ಪ್ಯಾರಿಸ್: ಫ್ರಾನ್ಸ್‌ನ (France) ಪೂರ್ವ ಭಾಗದ ಟೊಂಬ್ಲೇನ್ (Tomblaine) ನಗರದಲ್ಲಿ ಭಾನುವಾರ ಬೆಳಗ್ಗೆ ಭೀಕರ ವಿಮಾನ ದುರಂತ ಸಂಭವಿಸಿದ್ದು, ಸಣ್ಣ ನಾಗರಿಕ ವಿಮಾನ ಪತನಗೊಂಡ ಪರಿಣಾಮ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ.
ನ್ಯಾನ್ಸಿ-ಎಸ್ಸೆ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ್ದ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಹಾಗೂ ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಇದನ್ನೂ ಓದಿ: ಕೋರ್ಟ್ ಆರ್ಡರ್ ತಂದು ಮನೆ ಮನೆಗೆ ತ್ರಿಶೂಲ: ನಿರ್ಬಂಧ ಹೇರಿದ್ಧಕ್ಕೆ ಕಾಂಗ್ರೆಸ್ ವಿರುದ್ಧ ಮುತಾಲಿಕ್ ಕಿಡಿ
ಘಟನೆ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಹಾಗೂ ವೈದ್ಯಕೀಯ ತುರ್ತು ಸೇವೆಗಳು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಮಿಯರ್ಥ್-ಎ-ಮೊಸೆಲ್ ಪ್ರಾಂತ್ಯದ ಪ್ರಿಫೆಕ್ಟ್ ಇವ್ಸ್ ಸೆಗಿಟ್ ಅವರ ನೇತೃತ್ವದಲ್ಲಿ ಇಲಾಖೆಯ ಕಾರ್ಯಾಚರಣಾ ಕೇಂದ್ರ ಸಕ್ರಿಯಗೊಳಿಸಲಾಗಿದ್ದು, ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ. ಇದನ್ನೂ ಓದಿ: ಕರಾಚಿ ಭಯೋತ್ಪಾದಕ ದಾಳಿ ಹಿಂದೆ ನಮ್ಮ ಪಾತ್ರವಿಲ್ಲ – ಪಾಕ್ ಆರೋಪ ತಿರಸ್ಕರಿಸಿದ ಭಾರತ
ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗದಂತೆ ಸಾಲ್ವಡೋರ್ ಅಲೆಂಡೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಸಾರ್ವಜನಿಕರು ತೆರಳದಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕೊಡಗಿಗೆ ಮತ್ತೊಂದು ಗರಿ – ತಲೆ ಎತ್ತುತ್ತಿದೆ ರಾಷ್ಟ್ರಮಟ್ಟದ ಕ್ರೀಡಾ ತರಬೇತಿ ಕೇಂದ್ರ
ವಿಮಾನ ಪತನಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷವೇ ಅಥವಾ ಬೇರೆ ಕಾರಣವೇ ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಅಧಿಕಾರಿಗಳು ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನನ್ನ ರಾಜಕೀಯ ಮುಗಿಯಿತು.. ನೀವು ಮೈ ಮರೆತರೆ ನಿಮ್ಮ ರಾಜಕೀಯದ ಮಾರಣಹೋಮ ನಿಶ್ಚಿತ: ಸಿದ್ದರಾಮಯ್ಯ
