ಹಳೇಮೈಸೂರು ಭಾಗದಲ್ಲಿ ರಂಗೇರಿದ ರಾಜಕೀಯ-JDS ಮಣಿಸಲು Congress ಮಾಸ್ಟರ್ ಪ್ಲಾನ್

Public TV
1 Min Read
SHIVARAME GOWDA CHALUVARAYASWAMY

ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆ (Vidhanasabha Election) ಗೆ ಈಗಿನಿಂದಲೇ ತಯಾರಿಗಳು ಆರಂಭವಾಗಿದ್ದು, ಹಳೇ ಮೈಸೂರಿನಲ್ಲಿ ಜೆಡಿಎಸ್ (JDS) ವರ್ಸಸ್ ಕಾಂಗ್ರೆಸ್ (Congress) ತಿಕ್ಕಾಟ ಶುರುವಾಗಿದೆ. ಜೆಡಿಎಸ್ ಮಣಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡುತ್ತಿದೆ.

DK SHIVAKUMAR 1

ಹೌದು. ನಾಗಮಂಗಲದಲ್ಲಿ ಶಿವರಾಮೇಗೌಡ (Shivarame Gowda) ರನ್ನ ಕಣಕ್ಕಿಳಿಸಲು ಪ್ಲಾನ್ ಮಾಡಲಾಗುತ್ತಿದ್ದು, ಇತ್ತ ಮಂಡ್ಯದಿಂದ ಚಲುವರಾಯಸ್ವಾಮಿ (Chaluvarayaswamy) ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಶಿವರಾಮೇಗೌಡ, ಚಲುವರಾಯಸ್ವಾಮಿ ಒಂದಾದ್ರೆ ಗೆಲುವು ಸುಲಭ ಎಂಬ ಲೆಕ್ಕಾಚಾರ ಕಾಂಗ್ರೆಸ್‍ನದ್ದಾಗಿದೆ.

Bharat Jodo Yatra 2

ಭಾರತ್ ಜೋಡೋ ಯಾತ್ರೆ (Bharat Jodo Yatre) ಯಿಂದ ಸಿದ್ಧತೆ ತಯಾರಾಗುತ್ತಿದೆ. ಶಿವರಾಮೇಗೌಡ-ಚಲುವರಾಯಸ್ವಾಮಿ ಮಾತುಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದು ಸ್ಪರ್ಧೆ ಖಚಿತವಾದ ಬೆನ್ನಲ್ಲೇ ದಲಿತ ಸಿಎಂ ಕೂಗು – ಸಿದ್ದು ಸೋಲಿಸಿ, ದಲಿತ CM ಹಾದಿ ಸುಗಮಗೊಳಿಸಿ ಅಭಿಯಾನ

congress flag

ಡಿಕೆಶಿ (DK Shivakumar) ಜೊತೆ ಶಿವರಾಮೇಗೌಡ ನಡೆಸಿರುವ ಮಾತುಕತೆಯಲ್ಲಿ ಚಲುವರಾಯಸ್ವಾಮಿ ಸೇರಿ ಮಂಡ್ಯ ಕೈ ನಾಯಕರು ಭಾಗಿಯಾಗಿದರು. ಡಿಕೆಶಿ ಭೇಟಿಯ ವೇಳೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಶಿವರಾಮೇಗೌಡ ಜೆಡಿಎಸ್ ಸೋಲಿಸಲು ಮತ್ತೆ ಮರಳಿ ಕಾಂಗ್ರೆಸ್ ಬರಲು ನಿರ್ಧಾರ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಇತ್ತ ಚಲುವರಾಯಸ್ವಾಮಿ ಜೆಡಿಎಸ್ ಮಣಿಸಲು ಕ್ಷೇತ್ರ ಬದಲಾವಣೆಯತ್ತ ಮುಂದಾಗುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *