ಕ್ಯಾನ್ಬೆರಾ: ಪ್ರವಾಸಿಗರ ಹಾಟ್‌ಸ್ಪಾಟ್ ಎಂದೇ ಖ್ಯಾತಿಯಾಗಿರುವ ಆಸ್ಟ್ರೇಲಿಯಾದ (Australia) ಗೋಲ್ಡ್‌ಕೋಸ್ಟ್ ಬೀಚ್‌ನ (Gold Coast Beach) ಸೀ ವರ್ಲ್ಡ್ ಥೀಮ್ ಪಾರ್ಕ್ (World Theme Park) ಬಳಿ ನಡೆದ ಹೆಲಿಕಾಪ್ಟರ್ (Helicopters) ದುರಂತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
https://twitter.com/CANews_Watch/status/1609773126849822722?ref_src=twsrc%5Etfw%7Ctwcamp%5Etweetembed%7Ctwterm%5E1609773126849822722%7Ctwgr%5E1293bcd669839542e1653c5f72d14a61b395d1cb%7Ctwcon%5Es1_&ref_url=https%3A%2F%2Fwww.ndtv.com%2Fworld-news%2F4-dead-as-2-helicopters-collide-mid-air-in-australia-3656683
ಕಡಲತೀರದ ಪ್ರದೇಶದಲ್ಲಿ ಎರಡು ಹೆಲಿಕಾಪ್ಟರ್‌ಗಳ (Helicopters) ನಡುವೆ ಉಂಟಾದ ಘರ್ಷಣೆಯಲ್ಲಿ ಒಂದು ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದು, ಮತ್ತೊಂದು ಹೆಲಿಕಾಪ್ಟರ್ ಸಂಪೂರ್ಣ ಛಿದ್ರ-ಛಿದ್ರವಾಗಿ, ಅವಶೇಷಗಳು ಮರಳಿನ ದಂಡೆಯ ಮೇಲೆ ಬಿದ್ದಿದೆ. ಇದನ್ನೂ ಓದಿ: ರೂಪೇಶ್ ಗೆ ಬಿಗ್ ಬಾಸ್ ಕೊಟ್ಟಿದ್ದು 60 ಲಕ್ಷ: ನಿಜವಾಗಿಯೂ ಅವರ ಕೈಗೆ ಬರೋದೆಷ್ಟು?

ಹೆಲಿಕಾಪ್ಟರ್ (Helicopters) ಡಿಕ್ಕಿಯಾಗಿ 4 ಜನರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವುದಾಗಿ ಕ್ವೀನ್ಸ್‌ಲ್ಯಾಂಡ್ ರಾಜ್ಯ ಪೊಲೀಸ್ ಕಾರ್ಯನಿರ್ವಾಹಕ ಇನ್ಸ್ಪೆಕ್ಟರ್ ಗ್ಯಾರಿ ವೊರೆಲ್ ವಿವರಿಸಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಗುಟ್ಕಾ ತಿಂದು ಉಗುಳಿದಕ್ಕೆ ಗಲಾಟೆ – ಕೊಲೆಯಲ್ಲಿ ಅಂತ್ಯ
ಕ್ವೀನ್ಸ್‌ಲ್ಯಾಂಡ್ ರಾಜ್ಯದ ಬ್ರಿಸ್ಬೇನ್‌ನಿಂದ ದಕ್ಷಿಣಕ್ಕೆ 45 ಮೈಲುಗಳಷ್ಟು ದೂರದಲ್ಲಿ ಗೋಲ್ಡ್ ಕೋಸ್ಟ್ ಬೀಚ್ ಇದೆ. ಈ ಪ್ರದೇಶವು ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣಗಳಲ್ಲಿ ಒಂದಾಗಿದೆ.
