ನವದೆಹಲಿ: ಭಾರತದ(India) ಶತ್ರುಗಳನ್ನು ಗುರುತಿಸಿ ಅವರನ್ನು ಸದೆಬಡಿಯಲು ದೇಶದ ಜನರೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ.
ದೆಹಲಿಯ ಐಪಿ ಎಕ್ಸ್ಟೆನ್ಷನ್ ಉತ್ಸವ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅದ್ಧೂರಿ ವಿಜಯದಶಮಿ(Vijayadashami) ಆಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಭವ್ಯ ಸಾಂಸ್ಕೃತಿಕ ಪರಂಪರೆಯನ್ನು ಸ್ಮರಿಸಿದ ಪ್ರಧಾನಿ, ಶತಮಾನಗಳ ವಿದೇಶಿ ಆಕ್ರಮಣಗಳು ಮತ್ತು ಶೋಷಣೆಗಳ ಕರಾಳ ದಿನಗಳಿಂದ ಹೊರಬಂದು ಭಾರತವೀಗ ತನ್ನ ನೈಜ ಅಸ್ಮಿತೆಯನ್ನು ಮರಳಿ ಪಡೆಯುತ್ತಿದೆ ಎಂದು ಹೆಮ್ಮೆಯಿಂದ ನುಡಿದರು. ವಿಜಯದಶಮಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ ಅವರು, ಈ ಹಬ್ಬವು ಅಧರ್ಮದ ಮೇಲೆ ಧರ್ಮದ, ಅಸತ್ಯದ ಮೇಲೆ ಸತ್ಯದ ವಿಜಯವನ್ನು ಸಾರುತ್ತದೆ ಎಂದರು.
#WATCH | Delhi: At the #Dussehra celebrations, Prime Minister Narendra Modi says, “May our thoughts be in harmony; may all the institutions of the nation and all political parties stand united for the national interest. We must stand united to confront the enemies of the nation. Those who seek to harm the nation’s honor, those who divide society, and those who harbor a hatred for our culture—these are the enemies of the country. Today, on this auspicious occasion of Vijayadashami, we must reaffirm our resolve. We must identify the enemies of Maa Bharati and defeat them…”
(Source: DD News)
— ANI (@ANI) October 20, 2026
ನಮ್ಮ ಆಲೋಚನೆಗಳು ಸಾಮರಸ್ಯದಿಂದ ಕೂಡಿರಲಿ, ದೇಶದ ಎಲ್ಲಾ ಸಂಸ್ಥೆಗಳು ಹಾಗೂ ಪ್ರತಿಯೊಂದು ರಾಜಕೀಯ ಪಕ್ಷಗಳೂ ರಾಷ್ಟ್ರದ ಹಿತದೃಷ್ಟಿಯಿಂದ ಒಗ್ಗೂಡಿ ನಿಲ್ಲಲಿ. ದೇಶದ ಶತ್ರುಗಳನ್ನು ಎದುರಿಸಲು ನಾವೆಲ್ಲರೂ ಐಕ್ಯತೆಯನ್ನು ಕಾಪಾಡಿಕೊಳ್ಳಬೇಕು. ದೇಶದ ಗೌರವಕ್ಕೆ ಧಕ್ಕೆ ತರಲು ಯತ್ನಿಸುವವರು, ಸಮಾಜವನ್ನು ವಿಭಜಿಸುವವರು ಹಾಗೂ ನಮ್ಮ ಸಂಸ್ಕೃತಿಯನ್ನು ದ್ವೇಷಿಸುವವರೇ ಈ ದೇಶದ ನಿಜವಾದ ಶತ್ರುಗಳು ಎಂದು ನೇರವಾಗಿ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ದೀಪಾವಳಿವರೆಗೆ ಯಾವುದೇ ಪ್ರತಿಭಟನೆ ಇಲ್ಲ; ಕುಟುಂಬದೊಂದಿಗೆ ಹಬ್ಬ ಆಚರಿಸಿ: ಅಭಿಜಿತ್ ದೀಪ್ಕೆ
“ವಿಜಯದಶಮಿಯ ಈ ಪವಿತ್ರ ಹಾಗೂ ಶುಭ ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಸಂಕಲ್ಪವನ್ನು ಮತ್ತಷ್ಟು ದೃಢಪಡಿಸಿಕೊಳ್ಳಬೇಕು. ಭಾರತ ಮಾತೆಯ ಅಂತಹ ಎಲ್ಲಾ ಶತ್ರುಗಳನ್ನು ನಾವು ಗುರುತಿಸಿ, ಅವರನ್ನು ಸೋಲಿಸಲೇಬೇಕು” ಎಂದು ಪ್ರತಿಪಾದಿಸಿದರು.
ವಿಜಯದಶಮಿಯ ಈ ಪತ್ರ ದಿನದಂದು ನಾನು ಪ್ರಭು ಶ್ರೀರಾಮ, ಮಾತೆ ಜಾನಕಿ ಹಾಗೂ ಬಜರಂಗಬಲಿಯ ಪಾದಗಳಿಗೆ ನಮಿಸುತ್ತೇನೆ. ಸಮಸ್ತ ದೇಶವಾಸಿಗಳಿಗೂ ವಿಜಯದಶಮಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ಇಂದು ದೇಶದ ಹಳ್ಳಿ-ನಗರಗಳ ಪ್ರತಿಯೊಂದು ಮೂಲೆಯಲ್ಲೂ ಶ್ರೀರಾಮನ ಭಕ್ತಿಯ ಚೈತನ್ಯ ತುಂಬಿ ತುಳುಕುತ್ತಿದೆ. ಇಡೀ ರಾಷ್ಟ್ರವೇ ರಾಮಲೀಲೆಯ ಪಾವಿತ್ರ್ಯದಲ್ಲಿ ಮಿಂದೆದ್ದಿದೆ ಎಂದು ಪ್ರಧಾನಿ ಬಣ್ಣಿಸಿದರು.
VIDEO | Delhi: PM Narendra Modi (@narendramodi) attends Vijayadashami celebrations at Indraprastha Ramleela Ground.
He says, “Lord Shri Ram faced numerous difficulties throughout his life, yet he never abandoned the path of truth and righteousness. His character was such that, Lord Ram’s face neither lit up with joy at the prospect of being crowned king nor became sorrowful at the prospect of going into exile. Even while enduring every hardship, he upheld dharma and established the truth. When Lord Ram went into the forest, he embraced Nishadraj and treated Mata Shabari with respect. He set exemplary standards of compassion, kindness, love, and harmony. And when Lord Ram returned and became the king of Ayodhya, he established Ram Rajya—a model of governance that is still regarded as a benchmark for good governance today. Ram Rajya means a system of governance where no one is discriminated against, everyone receives justice, everyone has equal opportunities, and the purpose of power is not merely to rule, but to serve the welfare of the people.”
(Source: PM Narendra Modi YT)
#PMModi #Vijayadashami
— Press Trust of India (@PTI_News) October 20, 2026
ರಾಮರಾಜ್ಯದ ಪರಿಕಲ್ಪನೆಯನ್ನು ವಿವರಿಸಿದ ಅವರು, “ಯಾರಲ್ಲೂ ತಾರತಮ್ಯವಿಲ್ಲದ, ಎಲ್ಲರಿಗೂ ನ್ಯಾಯ ಸಿಗುವ, ಸಮಾನ ಅವಕಾಶಗಳು ದೊರಕುವ ಹಾಗೂ ಅಧಿಕಾರವೆಂಬುದು ಆಡಳಿತ ನಡೆಸುವುದಕ್ಕಲ್ಲ, ಬದಲಾಗಿ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ವ್ಯವಸ್ಥೆಯೇ ನಿಜವಾದ ರಾಮರಾಜ್ಯ. ಇದುವೇ ಪ್ರಭು ಶ್ರೀರಾಮನ ಆದರ್ಶ. ಆದ್ದರಿಂದ ನಾವೆಲ್ಲರೂ ಜನರನ್ನು ‘ಜನಾರ್ದನ’ (ದೇವರ ರೂಪ) ಎಂದು ಭಾವಿಸಬೇಕು ಮತ್ತು ‘ನಾಗರಿಕ ದೇವೋ ಭವ’ (ಪ್ರತಿಯೊಬ್ಬ ನಾಗರಿಕನೂ ದೇವರ ಸ್ವರೂಪ) ಎಂಬ ತತ್ವದೊಂದಿಗೆ ಸದಾ ಮುನ್ನಡೆಯಬೇಕು” ಎಂದು ಕರೆ ನೀಡಿದರು.
ದೇಶಾದ್ಯಂತ ನಡೆಯುವ ರಾಮಲೀಲಾ ಪ್ರದರ್ಶನಗಳು ಶ್ರೀರಾಮನ ಆದರ್ಶಗಳನ್ನು ಜೀವಂತವಾಗಿರಿಸಿವೆ ಎಂದ ಪ್ರಧಾನಿ, “ರಾಮಲೀಲೆಯು ದಬ್ಬಾಳಿಕೆ ಮತ್ತು ಭಯೋತ್ಪಾದನೆಯ ಅಂತ್ಯದ ಘೋಷಣೆಯಾಗಿದೆ. ಅಲ್ಲದೆ, ಸುಳ್ಳಿನ ಮೇಲೆ ಶಾಶ್ವತ ಸತ್ಯದ ಗೆಲುವಿಗೆ ಸಾಕ್ಷಿಯಾಗಿದೆ” ಎಂದು ತಿಳಿಸಿದರು.
ಶ್ರೀರಾಮನ ಜೀವನದ ಮಹತ್ವವನ್ನು ಕೊಂಡಾಡಿದ ಮೋದಿ, “ಈ ದೇಶ, ಸಂಸ್ಕೃತಿ ಮತ್ತು ನಮ್ಮ ಪೂರ್ವಜರು ಸಹಸ್ರಾರು ವರ್ಷಗಳಿಂದ ಪ್ರಭು ಶ್ರೀರಾಮನನ್ನು ಆರಾಧಿಸುತ್ತಾ ಬಂದಿದ್ದಾರೆ. ಈ ಅಪಾರ ನಂಬಿಕೆ ಕೇವಲ ರಾಕ್ಷಸ ರಾಜ ರಾವಣನನ್ನು ಶ್ರೀರಾಮ ಸಂಹರಿಸಿದ ಕಾರಣಕ್ಕಷ್ಟೇ ಅಲ್ಲ; ಮಾನವೀಯತೆಯ ಇತಿಹಾಸದಲ್ಲೇ ಅತ್ಯುನ್ನತ ಹಾಗೂ ಅಪ್ರತಿಮವಾದ ಶ್ರೇಷ್ಠ ಆದರ್ಶಗಳನ್ನು ಶ್ರೀರಾಮ ನಮಗೆ ಕೊಡುಗೆಯಾಗಿ ನೀಡಿದ್ದಾನೆ” ಎಂದು ಅಭಿಪ್ರಾಯಪಟ್ಟರು.
