Connect with us

ಪಾಕ್ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ನಾಲ್ವರು ಕಾಶ್ಮೀರಿ ಕ್ರಿಕೆಟಿಗರ ಬಂಧನ

ಪಾಕ್ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ನಾಲ್ವರು ಕಾಶ್ಮೀರಿ ಕ್ರಿಕೆಟಿಗರ ಬಂಧನ

ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೋರ ಜಿಲ್ಲೆಯಲ್ಲಿ ಕ್ರಿಕೆಟ್ ಪಂದ್ಯಕ್ಕೆ ಮುನ್ನ ಪಾಕಿಸ್ತಾನದ ರಾಷ್ಟ್ರಗೀತೆಗೆ ಗೌರವ ಸೂಚಿಸಿದ ನಾಲ್ವರು ಕಾಶ್ಮೀರಿ ಕ್ರಿಕೆಟಿಗರನ್ನು ಬಂಧಿಸಲಾಗಿದೆ.

ಆಟಗಾರರು ಇಲ್ಲಿನ ಅರಿನ್ ಗ್ರಾಮದಲ್ಲಿ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೆ ವಿಡಿಯೋ ಚಿತ್ರೀಕರಣದ ವ್ಯವಸ್ಥೆ ಮಾಡಿದ್ದ ಪಂದ್ಯದ ಆಯೋಜಕರಿಗಾಗಿ ಪೊಲೀಸರು ಹುಡಕುತ್ತಿದ್ದಾರೆ.

 

2016ರಲ್ಲೂ ಕೂಡ ಗಂದೇರ್‍ಬಲ್ ಜಿಲ್ಲೆಯಲ್ಲಿ ಸ್ಥಳೀಯ ಕ್ರಿಕೆಟಿಗರು ಪಂದ್ಯಕ್ಕೂ ಮುನ್ನ ಸಾಲಾಗಿ ನಿಂತು ಪಾಕಿಸ್ತಾನದ ರಾಷ್ಟ್ರಗೀತೆಗೆ ಸಲ್ಯೂಟ್ ಮಾಡಿ ಗೌರವ ಸೂಚಿಸಿದ್ದರು. ಆಗ ಪೊಲೀಸರು ಕೆಲವು ಯುವಕರನ್ನು ಬಂಧಿಸಿ, ಪೋಷಕರು ಭರವಸೆ ನೀಡಿದ ನಂತರ ಬಿಟ್ಟು ಕಳಿಸಿದ್ದರು.

Advertisement
Advertisement