Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕರ್ನಾಟಕ ಮತ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? – ಪಬ್ಲಿಕ್‌ ಸರ್ವೆ ಚಾಪ್ಟರ್‌ 1
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕರ್ನಾಟಕ ಮತ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? – ಪಬ್ಲಿಕ್‌ ಸರ್ವೆ ಚಾಪ್ಟರ್‌ 1

Bengaluru City

ಕರ್ನಾಟಕ ಮತ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? – ಪಬ್ಲಿಕ್‌ ಸರ್ವೆ ಚಾಪ್ಟರ್‌ 1

Public TV
Last updated: March 30, 2023 7:57 pm
Public TV
Share
4 Min Read
mood of karnataka march
SHARE

ಕರ್ನಾಟಕ ಕುರುಕ್ಷೇತ್ರಕ್ಕೆ (Mood Of Karnataka) ರಣಕಣ ಸಿದ್ಧವಾಗಿದೆ. ಕರ್ನಾಟಕದಲ್ಲೀಗ ಅಕ್ಷರಶಃ ಯುದ್ಧಕಾಂಡ. ರಾಜಕೀಯ ಪಕ್ಷಗಳ ಶಸ್ತ್ರಗಾರದಿಂದ ಪ್ರಬಲ ಯುದ್ಧಾಯುಧಗಳು ಒಂದೊಂದೇ ಹೊರ ಬರುತ್ತಿವೆ. ಮೂರೂ ಪಕ್ಷಗಳೂ ಯಾರಿಗೇನು ಕಮ್ಮಿ ಇಲ್ಲ ಎಂಬಂತೆ ಅಶ್ವಮೇಧ ಯಾಗಕ್ಕೆ ಹೊರಟಿವೆ. ಏನಾದರೂ ಸರಿ ಕದನ ಗೆಲ್ಲಬೇಕು. ಗೆದ್ದು ಸಿಂಹಾಸನ ಏರಬೇಕೆಂಬ ಗುರಿಯೊಂದಿಗೆ ಅಖಾಡಕ್ಕೆ ಇಳಿದಿವೆ.

ಇನ್ನೊಂದೂವರೆ ತಿಂಗಳು ಕರ್ನಾಟಕದಲ್ಲಿ ಚುನಾವಣಾ (Karnataka Election 2023) ಕದನ. ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆ ಚುನಾವಣೆಯೇ ಕರ್ನಾಟಕದ ಮಟ್ಟಿಗೆ ಬಹು ದೊಡ್ಡ ವಿದ್ಯಮಾನ. ಚುನಾವಣಾ ಜ್ವರ ಈಗಾಗಲೇ ದಶ ದಿಕ್ಕುಗಳಲ್ಲೂ ಶುರುವಾಗಿಯಾಗಿದೆ. ಸ್ಟಾರ್ ಅಭ್ಯರ್ಥಿಗಳ ಭರಾಟೆ, ಪ್ರಚಾರದ ಅಬ್ಬರ, ಗಿಫ್ಟ್ ಗಳ ಸುರಿಮಳೆ, ಬಂಡಾಯದ ಬಾವುಟ, ಸಿಟ್ಟು, ಆಕ್ರೋಶ , ಆ ಪಕ್ಷದಿಂದ ಈ ಪಕ್ಷಕ್ಕೆ ಜಿಗಿತ ಹೀಗೆ ಚುನಾವಣಾ ಚಟುವಟಿಕೆಗಳು ವಿಜೃಂಭಿಸುತ್ತಿವೆ.

ಈ ಬಿರು ಬೇಸಿಗೆಯಲ್ಲೂ ಜನರ ಬಾಯಲ್ಲಿ ಬಿಸಿಬಿಸಿ ಚರ್ಚೆ ಮುಂದಿನ ಸರ್ಕಾರ ಯಾರದ್ದು ಅನ್ನೋದು. ಆಡಳಿತಾರೂಢ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುತ್ತಾ? ಬಹಳ ಹುರುಪಿನಿಂದ ಚುನಾವಣೆಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಗೆದ್ದು ಬೀಗುತ್ತಾ? ಯಾವ ಪಕ್ಷವೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತಾ? ಅತಂತ್ರ ಸ್ಥಿತಿ ಉಂಟಾದರೆ, ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ? ಹೀಗೆ ಜನಮನದಲ್ಲಿ ನಿತ್ಯವೂ ರಾಜ್ಯ ವಿಧಾನಸಭಾ ಚುನಾವಣೆಯದ್ದೇ ಚುರುಮುರಿ ಚರ್ಚೆ.

Congress BJP JDS

ಕರ್ನಾಟಕದ ಸುದ್ದಿ ವೀಕ್ಷಕರ ಪಾಲಿನ ಅಚ್ಚುಮೆಚ್ಚಿನ ವಾಹಿನಿಯಾದ ನಿಮ್ಮ ಪಬ್ಲಿಕ್ ಟಿವಿ, ನಿಮ್ಮ ಈ ಪ್ರಶ್ನೆಗಳಿಗೆ ಒಂದು ಸ್ಪಷ್ಟರೂಪ ಕೊಡುವ ಪ್ರಯತ್ನ ಮಾಡಿದೆ. ಕಾಂಗ್ರೆಸ್‌ (Congress), ಬಿಜೆಪಿ (BJP), ಜೆಡಿಎಸ್‌ (JDS) ಇಲ್ಲಾ ಕೈ + ತೆನೆ ಹೊತ್ತ ಮಹಿಳೆಯೋ ಅಥವಾ ಕಮಲದ ಜೊತೆ ತೆನೆ ಪಕ್ಷವೋ ಅನ್ನೋ ಕೌತುಕದ ಚರ್ಚಾ ಸರಣಿಗೆ ಪಬ್ಲಿಕ್ ಟಿವಿ ಒಂದು ಪ್ರಾಮಾಣಿಕ ಸಮೀಕ್ಷೆ ನಡೆಸಿದೆ.

ರಾಜ್ಯದ ಮೂಲೆ ಮೂಲೆಯಲ್ಲಿ ನಡೆಸಿದ ಈ ಅವಲೋಕನದಲ್ಲಿ ಯಾವುದೇ ಪಕ್ಷದತ್ತ ವಿಶೇಷ ಒಲವು, ಹಾಗೂ ಪಕ್ಷಪಾತಕ್ಕೆ ಅವಕಾಶ ನೀಡಿಲ್ಲ. ಸುಮಾರು 1 ಲಕ್ಷಕ್ಕೂ ಅಧಿಕ ಸಮೀಕ್ಷೆಯ ಸ್ಯಾಂಪಲ್ಲುಗಳನ್ನು ಸಂಗ್ರಹಿಸಿ ಫಲಿತಾಂಶ ನೀಡುತ್ತಿದ್ದೇವೆ. ವೀಕ್ಷಕರೇ ನೀವು ನಂಬಿದ್ರೆ ನಂಬಿ ಈ 1 ಲಕ್ಷಕ್ಕೂ ಹೆಚ್ಚು ಸ್ಯಾಂಪಲ್ಲುಗಳಲ್ಲಿ ಸುಮಾರು 5 ಸಾವಿರ ಸ್ಯಾಂಪಲ್ಲುಗಳನ್ನು ನಾವು ಪರಿಗಣಿಸದೇ ತಿರಸ್ಕರಿಸಿದ್ದೇವೆ. ಈ ಸ್ಯಾಂಪಲ್ಲುಗಳ ನೈಜತೆ , ವಿಶ್ವಾಸಾರ್ಹತೆಗಳ ಬಗ್ಗೆ ಅನುಮಾನ ಬಂದ ಕಾರಣ ಅಂಥವನ್ನು ನಾವು ಸಮೀಕ್ಷೆಯ ಫಲಿತಾಂಶಕ್ಕೆ ಪರಿಗಣಿಸಿಯೇ ಇಲ್ಲ. ಅಷ್ಟರ ಮಟ್ಟಿಗೆ ಅತ್ಯಂತ ಪ್ರಾಮಾಣಿಕ ಸರ್ವೆ ಮಾಡಿದ್ದೇವೆ ಎಂಬ ಹೆಮ್ಮೆ ನಮಗಿದೆ.

ಈ ಸಮೀಕ್ಷೆಯನ್ನು ನಾವು ಕ್ವಾರ್ಟರ್ ಫೈನಲ್ ಎಂದೇ ಪರಿಗಣಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೊಂದು ಸಮೀಕ್ಷೆ ಪ್ರಸ್ತುತಪಡಿಸಲಿದ್ದೇವೆ. ಅದನ್ನು ನಾವು ಸೆಮಿಫೈನಲ್ ಅಂತ ಕರೆಯಲಿದ್ದೇವೆ. ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆ ದಿನದ ಹತ್ತಿರದಲ್ಲೇ ಮಗದೊಂದು ಸಮೀಕ್ಷೆಯ ಫಲಿತಾಂಶ ನೀಡಲಿದ್ದೇವೆ. ಅದು ಮದರ್ ಆಫ್ ಆಲ್ ಸರ್ವೇಸ್. ಅಂದ್ರೆ ಮೆಗಾ ಫೈನಲ್ ಸಮೀಕ್ಷೆ. ಹೀಗಾಗಿ ಇಂದಿನದ್ದೂ ಸೇರಿದಂತೆ ಇನ್ನು ನಾಲ್ಕು ವಾರಗಳಲ್ಲಿ ಒಟ್ಟು ಮೂರು ಸಮೀಕ್ಷೆಗಳನ್ನು ನಿಮ್ಮ ಮುಂದಿಡಲಿದ್ದೇವೆ. ಸರಿ ಹಾಗಿದ್ರೆ, ಚುನಾವಣಾ ಪೂರ್ವದಲ್ಲಿ ಮತದಾರರ ಮನದಲ್ಲಿ ಏನಿದೆ? ಯಾರಿಗೆ ಮನ್ನಣೆ ನೀಡಿದ್ದಾರೆ! ಯಾವ ಪಕ್ಷಕ್ಕೆ ಮೇಲುಗೈ ಇದೆ? ಇಂಥ ಪ್ರಶ್ನೆಗಳಿಗೆ ಉತ್ತರ ನಿಮ್ಮ ಪಬ್ಲಿಕ್ ಟಿವಿಯ ಸಮೀಕ್ಷೆ ಅದುವೇ ಮೂಡ್ ಆಫ್ ಕರ್ನಾಟಕ.

Karnataka Election 2023 Public TV Survey March

ಸಮೀಕ್ಷೆಯನ್ನು ಹೇಗೆ ಮಾಡಲಾಗಿದೆ?
ಎಲ್ಲ 224 ಕ್ಷೇತ್ರಗಳಲ್ಲೂ ನಮ್ಮ ಪ್ರತಿನಿಧಿಗಳು ಸಮೀಕ್ಷೆ ಮಾಡಿದ್ದಾರೆ. ಈ ವೇಳೆ ಕೆಲ ಆಯ್ದ ಪಕ್ಷಾತೀತ ಸ್ವಯಂಸೇವಕರ ನೆರವನ್ನೂ ಪಡೆಯಲಾಗಿದ್ದು ಪ್ರತಿ ಕ್ಷೇತ್ರದಲ್ಲೂ 500 ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಅದೇ ಸ್ಥಳದಲ್ಲಿ ಸ್ಯಾಂಪಲ್‌ಗಳ ಸಂಗ್ರಹ ಮಾಡಿಲ್ಲ. ವಿಶ್ವಾಸಾರ್ಹತೆಗಾಗಿ ಕೆಲವೊಂದು ಸ್ಯಾಂಪಲ್ ಗಳ ಕ್ರಾಸ್ ಚೆಕ್ ಮಾಡಿದ್ದು ಅನುಮಾನ ಬಂದ ಸ್ಯಾಂಪಲ್‌ಗಳನ್ನು ತಿರಸ್ಕರಿಸಿದ್ದೇವೆ.

ಇದು ಮೊದಲ ಸುತ್ತಿನ ಸರ್ವೆಯಾಗಿದ್ದು ಇದೇ ಫೈನಲ್ ಅಲ್ಲ. ಪಕ್ಷಗಳ ಆಧಾರದ ಮೇಲೆ ಈ ಸರ್ವೆ ಮಾಡಲಾಗಿದ್ದು ಅಭ್ಯರ್ಥಿಗಳನ್ನು ಮಾನದಂಡವಾಗಿ ಪರಿಗಣನೇ ಮಾಡಲಾಗಿಲ್ಲ. ಅಭ್ಯರ್ಥಿ ಆಯ್ಕೆಯಾದ ಬಳಿಕ ಫೈನಲ್ ಸರ್ವೆ ಫಲಿತಾಂಶ ಕೊಡಲಾಗುವುದು. ಫೈನಲ್ ಸರ್ವೆ ಸ್ವತಂತ್ರ ಸಂಸ್ಥೆಯಿಂದ ನಮ್ಮ ನಿಗಾದಲ್ಲೇ ನಡೆಯಲಿದ್ದು. ಕಳೆದ ತಿಂಗಳು ಮಾಡಿದ ಸರ್ವೆ ಫಲಿತಾಂಶವನ್ನೂ ಈ ಸಮೀಕ್ಷೆಗೆ ಸೇರಿಸಲಾಗಿದೆ. ಅಭ್ಯರ್ಥಿ ಆಯ್ಕೆ ಹಾಗೂ ಮೀಸಲಾತಿ ಘೋಷಣೆ ವಿಚಾರವನ್ನು ಪರಿಗಣನೆ ಮಾಡಿಲ್ಲ.

1. ಈ ಚುನಾವಣೆಯಲ್ಲಿ ನೀವು ಯಾವ ಆಧಾರದ ಮೇಲೆ ಮತ ಹಾಕುತ್ತೀರಿ?
ಪಕ್ಷ – 27.72%
ಅಭ್ಯರ್ಥಿ – 25.38%
ಜಾತಿ – 2.87%
ಧರ್ಮ – 3.79%
ಅಭಿವೃದ್ಧಿ – 36.20%
ಏನೂ ಹೇಳಲ್ಲ – 4.05%

PTV SURVEY 05

 

2. ಈ ಚುನಾವಣೆ ಹಿಂದುತ್ವ ವರ್ಸಸ್ ಅಭಿವೃದ್ಧಿಯ ಆಧಾರದ ಮೇಲೆ ನಡೆಯಲಿದ್ಯಾ?
ಹಿಂದುತ್ವವೇ ಪ್ರಧಾನ ಅಜೆಂಡಾ -11.15%
ಹಿಂದುತ್ವಕ್ಕಿಂತ ಅಭಿವೃದ್ಧಿ ಮುಖ್ಯ – 37.24%
ಹಿಂದುತ್ವ, ಅಭಿವೃದ್ಧಿ ಎರಡೂ ಮುಖ್ಯ – 38.32%
ಗೊತ್ತಿಲ್ಲ – 13.29%

PTV SURVEY 04

3. ನಿಮ್ಮ ಮತದಾನದ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?
ಬೆಲೆ ಏರಿಕೆ – 27.85%
ರಾಜಕೀಯ ಸ್ಥಿರತೆ – 3.34%
ಭ್ರಷ್ಟಾಚಾರ – 22.26%
ಸ್ಥಳೀಯ ಸಮಸ್ಯೆ/ದುರಾಡಳಿತ – 16.44%
ಅಭಿವೃದ್ಧಿ – 30.10%

PTV SURVEY 02

4. ಬಿಜೆಪಿ ಸರ್ಕಾರದ ಕೊರೊನಾ ನಿರ್ವಹಣೆ ನಿಮಗೆ ತೃಪ್ತಿ ತಂದಿದೆಯಾ?
ಉತ್ತಮ – 35.43%
ಪರವಾಗಿಲ್ಲ – 33.07%
ಕಳಪೆ – 23.63%
ಗೊತ್ತಿಲ್ಲ – 7.86%

PTV SURVEY 03
5. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವಿದ್ದು ಚುನಾವಣೆ ಮೇಲೆ ಪರಿಣಾಮ ಬೀರಬಹುದಾ?
ಹೌದು – 36.51%
ಇಲ್ಲ – 42.26%
ಗೊತ್ತಿಲ್ಲ – 21.23%

PTV SURVEY 01

6. ಈ ಎಲೆಕ್ಷನ್‍ನಲ್ಲಿ ಮೋದಿ ಮೇಲೆ ವಿಪರೀತ ಅವಲಂಬಿತ ಆಗಿದ್ಯಾ ರಾಜ್ಯ ಬಿಜೆಪಿ..?
ಮೋದಿಯೇ ಆಸರೆ – 53.85%
ಹಂಗೇನಿಲ್ಲ, ಸಮೂಹ ನಾಯಕತ್ವ – 29.02%
ಗೊತ್ತಿಲ್ಲ – 17.13%

PTV SURVEY 06

TAGGED:electionkarnatakaKarnataka ElectionPublic TVಕರ್ನಾಟಕ ಚುನಾವಣೆಚುನಾವಣೆನರೇಂದ್ರ ಮೋದಿಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema news

yash
ನಟ ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ FIR
Bengaluru City Cinema Districts Karnataka Latest Main Post Sandalwood
YASH 5
ಮುಂಬೈ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ರಾಕಿಭಾಯ್
Cinema Sandalwood
TVK Vijay
ಕರೂರು ಕಾಲ್ತುಳಿತ ಪ್ರಕರಣ – 7 ಗಂಟೆಗೂ ಹೆಚ್ಚು ಕಾಲ ನಟ ವಿಜಯ್‌ಗೆ CBI ಗ್ರಿಲ್
Bengaluru City Cinema Latest Sandalwood Top Stories
Toxic
ಯಶ್ ʻಟಾಕ್ಸಿಕ್ʼ ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!
Bengaluru City Cinema Districts Karnataka Latest Sandalwood Top Stories

You Might Also Like

rahul gandhi mysuru airport
Latest

ಮೈಸೂರಿನಲ್ಲಿ ರಾಹುಲ್ ಗಾಂಧಿ ಭೇಟಿಯಾದ ಸಿಎಂ, ಡಿಸಿಎಂ

Public TV
By Public TV
23 minutes ago
Makar Sankranti
Latest

23 ವರ್ಷಗಳ ಬಳಿಕ ಮಕರ ಸಂಕ್ರಾಂತಿಯಂದೇ ಷಟ್ತಿಲಾ ಏಕಾದಶಿ – ಏನಿದರ ವಿಶೇಷತೆ?

Public TV
By Public TV
27 minutes ago
Gadag Lakkundi 2
Districts

ನಿಧಿ ಬಳಿಕ ಐತಿಹಾಸಿಕ ಲಕ್ಕುಂಡಿಯಲ್ಲಿ ಪುರಾತನ ವಸ್ತುಗಳು ಪತ್ತೆ

Public TV
By Public TV
52 minutes ago
Upendra Dwivedi
Latest

ಕಾಶ್ಮೀರದಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆ; ಡಿಜಿಎಂಓ‌ಗಳ ಸಭೆಯಲ್ಲಿ ಪಾಕ್‌ಗೆ ಖಡಕ್ ಎಚ್ಚರಿಕೆ

Public TV
By Public TV
1 hour ago
swiggy zomato
Latest

10 ನಿಮಿಷದಲ್ಲಿ ಡೆಲಿವರಿ ಭರವಸೆಗೆ ಬ್ರೇಕ್ ಹಾಕಿದ ಕೇಂದ್ರ; ಜಾಹೀರಾತು ನಿಲ್ಲಿಸುವ ಭರವಸೆ ನೀಡಿದ ಝೆಪ್ಟೋ, ಸ್ವಿಗ್ಗಿ, ಜೊಮ್ಯಾಟೊ, ಬ್ಲಿಂಕಿಟ್‌

Public TV
By Public TV
1 hour ago
WhatsApp Image 2026 01 13 at 4.16.37 PM
Latest

ಪಟ ಪಟ ಹಾರೋ ಗಾಳಿಪಟ… ಮಕರ ಸಂಕ್ರಾಂತಿಗೆ ಪಟ ಹಾರಿಸೋದೇಕೆ?

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?