ರಿಯಾಧ್: ಸೌದಿ ಅರಾಮ್ಕೊ ತೈಲ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ (Saudi Aramco helicopter Crash) ಕನಿಷ್ಠ 14 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸೌದಿ ಅರೇಬಿಯಾದ ರಾಸ್ ತನುರಾ ನಗರದಲ್ಲಿ (Ras Tanura City) ಇಂದು (ಭಾನುವಾರ) ದುರಂತ ಸಂಭವಿಸಿದೆ. ಹೆಲಿಕಾಪ್ಟರ್ ಪತನಗೊಂಡ ನೈಜ ಸಮಯ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಜೊತೆಗೆ ಮೃತರ ಕುರಿತು ಅಧಿಕಾರಿಗಳು ಯಾವುದೇ ಮಾಹಿತಿಯನ್ನ ಬಹಿರಂಗಪಡಿಸಿಲ್ಲ.
ಅಪಘಾತಕ್ಕೀಡಾಗಿ ಪತನಗೊಂಡ ವಿಮಾನ ಸೌದಿ ಅರಾಮ್ಕೋ ತೈಲ ಕಂಪನಿಗೆ ಸೇರಿದ್ದು, ಮೃತರೆಲ್ಲರೂ ಸೌದಿಯ ನಾಗರಿಕರೇ ಎಂದು ಖಚಿತವಾಗಿದೆ. ಇದನ್ನೂ ಓದಿ: ಫ್ರಾನ್ಸ್‌ನಲ್ಲಿ ಸಣ್ಣ ವಿಮಾನ ಪತನ – 11 ಮಂದಿ ಸಾವು

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸಂಬಂಧಪಟ್ಟ ಅಧಿಕಾರಿಗಳು, ಅಪಘಾತಕ್ಕೆ ನಿಖರ ಕಾರಣ ಏನೆಂಬುದನ್ನು ಪತ್ತೆಮಾಡುತ್ತಿದ್ದಾರೆ. ಈಗಾಗಲೇ ತನಿಖೆ ಕೂಡ ಶುರು ಮಾಡಿದ್ದಾರೆ. ಈ ಮಧ್ಯೆ ಸೌಧಿ ಇಂಧನ ಸಂಚಿವಾಲಯವು ಮೃತರಿಗೆ ಸಂತಾಪ ಸೂಚಿಸಿದೆ.
ದೈತ್ಯ ತೈಲ ಕಂಪನಿ ಅರಾಮ್ಕೊ
ಅರಾಮ್ಕೊ ನಗರವು ವಿಶ್ವದ ಅತಿದೊಡ್ಡ ಕಚ್ಚಾ ತೈಲ ರಫ್ತು ಟರ್ಮಿನಲ್‌ಗಳಲ್ಲಿ ಒಂದಾಗಿದೆ. ಸೌದಿ ಅರಾಮ್ಕೊ (ಆಗಿನ CASOC) 1934 ರಲ್ಲಿ ತನ್ನ ಮೊದಲ ವೈಮಾನಿಕ ಸಮೀಕ್ಷೆ ಮತ್ತು ನಕ್ಷೆ ತಯಾರಿಕೆಯ ಕಾರ್ಯಾಚರಣೆ ಪ್ರಾರಂಭಿಸಿತು. ಆಗಿನಿಂದ ವಿಮಾನಗಳನ್ನು ಬಳಸುತ್ತಿದೆ. ಸೌದಿ ಅರೇಬಿಯಾದ ವಿಶಾಲವಾದ ಮರುಭೂಮಿಯಲ್ಲಿ ತೈಲ ನಿಕ್ಷೇಪಗಳನ್ನ ಹುಡುಕಲು ಮತ್ತು ಭೂಪ್ರದೇಶದ ನಕ್ಷೆಗಳನ್ನು ಸಿದ್ಧಪಡಿಸಲು ಕಂಪನಿಯು ಈ ವ್ಯವಸ್ಥೆಯನ್ನು ಬಳಸಿಕೊಂಡಿತು.

ಅರಾಮ್ಕೊ ವಾಯುಯಾನ ವಿಭಾಗವನ್ನ 2023 ರಲ್ಲಿ ಮೀಸಲಾದ ಅಂಗಸಂಸ್ಥೆಯಾಗಿ ಬೇರ್ಪಡಿಸಲಾಯಿತು. ನಂತರ ಅದಕ್ಕೆ ಅಲೌಲಾ ಏವಿಯೇಷನ್ ಎಂದು ಮರುನಾಮಕರಣ ಮಾಡಲಾಯಿತು. ಇದನ್ನೂ ಓದಿ: Ram Temple Theft| ಆರೋಪಿಗಳ ಆಸ್ತಿ 100 ಪಟ್ಟು ಹೆಚ್ಚಳ; ಡಿಲೀಟ್ ಆಯ್ತು ಮೊಬೈಲ್ ಡೇಟಾ
ಇಂದು ಅರಾಮ್ಕೊ ಕಂಪನಿಯು ದೇಶಾದ್ಯಂತ ಕಡಲಾಚೆ ಕಾರ್ಯಾಚರಣೆಗಳು, ವೈದ್ಯಕೀಯ ಸ್ಥಳಾಂತರಿಸುವಿಕೆ ಮತ್ತು ಲಾಜಿಸ್ಟಿಕ್ಸ್ ಸೇವೆ ಬೆಂಬಲಿಸಲು 60 ಕ್ಕೂ ಹೆಚ್ಚು ವಿಮಾನಗಳನ್ನ ನಿರ್ವಹಿಸುತ್ತಿದೆ.

