ಮಂಡ್ಯ: ನೀರು ತುಂಬಿಸದ್ದ ಪಾತ್ರೆಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ.
ಮದ್ದೂರು ಪಟ್ಟಣದ ನಿವಾಸಿಯಾದ ಪುಟ್ಟಸ್ವಾಮಿ, ಸೌಜನ್ಯ ದಂಪತಿಯ 8 ತಿಂಗಳ ಪುತ್ರಿ ಖುಷಿ ಮೃತ ದುದೈವಿಯಾಗಿದ್ದು, ಇಂದು ಮಧ್ಯಾಹ್ನ ಬಟ್ಟೆ ತೊಳೆಯುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.
Advertisement
ಮೃತ ಮಗುವಿನ ತಾಯಿ ಬಟ್ಟೆ ತೊಳೆದ ನಂತರ ಬಟ್ಟೆಗಳನ್ನು ಒಣಹಾಕಲು ಮಗುವನ್ನು ಬಿಟ್ಟು ತೆರಳಿದ್ದಾರೆ. ಈ ಸಮಯದಲ್ಲಿ ಅಲ್ಲಿಯೇ ಆಟವಾಡುತ್ತಿದ್ದ ಖುಷಿ ನೀರು ತುಂಬಿದ ಪಾತ್ರೆಗೆ ತಲೆಕೆಳಗಾಗಿ ಬಿದ್ದಿದ್ದು, ಕೆಲವೇ ಕ್ಷಣಗಳಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದೆ. ( ಇದನ್ನೂ ಓದಿ : ಬಲೂನ್ ನುಂಗಿ 8 ತಿಂಗಳ ಮಗು ದುರ್ಮರಣ! )
Advertisement
ಘಟನೆ ಕುರಿತಂತೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ( ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ! )
Advertisement