ಬೆಳಗಾವಿ: ಬಿಸಾಕಿದ್ದ ಊಟ ತಿಂದು 10 ಕುರಿ (Sheep) ಸಾವನ್ನಪ್ಪಿದ ಘಟನೆ ಬೆಳಗಾವಿ ಸುವರ್ಣ ಸೌಧದ ಬಳಿಯ ಕೊಂಡಸಕೊಪ್ಪದ ಬಳಿ ನಡೆದಿದೆ. ನಿಂಗಪ್ಪ ದೆಮಣ್ಣವರ, ಸುನೀಲ್ ದೆಮಣ್ಣವರ ಎಂಬವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ.
ಕಳೆದ ನಾಲ್ಕು ದಿನಗಳ ಹಿಂದೆ ಬಸ್ತವಾಡ ಗ್ರಾಮದ ಬಳಿ ನಡೆದಿದ್ದ ಪಂಚಮಸಾಲಿ ಸಮಾವೇಶದಲ್ಲಿ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನರು ಉಳಿದ ಅನ್ನ, ರೊಟ್ಟಿ ಸ್ಥಳದಲ್ಲೇ ಎಸೆದು ಹೋಗಿದ್ದರು. ಇದನ್ನೂ ಓದಿ: ಬಿಸ್ಕೆಟ್ ರೀತಿ ಜನರಿಗೆ ಬಿಂದಿಗೆ ಎಸೆದ ಜೆಡಿಎಸ್ ನಾಯಕರು
Advertisement
Advertisement
ಕುರಿ ಮೇಯಲು ಹೋದಾಗ ಈ ಅನ್ನ ಹಾಗೂ ರೊಟ್ಟಿ ತಿಂದಿವೆ. ಊಟವನ್ನ ತಿಂದು 70 ಕುರಿಗಳು ಅಸ್ವಸ್ಥಗೊಂಡು ಅದರಲ್ಲಿ 10 ಕುರಿ ಸಾವನ್ನಪ್ಪಿವೆ. ಇನ್ನು ಎರಡು ಕುರಿಗಳ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಕೆಕೆ ಕೊಪ್ಪದ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಭೇಟಿ ನೀಡಿ, ಕುರಿಗಳಿಗೆ ಸಲೈನ್ ಹಚ್ಚಿ ಚಿಕಿತ್ಸೆ ನೀಡುತಿದ್ದು, ಇಂಜೆಕ್ಷನ್ ಕೂಡಾ ಕೊಟ್ಟು ಉಪಚಾರ ಮಾಡುತಿದ್ದಾರೆ.
Advertisement
Advertisement
70 ಕುರಿ ಸದ್ಯಕ್ಕೆ ಬಚಾವ್ ಆಗಿವೆ. ಇನ್ನು 40 ಕುರಿಗಳಿಗೆ ಚಿಕಿತ್ಸೆ ಮುಂದುವರಿದಿದೆ. ವೈದ್ಯರು ಹೇಳುವಂತೆ ನಾಳೆ ಬೆಳಗಿನ ವರೆಗೆ ಚಿಕಿತ್ಸೆ ಮುಂದುವರಿಯಲಿದ್ದು, ಅದರ ನಂತರ ಕುರಿಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ ಎಂದಿದ್ದಾರೆ. ಇದನ್ನೂ ಓದಿ: ಯಾರೂ ಪ್ಯಾನಿಕ್ ಆಗ್ಬೇಡಿ, ಸದ್ಯಕ್ಕೆ ಯಾವುದೇ ರೀತಿಯ ನಿರ್ಬಂಧ ಇರಲ್ಲ: ಆರ್.ಅಶೋಕ್