ಮಂಡ್ಯ: ಆಯುಧ ಪೂಜೆ (Ayudha Pooja) ಹಿನ್ನೆಲೆ ವಾಹನ ಪೂಜೆ ಮಾಡುತ್ತಿದ್ದ ವೇಳೆ ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮಂಡ್ಯ (Mandya) ಜಿಲ್ಲೆ ಮದ್ದೂರು (Maddur) ತಾಲೂಕಿನ ಯರಗನಹಳ್ಳಿಯಲ್ಲಿ ನಡೆದಿದೆ.
ಕಂದನ್ ಎಸ್.ಗೌಡ (3) ಮೃತ ಬಾಲಕ. ಸಂಪತ್ ಕುಟುಂಬಸ್ಥರಿಂದ ಆಯುಧ ಪೂಜೆ ಕಾರ್ಯ ನಡೆಯುತ್ತಿತ್ತು. ಪೂಜೆ ಬಳಿಕ ಸಂಪತ್ ಬಾಮೈದ ಸಂಜಯ್ ಕಾರನ್ನ ಬೇರೆ ಕಡೆ ನಿಲ್ಲಿಸಲು ಮುಂದಾಗಿದ್ದ. ಈ ವೇಳೆ ಸಂಪತ್ ಪುತ್ರ ಕಂದನ್ ಕಾರು ಹತ್ತಲು ಮುಂದಾಗಿದ್ದಾನೆ. ಅದನ್ನ ಗಮನಿಸದೇ ಸಂಜಯ್ ವಾಹನ ಚಲಾಯಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನನ್ನು ಕೊಂದು ಪದೇ ಪದೇ ಜಾಗ ಬದಲಿಸುತ್ತಿದ್ದ ಇನ್ಫ್ಲುಯೆನ್ಸರ್ ಕೊನೆಗೂ ಅರೆಸ್ಟ್
ಕಾರಿನ ಚಕ್ರಕ್ಕೆ ಸಿಲುಕಿದ ಬಾಲಕ ರಕ್ತಸ್ರಾವವಾಗಿ ತೀವ್ರಗಾಯಗೊಂಡಿದ್ದಾನೆ. ಮದ್ದೂರು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಬಾಲಕ ಸಾವನಪ್ಪಿದ್ದಾನೆ. ಆಯುಧ ಪೂಜೆ ಸಂಭ್ರಮದಲ್ಲಿದ್ದ ಕುಟುಂಬಸ್ಥರಿಗೆ ಆಘಾತ ಎದುರಾಗಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಭಾರತದ ಶತ್ರುಗಳನ್ನು ಗುರುತಿಸಿ, ಸದೆಬಡಿಯಿರಿ: ದಸರಾ ವೇಳೆ ಮೋದಿ ಕರೆ
