪಿ ವಿರುದ್ಧ ದೇಮ ಕಿಡಿ

ಮೋದಿ ಖಾನೆ ದೂಂಗಾ ಎನ್ನುವುದು ಬರೀ ಸ್ಲೋಗನ್ ಅಷ್ಟೆ. ಇಲ್ಲಿ 25 ಲಕ್ಷ ನಿರುದ್ಯೋಗಿ ಡಾಕ್ಟರ್ ಹಾಗೂ ಎಂಜಿನಿಯರ್ ಪದವೀಧರರಿದ್ದಾರೆ. 100 ಕೋಟಿ ಜನ ಎಜುಕೇಟೆಡ್ ಇದ್ದಾರೆ. 7.70 ಲಕ್ಷ ಜನ ಸರ್ಕಾರಿ ನೌಕರಿಯಲ್ಲಿದ್ದಾರೆ. 2.60 ಲಕ್ಷ ಹುದ್ದೆ ಖಾಲಿ ಇದೆ. ಇದನ್ನು ಯಾಕೆ ಮೋದಿಯವರು (Narendra Modi) ನೋಡುವುದಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಪರ ಪ್ರಚಾರಕ್ಕೆ ರಮ್ಯಾ, ದುನಿಯಾ ವಿಜಯ್‌ ಬರ್ತಾರೆ – ಯತೀಂದ್ರ

ಸಾಕಷ್ಟು ವಿಮಾನ ನಿಲ್ದಾಣ, ಹೆದ್ದಾರಿ, ಬಂದರು ಹಾಗೂ ಕೈಗಾರಿಕೆ ಎಲ್ಲಾ ಕಾಂಗ್ರೆಸ್ (Congress) ಕಾಲದಲ್ಲಿಯೇ ಆಗಿತ್ತು. ಮೋದಿಯವರು ಕಾಂಗ್ರೆಸ್ 70 ವರ್ಷಗಳಿಂದ ಏನು ಮಾಡಿದೆ ಎಂದು ಕೇಳುತ್ತಾರೆ. ರಾಜ್ಯದ ಡಬಲ್ ಎಂಜಿನ್ ಸರ್ಕಾರ ಏನು ಮಾಡಿದೆ? ಎಂಜಿನ್ ಫಾಕ್ಟರಿ ವಾರಣಾಸಿಯಲ್ಲಿದೆ. ಒಂದು ಎಂಜಿನ್ ಸರ್ಕಾರ 40 ಪರ್ಸೆಂಟ್‌ನಲ್ಲಿ ಕೆಟ್ಟುಹೋಗಿದೆ. ಇನ್ನು ಡಬಲ್ ಎಂಜಿನ್ ಸರ್ಕಾರ ಬಂದರೆ 80% ಆಗಬಹುದು. ಅವರು ನಾವು ಇಂತಹದೊಂದು ಹೂಡಿಕೆ ಮಾಡಿದ್ದೇವೆ ಎಂದು ಹೇಳಲಿ. ನಾನು ರೈಲ್ವೇ ಸಚಿವನಾಗಿದ್ದಾಗ ಒಂದೇ ವರ್ಷದಲ್ಲಿ ವಾರಣಾಸಿ ಸೇರಿ ಎಲ್ಲಾ ಕಡೆ 37 ಹೊಸ ರೈಲುಗಳನ್ನು ಬಿಟ್ಟಿದ್ದೆ. ಈಗ ಏನು ಅವರು ರೈಲು ಬಿಡೋದು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದು ಆದೇಶಕ್ಕೆ ತಡೆ – ಮೇ 9 ರವರೆಗೆ ಜಾರಿ ಬೇಡವೆಂದು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

185 ಸೀಟ್ ಎಲ್ಲರಿಗೂ ಮೊದಲೇ ನಾವು ಘೋಷಣೆ ಮಾಡಿದ್ದೇವೆ. ಕೆಲವು ಕಡೆ ನಾಯಕರ, ಆಕಾಂಕ್ಷಿಗಳ ಬೇಡಿಕೆ ಹೆಚ್ಚಾಗಿ ತಡವಾಗಿದೆ. ನಮಗೆ 150 ಸೀಟ್ ಕೊಡಿ, ಒಂದೆರಡು ಕಳ್ಳತನ ಆದರೂ ನಾವು ಉಳಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಅಣ್ಣಾಮಲೈ ಎಂದ ತೇಜಸ್ವಿ ಸೂರ್ಯ

TAGGED:aiccbjpcongresscorruptionelectionmallikarjun khargeMangaluruಎಐಸಿಸಿಕಾಂಗ್ರೆಸ್ಚುನಾವಣೆಬಿಜೆಪಿಭ್ರಷ್ಟಾಚಾರಮಂಗಳೂರುಮಲ್ಲಿಕಾರ್ಜುನ ಖರ್ಗೆ
Share This Article
Facebook Whatsapp Whatsapp Telegram

Cinema news

Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories

You Might Also Like

Kerala Blast
Latest

ಕೇರಳ | ತ್ರಿಶೂರ್ ಪೂರಂ ಉತ್ಸವಕ್ಕೆ ಸಿಡಿಮದ್ದು ತಯಾರಿಸುತ್ತಿದ್ದ ಸ್ಥಳದಲ್ಲಿ ಭಾರೀ ಸ್ಫೋಟ – 13 ಮಂದಿ ಸಾವು

Public TV
By Public TV
21 seconds ago
Delhi NCR
Latest

ದೆಹಲಿ-NCR ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಪಾಕ್‌ ಮೂಲದ ಇಬ್ಬರು ಶಂಕಿತ ಉಗ್ರರ ಬಂಧನ

Public TV
By Public TV
36 minutes ago
Mallikarjun Kharge Narendra Modi
Latest

ಮೋದಿ ಒಬ್ಬ ಭಯೋತ್ಪಾದಕ – ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ

Public TV
By Public TV
54 minutes ago
ATS Raid 2 Arrested
Latest

ಗುಜರಾತ್‌ ATS ದಾಳಿ: ಘಜ್ವಾ-ಎ-ಹಿಂದ್ ಸಂಚು ಪ್ರಕರಣದಲ್ಲಿ ಇಬ್ಬರ ಬಂಧನ

Public TV
By Public TV
1 hour ago
KN RAJANNA
Bengaluru City

ಸಿಎಂಗೆ ಯಾರೋ ಮಾಟ ಮಂತ್ರ ಮಾಡಿಸಿರಬಹುದು, ಜನ್ರೂ ಮಾತಾಡಿಕೊಳ್ತಿದ್ದಾರೆ: ರಾಜಣ್ಣ

Public TV
By Public TV
2 hours ago
Pahalgam Terror Attack 2 1
Latest

ಪಹಲ್ಗಾಮ್‌ ದಾಳಿಗೆ 1 ವರ್ಷ; ಮಾಸದ ಗಾಯ, ನಿಲ್ಲದ ಕಣ್ಣೀರು – ‘ಸಿಂಧೂರ’ ಸಾಂತ್ವನ

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?