ಬೆಳಗಾವಿ: ಕೋವಿಡ್ (COVID 19) ನಿಂದ ಯಾರೂ ಕೂಡ ಪ್ಯಾನಿಕ್ ಆಗೋದು ಬೇಡ. ಸದ್ಯಕ್ಕೆ ಯಾವುದೇ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ. ಜನ ಸಹಕಾರ ನೀಡಿದ್ರೆ ಕೋವಿಡ್ ತಡೆಯಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ (R Ashok) ಹೇಳಿದರು.
Advertisement
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ನಾನು, ಸುಧಾಕರ್ ಸಭೆ ಮಾಡುತ್ತಿದ್ದೇವೆ. ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಭೆ ಮಾಡುತ್ತಿದ್ದೇವೆ. ಯಾರೂ ಕೂಡ ಪ್ಯಾನಿಕ್ ಆಗೋದು ಬೇಡ. ಸದ್ಯಕ್ಕೆ ಯಾವುದೇ ರೀತಿಯ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಭಾರತಕ್ಕೆ ಮರಳಿದ ವ್ಯಕ್ತಿಯಲ್ಲಿ ಚೀನಿ ವೈರಸ್?
Advertisement
Advertisement
ಜನ ಸಹಕಾರ ನೀಡಿದ್ರೆ ಕೋವಿಡ್ ತಡೆಯಬಹುದು. ಮಾಸ್ಕ್ (Mask), ಸ್ಯಾನಿಟೈಸರ್ (Sanitizer) ಮುಖಾಂತರ ಕೋವಿಡ್ ತಡೆಯಬಹುದು. ಅದಕ್ಕೆ ಸಂಬಂಧಿಸಿದಂತೆ ಇಂದು ಸಭೆ ನಡೆಸಲಾಗುತ್ತಿದೆ. ಹೊಸವರ್ಷ ಬರುತ್ತಿದೆ, ಅದಕ್ಕೆ ಸಂಬಂಧಿಸಿದಂತೆ ಸಭೆ ಮಾಡಿ ಮಾರ್ಗಸೂಚಿ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.