ಚಂಡೀಗಢ: ಕ್ರಿಕೆಟ್ ಅಕಾಡೆಮಿಯಲ್ಲಿ (Cricket Academy) ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ 8 ವರ್ಷದ ಬಾಲಕನ ಮೇಲೆ ಮಿನಿ ಪಿಚ್ ರೋಲರ್ (Pitch Roller) ಹರಿದು ಮೃತಪಟ್ಟಿರುವ ದಾರುಣ ಘಟನೆ ಗುರುಗ್ರಾಮ್‌ನಲ್ಲಿ (Gurugram) ನಡೆದಿದೆ.
ಮೃತ ಬಾಲಕನನ್ನು ಆಕಾಶ್ ಕುಮಾರ್ ಎಂದು ಗುರುತಿಸಲಾಗಿದೆ. ಮೂಲತಃ ಬಿಹಾರದ ನಳಂದಾ ನಿವಾಸಿಯಾಗಿದ್ದ ಆಕಾಶ್, ತನ್ನ ಸಹೋದರ ನೀಲ್ ಹಾಗೂ ಇತರ ಮಕ್ಕಳೊಂದಿಗೆ ಕ್ರಿಕೆಟ್ ಅಕಾಡೆಮಿ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಯಶ್ ಟೆರರಿಸ್ಟ್ ಅಲ್ಲ… ಅವನೇಕೆ ಹೆದರಬೇಕು? ಏನೂ ಇಲ್ದೇ ಬಂದ ಹುಡ್ಗ ಇಂದು ವಿಶ್ವ ಆಳುತ್ತಿದ್ದಾನೆ: ತಾಯಿಯ ಖಡಕ್ ಮಾತು!
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಕಾಡೆಮಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಮಿನಿ ಪಿಚ್ ರೋಲರ್ ಏಕಾಏಕಿ ಚಲಿಸಲು ಆರಂಭಿಸಿದೆ. ಬಾಲಕನೊಬ್ಬನ ಕೈ ಯಂತ್ರದ ಸರ್ಕ್ಯೂಟ್ ಬ್ರೇಕರ್‌ಗೆ ತಾಗಿದ್ದರಿಂದ ರೋಲರ್ ಚಾಲನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್‌ನನ್ನು ಕೆಪಿಎಸ್‌ಸಿಗೆ ನೇಮಕ ಮಾಡಿದ್ದು ಬಿಜೆಪಿ: ಬಿಕೆ ಹರಿಪ್ರಸಾದ್
ಇದೇ ವೇಳೆ ಆಕಾಶ್ ರೋಲರ್‌ನ ಮುಂಭಾಗಕ್ಕೆ ಬಿದ್ದಿದ್ದು, ಚಲಿಸುತ್ತಿದ್ದ ಯಂತ್ರ ಆತನ ಮೇಲೆ ಹರಿದಿದೆ. ಘಟನೆ ನಡೆದ ಕೂಡಲೇ ಸ್ಥಳದಲ್ಲಿದ್ದ ಇತರ ಮಕ್ಕಳು ಭಯಭೀತರಾಗಿ ಅಲ್ಲಿಂದ ಓಡಿ ಹೋಗಿದ್ದಾರೆ. ಘಟನೆಯ ಬಳಿಕ ಆಕಾಶ್‌ನ ಕುಟುಂಬಸ್ಥರು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಿನೊಳಗೆ ಕೈದಿಗಳ ನಡುವೆ ಮಾರಾಮಾರಿ; ಜಗಳ ಬಿಡಿಸಲು ಹೋದ ಸಿಬ್ಬಂದಿ ಮೇಲೆಯೇ ಹಲ್ಲೆ
ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಘಟನೆ ಸಂಭವಿಸಿದ ವೇಳೆ ಪಿಚ್ ರೋಲರ್ ಅನ್ನು ಮೇಲ್ವಿಚಾರಣೆ ಮಾಡಲು ಸ್ಥಳದಲ್ಲಿ ಯಾರೂ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ತನಿಖಾಧಿಕಾರಿಯ ಪ್ರಕಾರ, ಘಟನೆಗೆ ಸಂಬAಧಿಸಿದAತೆ ಬಾಲಕನ ಕುಟುಂಬಸ್ಥರು ಯಾವುದೇ ನಿರ್ಲಕ್ಷ್ಯದ ಆರೋಪ ಮಾಡಿಲ್ಲ. ಕುಟುಂಬಸ್ಥರು ಪೊಲೀಸರಿಗೆ ಲಿಖಿತ ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೆ ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ. ಇದನ್ನೂ ಓದಿ: ಮೈಸೂರು ದಸರಾ ಆನೆಗಳ ತೂಕ ಪರೀಕ್ಷೆ: ಶ್ರೀಕಂಠನೇ ಹೆಚ್ಚು ಬಲಶಾಲಿ, ಕೊನೇ ಸ್ಥಾನದಲ್ಲಿ ಕಾವೇರಿ
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆಕಾಶ್‌ನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಪೊಲೀಸರು ಬಾಲಕನ ಸಾವಿಗೆ ಕಾರಣವಾದ ನಿಖರ ಪರಿಸ್ಥಿತಿಗಳು ಹಾಗೂ ಪಿಚ್ ರೋಲರ್ ಹೇಗೆ ಚಾಲನೆಯಾಯಿತು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಪಾರ್ಕ್ ಉಳಿಸೋದು ಕ್ರೈಂ ಅಂದ್ರೆ ಪ್ರತಿದಿನ ಈ ಕ್ರೈಮ್ ಮಾಡಲು ಸಿದ್ಧ : ತೇಜಸ್ವಿ ಸೂರ್ಯ
