Thursday, 21st June 2018

6 days ago

30 ಮಂದಿ ಪ್ರಯಾಣಿಕರಿದ್ದ KSRTC ಸ್ಲೀಪರ್ ಬಸ್ ಪಲ್ಟಿ!

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಸ್ಲೀಪರ್ ಕೋಚ್ ಬಸ್ಸೊಂದು ಹಳ್ಳಕ್ಕೆ ಪಲ್ಟಿಯಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಗುಡ್ಡೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುರುವಾರ ರಾತ್ರಿ ಬೆಂಗಳೂರಿನಿಂದ ಹೊರಟ ಬಸ್, ಕೊಪ್ಪ-ಶೃಂಗೇರಿ ಮಧ್ಯೆಯ ಗುಡ್ಡೆಹಳ್ಳಿ ಎಂಬ ಗ್ರಾಮದಲ್ಲಿ ಪಲ್ಟಿಯಾಗಿದೆ. ಮುಂಜಾನೆ ಸುಮಾರು 6 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವತಾಶ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಸ್‍ನಲ್ಲಿ ಸುಮಾರು 25-30 ಜನರಿದ್ದು, 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಕೊಪ್ಪ ಹಾಗೂ ಎನ್.ಆರ್.ಪುರ ತಾಲೂಕು […]

6 days ago

ಚಿಕ್ಕಮಗ್ಳೂರು, ಮಡಿಕೇರಿಯಲ್ಲಿ ತಗ್ಗಿದ ಮಳೆ- ಇಂದಿನಿಂದ ಚಾರ್ಮಾಡಿ ಘಾಟ್ ಓಪನ್

ಚಿಕ್ಕಮಗಳೂರು/ಮಡಿಕೇರಿ: ಚಿಕ್ಕಮಗಳೂರು, ಹಾಸನ ಹಾಗೂ ಮಡಿಕೇರಿಯಲ್ಲಿ ಸತತ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಇಂದು ಇಳಿಮುಖವಾಗಿದೆ. ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಮೂಡಿಗೆರೆ ನಾಲ್ಕು ತಾಲೂಕಿನಲ್ಲೂ ನಿನ್ನೆ ಸಂಜೆಯಿಂದಲೇ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಹೀಗಾಗಿ ಕಾಫಿನಾಡಿನ ಮಲೆನಾಡು ಭಾಗ ಸಹಜ ಸ್ಥಿತಿಯತ್ತ ಮರಳಿದೆ. ತುಂಗಾ, ಭದ್ರಾ ನದಿ ಮೈದುಂಬಿ ಹರಿಯುತ್ತಿವೆ. ಇನ್ನು ಜಲಾವೃತವಾಗಿದ್ದ ರಸ್ತೆಗಳಲ್ಲಿ ಸಂಚಾರ...

ಚಾರ್ಮಾಡಿಯಲ್ಲಿ ಸಂಚಾರ ಬಂದ್- ಕುದುರೆಮುಖ ಸಂಚಾರ ನಿರ್ಬಂಧ ತೆರವು

1 week ago

ಚಿಕ್ಕಮಗಳೂರು: ರಾತ್ರಿ ಒಂಬತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆವರೆಗೆ ಸಂಚಾರಕ್ಕೆ ನಿರ್ಬಂಧವಿದ್ದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಮುಖ ಮಾರ್ಗದಲ್ಲಿ ಇದೀಗ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಶಿರಾಡಿ ಘಾಟ್ ಬಂದ್ ಆದ ಮೇಲೆ ಕಳೆದ 4 ತಿಂಗಳಿನಿಂದ ಕುದುರೆಮುಖದಿಂದ ಮಂಗಳೂರಿಗೆ...

ಮಲೆನಾಡು, ಕರಾವಳಿಯಲ್ಲಿ ಬಿರುಸುಗೊಂಡ ಮಳೆರಾಯ- ಎಲ್ಲಿ ಎಷ್ಟು ಮಿಮೀ ಮಳೆಯಾಗಿದೆ?

1 week ago

ಬೆಂಗಳೂರು:ರಾಜ್ಯದಲ್ಲಿ ಮುಂಗಾರು ಮಳೆ ಇನ್ನಷ್ಟು ಬಿರುಸುಗೊಂಡಿದ್ದು ಇವತ್ತೂ ಕೂಡ ಮಳೆರಾಯನ ಆರ್ಭಟ ಮುಂದುವರೆದಿದೆ. ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯಕ್ಕೆ ವಾಡಿಕೆಯಂತೆ ಆರು ಮೀಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 12 ಮಿಲಿ ಮೀಟರ್...

ಚಾರ್ಮಾಡಿ ಘಾಟ್‍ನಲ್ಲಿ ಮಣ್ಣು ಕುಸಿತ- ವಾಹನ ಸಂಚಾರ ಬಂದ್

1 week ago

ಚಿಕ್ಕಮಗಳೂರು: ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲಾದ್ಯಂತ ಮಳೆಯ ಅಬ್ಬರ ಮುಂದುವರೆದಿದೆ. ಚಾರ್ಮಾಡಿ ಘಾಟ್‍ನಲ್ಲಿ ರಸ್ತೆಗೆ ಅಡ್ಡಲಾಗಿ ಮಣ್ಣು ಕುಸಿದು ಬಿದ್ದಿದ್ದು, ವಾಹನ ಸಂಚಾರ ಬಂದ್ ಆಗಿದೆ. ಚಾರ್ಮಾಡಿ ಘಾಟ್‍ನಲ್ಲಿ ರಾತ್ರಿಯಿಡೀ ಮಣ್ಣು ತೆರವು ಕಾರ್ಯಾಚರಣೆ ನಡೆಯಿತು. ಹಾಗಾಗಿ ಎಸ್‍ಕೆ ಬಾರ್ಡರ್, ಕುದುರೆಮುಖ...

ಅಪಘಾತಗೊಂಡಿದ್ದ ಆಲ್ಟೋ ಕಾರು ನೋಡಲು ಹೋಗಿ ಲಾರಿಗೆ ಸಫಾರಿ ಕಾರು ಡಿಕ್ಕಿ

1 week ago

ಚಿಕ್ಕಮಗಳೂರು: ಅಪಘಾತವಾಗಿ ನಿಂತಿದ್ದ ಕಾರನ್ನ ನೋಡಲು ಹೋಗಿ ಸಫಾರಿ ಕಾರೊಂದು ಲಾರಿಗೆ ಡಿಕ್ಕಿ ಹೊಡೆದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾರ್ಗಲ್ ಗ್ರಾಮದಲ್ಲಿ ನಡೆದಿದೆ. ಆಲ್ಟೋ ಕಾರೊಂದು ಇಂದು ಬೆಳಗ್ಗೆ ಅಪಘಾತವಾಗಿ ರಸ್ತೆ ಬದಿ ನಿಂತಿತ್ತು. ಮಂಗಳೂರಿನಿಂದ ಬರುತ್ತಿದ್ದ ಸಫಾರಿ...

ಮೈದುಂಬಿ ಹರಿಯುತ್ತಿದೆ ಕಲ್ಲತ್ತಿಗರಿ ಫಾಲ್ಸ್

2 weeks ago

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು ಅಪಾಯದ ಮಟ್ಟ ಮೀರಿದೆ. ಕೆಮ್ಮಣ್ಣುಗುಂಡಿ, ದತ್ತಪೀಠ, ಬಾಬಾಬುಡನ್ ಗಿರಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ದಶಕಗಳ ಬಳಿಕ ಕಲ್ಲತ್ತಿಗರಿ ಫಾಲ್ಸ್‍ನಲ್ಲಿ ಭಾರೀ...

ಎಚ್‍ಡಿಡಿ ಪಾದಪೂಜೆ ಮಾಡಿದ್ದ ವಿನಯ್ ಗುರೂಜಿ 6 ತಿಂಗ್ಳು ಭಕ್ತರಿಗೆ ದರ್ಶನ ನೀಡಲ್ಲ!

2 weeks ago

ಚಿಕ್ಕಮಗಳೂರು: ನಡೆದಾಡುವ ದೇವರೆಂದೇ ಎಂದೇ ಖ್ಯಾತಿಯಾಗಿರೋ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆಯ ಸ್ವರ್ಣ ಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಇನ್ನು ಆರು ತಿಂಗಳು ಭಕ್ತರಿಗೆ ದರ್ಶನ ನೀಡುವುದಿಲ್ಲ. ಕಳೆದ ಎಂಟು ವರ್ಷದಿಂದ ಪ್ರತಿ ಗುರುವಾರ ಭಕ್ತರಿಗೆ ದರ್ಶನ ನೀಡ್ತಿದ್ದ...