ಚಂಢೀಗಢ: ಹರಿಯಾಣದ (Haryana) ಅಂಬಾಲಾ (Ambala) ಜಿಲ್ಲೆಯ ಧನೌರಾ (Dhanaura) ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ಸುಮಾರು 220 ಅಡಿ ಆಳದ ಕೊಳವೆಬಾವಿಗೆ ಆಕಸ್ಮಿಕವಾಗಿ ಬಿದ್ದಿರುವ ಘಟನೆ ನಡೆದಿದೆ. ನಿರ್ಭಯ್ ಸಿಂಗ್ ಎಂಬ ಬಾಲಕನನ್ನು ರಕ್ಷಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಮಾಹಿತಿಯ ಪ್ರಕಾರ, ನಿರ್ಭಯ್ ಸಿಂಗ್ ತನ್ನ ತಂದೆ ಮಂಜಿತ್ ಅವರೊಂದಿಗೆ ಕೃಷಿ ಜಮೀನಿಗೆ ತೆರಳಿದ್ದ. ತಂದೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಾತನಿಗೆ ಊಟ ನೀಡಲು ತೆರಳಿದ್ದ ವೇಳೆ, ಅವರ ಹಿಂದೆಯೇ ಬಂದಿದ್ದ ಬಾಲಕ ಆಟವಾಡುತ್ತಾ ಹೊಲದಲ್ಲಿ ಮುಚ್ಚದೆ ಬಿಟ್ಟಿದ್ದ ಕೊಳವೆಬಾವಿಯ ಬಳಿ ಹೋಗಿದ್ದಾನೆ. ಈ ವೇಳೆ ಕಾಲು ಜಾರಿ ಸುಮಾರು 220 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದಾನೆ. ಇದನ್ನೂ ಓದಿ: ಕೇತನ್ ಹತ್ಯೆ ಬಳಿಕ ಲೋಹಗಡ ಕೋಟೆಗೆ ಮುಗಿಬಿದ್ದ ಜನ – ಕೊಲೆ ನಡೆದ ಸ್ಥಳಕ್ಕೆ ‘ಸಿಯಾ ಪಾಯಿಂಟ್’ ಹೆಸರು

ಬಾಲಕನ ಚೀರಾಟ ಕೇಳಿದ ತಂದೆ ಹಾಗೂ ತಾತ ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದಾಗ, ಆತ ಕೊಳವೆಬಾವಿಯೊಳಗೆ ಬಿದ್ದಿರುವುದು ತಿಳಿದುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಎದುರು ಕಣ್ಣೀರಿಟ್ಟ ಶಾಸಕ ಪ್ರದೀಪ್ ಈಶ್ವರ್
ಪ್ರಸ್ತುತ ರಾಜ್ಯ ವಿಪತ್ತು ನಿರ್ವಹಣಾ ಪಡೆ, ಭಾರತೀಯ ಸೇನೆ ಹಾಗೂ ಸ್ಥಳೀಯ ಆಡಳಿತದ ತಂಡಗಳು ವಿಶೇಷ ಯಂತ್ರೋಪಕರಣಗಳ ಸಹಾಯದಿಂದ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲು ಪ್ರಯತ್ನಿಸುತ್ತಿವೆ. ಕೊಳವೆಬಾವಿಯ ಪಕ್ಕದಲ್ಲಿ ಸಮಾನಾಂತರವಾಗಿ ಗುಂಡಿ ತೋಡಿ ರಕ್ಷಣಾ ಕಾರ್ಯ ನಡೆಸುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಬೀದರ್, ಕಲಬುರ್ಗಿ ಕುಡಿಯುವ ನೀರು ಯೋಜನೆ: ಜಲಶಕ್ತಿ ಸಚಿವರಿಗೆ ಖಂಡ್ರೆ ಮನವಿ

ಘಟನಾ ಸ್ಥಳದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಬಾಲಕ ಸುರಕ್ಷಿತವಾಗಿ ಹೊರಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಬಾಲಕನ ಆರೋಗ್ಯ ಸ್ಥಿತಿಯ ಬಗ್ಗೆ ಅಧಿಕಾರಿಗಳು ಇನ್ನೂ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಇದನ್ನೂ ಓದಿ: ನಾವು ಪಾಕಿಸ್ತಾನದ ಭಾಗವಲ್ಲ, ಭಾರತದ ನೆರವು ಕೋರುತ್ತೇವೆ – ಮುನೀರ್ ವಿರುದ್ಧ PoK ಜನರ ಆಕ್ರೋಶ
