Bengaluru CityCoronaDistrictsKarnatakaLatestMain Post

ಒಟ್ಟು 109 – ಬೆಂಗ್ಳೂರಲ್ಲಿ 95 ಕೇಸ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆಯಲ್ಲಿ ಏರಿಳಿತ ಕಾಣಿಸುತ್ತಿದೆ. ಭಾನುವಾರ 126 ಕೇಸ್ ದಾಖಲಾಗಿ, ಸೋಮವಾರ 98 ಕೇಸ್‌ಗಳಿಗೆ ಇಳಿದಿತ್ತು. ಇಂದು ರಾಜ್ಯದಲ್ಲಿ ಒಟ್ಟು 109 ಕೇಸ್‌ಗಳು ಪತ್ತೆಯಾಗಿ, ಮತ್ತೆ ಮೂರಂಕಿಗೆ ಏರಿಕೆಯಾಗಿದೆ.

ಇಂದು 109 ಕೇಸ್ ದಾಖಲಾಗುವ ಮೂಲಕ ನಿನ್ನೆಗಿಂತ 11 ಹೆಚ್ಚು ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಇಂದು 95 ಪಾಸಿಟಿವ್ ಕೇಸ್‌ಗಳು ವರದಿಯಾಗಿದ್ದು, ಇಂದು 147 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ.0.78 ದಾಖಲಾಗಿದ್ದು, ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,802ಕ್ಕೆ ಇಳಿಕೆಯಾಗಿದೆ. ಇಂದು ಕೂಡ ಶೂನ್ಯ ಮರಣ ಮುಂದುವರಿದಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 40,063 ಮರಣ ಪ್ರಕರಣ ಪತ್ತೆಯಾಗಿ ಕೆಲದಿನಗಳಿಂದ ಸ್ಥಿರವಾಗಿದೆ. ಇದನ್ನೂ ಓದಿ: ಸದ್ಯದಲ್ಲಿಯೇ ಬೆಂಗಳೂರಿನಲ್ಲಿ ಟೋಯಿಂಗ್ ಆರಂಭ?

ಈವರೆಗೆ ರಾಜ್ಯದಲ್ಲಿ ಒಟ್ಟು 39,49,882 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,07,975 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 56,473 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 13,972 ಸ್ಯಾಂಪಲ್ (ಆರ್‌ಟಿ ಪಿಸಿಆರ್ 8,317 + 5,655 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬೆಂಗಳೂರು ನಗರ 95, ಬೆಂಗಳೂರು ಗ್ರಾಮಾಂತರ 2, ಚಿಕ್ಕಮಗಳೂರು 3, ದಕ್ಷಿಣಕನ್ನಡ 6, ಹಾಸನ, ಉಡುಪಿ ಹಾಗೂ ವಿಜಯಪುರದಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.

Leave a Reply

Your email address will not be published.

Back to top button