Connect with us

Crime

ಕಿಸ್ ಮಾಡಿಲ್ಲವೆಂದು ಗೆಳತಿಯ ಕೊಂದು ದೇಹವನ್ನು ಎಲೆಗಳಿಂದ ಮುಚ್ಚಿಟ್ಟ

Published

on

ಭೋಪಾಲ್: ಕಿಸ್ ಮಾಡಲು ನಿರಾಕರಿಸಿದ 18 ವರ್ಷದ ಗೆಳತಿಯನ್ನು ಆಕೆಯ ಗೆಳೆಯನೇ ಕೊಲೆ ಮಾಡಿರುವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ಈ ಘಟನೆ ಮಧ್ಯಪ್ರದೇಶದ ಜಬಲಾಪುರ ಜಿಲ್ಲೆಯ ಬಿಜಾಪುರಿ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು 19 ವರ್ಷದ ರಮಣ್ ಸಿಂಗ್ ಎಂದು ಗುರುತಿಸಲಾಗಿದೆ. ಮೃತ ದುರ್ದೈವಿ ವಿದ್ಯಾರ್ಥಿನಿ ಕುತ್ರಗೊಂಡಿ ಪೊಲೀಸ್ ಠಾಣಾ ವ್ಯಾಪ್ತಿ ನಿವಾಸಿಯಾಗಿದ್ದಾಳೆ.

ವಿದ್ಯಾರ್ಥಿನಿಯ ಶವದ ಪಕ್ಕದಲ್ಲೇ ಆಕೆಯ ಬ್ಯಾಗ್ ಪತ್ತೆಯಾಗಿದೆ. ಈಕೆಯ ಶವವನ್ನು ವೈದ್ಯಕೀಯ ಪರೀಕ್ಷೆಗೆಂದು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ತಲೆಗೆ ಗಾಯಗಳಾಗಿರುವುದು ವೈದ್ಯಕೀಯ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿರುವ ವೇಳೆ ಆರೋಪಿಯ ಗೆಳೆಯರು, ಸಂಬಂಧಿಕರನ್ನು ವಿಚಾರಿಸಿದ್ದಾರೆ. ಆದರೆ ಆರೋಪಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಬಳಿಕ ಆರೋಪಿಯನ್ನೇ ವಿಚಾರಿಸಿದಾಗ ವಿದ್ಯಾರ್ಥಿನಿ ನನ್ನ ಕ್ಲೋಸ್ ಫ್ರೆಂಡ್ ಎಂದು ನಡೆದ ಘಟನೆಯನ್ನು ವಿವರಿಸಿದ್ದಾನೆ.

ಕ್ಲಾಸ್ ಮುಗಿದ ಬಳಿಕ ಇಬ್ಬರು ಪಕ್ಕದ ಕಾಡಿಗೆ ತೆರಳಿದ್ದಾರೆ. ಹೀಗೆ ಹೋದವರು ಕಾಲುವೆಯ ಬಳಿ ಇಬ್ಬರು ಕುಳಿತು ಮಾತನಾಡಿದ್ದಾರೆ. ಈ ವೇಳೆ ಆರೋಪಿಯು ವಿದ್ಯಾರ್ಥಿನಿಗೆ ಕಿಸ್ ಮಾಡಲು ಯತ್ನಿಸಿದ್ದು, ಇದನ್ನು ನಿರಾಕರಿಸಿ ವಿದ್ಯಾರ್ಥಿನಿ ಆತನನ್ನು ದೂರ ತಳ್ಳಿದ್ದಾಳೆ. ಇದರಿಂದ ಸಿಟ್ಟಾದ ಆರೋಪಿ ಆಕೆಯನ್ನೇ ಬಂಡೆಕಲ್ಲಿನತ್ತ ದೂಡಿದ್ದಾನೆ. ಪರಿಣಾಮ ತಲೆಗೆ ಏಟು ಬಿದ್ದು, ಯುವತಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಗೆಳತಿ ಹೀಗೆ ಬಿದ್ದಿದ್ದರಿಂದ ಬೆದರಿದ ಆರೋಪಿ, ಆಕೆಯ ದೇಹವನ್ನು ಎಲೆಗಳಿಂದ ಮುಚ್ಚಿ ಅಲ್ಲಿಂದ ಮನೆಗೆ ಓಡಿದ್ದಾನೆ.

ಸದ್ಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Click to comment

Leave a Reply

Your email address will not be published. Required fields are marked *