CrimeLatestMain PostNational

ದಿನಕ್ಕೆ 86 ರೇಪ್, ಗಂಟೆಗೆ 49 ಮಹಿಳಾ ದೌರ್ಜನ್ಯ ಕೇಸ್ ದಾಖಲು – ಹೊರಬಿತ್ತು ಆತಂಕಕಾರಿ ವರದಿ

ನವದೆಹಲಿ: 2021ರಲ್ಲಿ ಭಾರತದಲ್ಲಿ ಒಟ್ಟು 31,677 ರೇಪ್ ಕೇಸ್ ದಾಖಲಾಗಿದ್ದು ಸರಾಸರಿ ದಿನಕ್ಕೆ 86 ಕೇಸ್ ಮತ್ತು ಗಂಟೆಗೆ 49 ಮಹಿಳಾ ದೌರ್ಜನ್ಯ ಕೇಸ್ ದಾಖಲಾಗಿರುವ ಬಗ್ಗೆ ಸರ್ಕಾರ ಬಿಡುಗಡೆ ಮಾಡಿರುವ ವರದಿಯೊಂದು ಹೊರಬಿದ್ದಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (NCRB) ‘ಕ್ರೈಮ್ ಇನ್ ಇಂಡಿಯಾ 2021’ ವರದಿ ಪ್ರಕಾರ 2020ರಲ್ಲಿ 28,046 ಮತ್ತು 2019ರಲ್ಲಿ 32,033 ರೇಪ್ ಕೇಸ್ ದಾಖಲಾಗಿತ್ತು. 2021ರಲ್ಲಿ ಇದು 31,677ಕ್ಕೆ ಇಳಿಕೆ ಕಂಡರೂ, ಕೆಲ ರಾಜ್ಯಗಳಲ್ಲಿ ಹೆಚ್ಚಿನ ಅತ್ಯಾಚಾರ ಪ್ರಕರಣ ವರದಿಯಾಗಿದೆ. ಇದನ್ನೂ ಓದಿ: ಚಿಕ್ಕಪ್ಪನಿಂದ 15ರ ಬಾಲಕಿಯ ಮೇಲೆ ಅತ್ಯಾಚಾರ- ಗಂಡು ಮಗುವಿಗೆ ಜನ್ಮ ಕೊಟ್ಟ ಅಪ್ರಾಪ್ತೆ

ರಾಜ್ಯಗಳ ಪೈಕಿ ರಾಜಸ್ಥಾನ 6,337 ಕೇಸ್‍ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ 2,947, ಮಹಾರಾಷ್ಟ್ರ 2,496, ಉತ್ತರ ಪ್ರದೇಶ 2,845 ಮತ್ತು ದೆಹಲಿಯಲ್ಲಿ 1,250 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ನಿಶ್ಚಿತಾರ್ಥವಾಗಿದ್ದ ಯುವತಿ ನೇಣಿಗೆ ಶರಣು- ಕುಟುಂಬಸ್ಥರ ಆರೋಪವೇನು..?

ಅತ್ಯಾಚಾರ ಹೊರತುಪಡಿಸಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಅತ್ಯಾಚಾರ, ಕೊಲೆಯೊಂದಿಗೆ ಅತ್ಯಾಚಾರ, ವರದಕ್ಷಿಣೆ, ಆಸಿಡ್ ದಾಳಿಗಳು, ಆತ್ಮಹತ್ಯಾ ಪ್ರಚೋದನೆ, ಅಪಹರಣ, ಬಲವಂತದ ಮದುವೆ, ಮಾನವ ಕಳ್ಳಸಾಗಣೆ, ಆನ್‍ಲೈನ್ ಕಿರುಕುಳ ಮುಂತಾದ ಅಪರಾಧಗಳು ಸೇರಿವೆ.

Live Tv

Leave a Reply

Your email address will not be published.

Back to top button