ಲಕ್ನೋ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ 2ನೇ ಬಾರಿ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದರು.
Advertisement
ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಯೋಗಿ ಅಧಿಕಾರದ ಗದ್ದುಗೆ ಏರಿದರು. ಇವರೊಂದಿಗೆ 52 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಯೋಗಿ ಸಂಪುಟದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿದ್ದು, ಕೇಶವ್ ಮೌರ್ಯ, ಬ್ರಜೇಶ್ ಪಾಠಕ್‍ಗೆ ಡಿಸಿಎಂ ಪಟ್ಟ ಕಟ್ಟಲಾಗಿದೆ. ಒಂದೇ ಹಂತದಲ್ಲಿ ಸಚಿವ ಸಂಪುಟ ರಚನೆ ಸಾಧ್ಯತೆ ಇದ್ದು, ಹಲವು ಸಚಿವರಿಗೆ ಈ ಬಾರಿ ಸಂಪುಟದಿಂದ ಕೊಕ್ ನೀಡಲಾಗಿದೆ. ಇದನ್ನೂ ಓದಿ: ಏನೇ ಆದರೂ ರಾಜೀನಾಮೆ ನೀಡಲ್ಲ: ವಿರೋಧಿಗಳಿಗೆ ಇಮ್ರಾನ್ ಖಾನ್ ಸೆಡ್ಡು
Advertisement
Advertisement
‘ಬುಲ್ಡೋಜರ್ ಬಾಬಾ’ಗೆ 2ನೇ ಬಾರಿ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ ಸಮಾಗಮವಾಗಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ.ನಡ್ಡಾ, ಅಮಿತ್ ಶಾ ಭಾಗಿಯಾಗಿದ್ದರು. ಇವರೊಂದಿಗೆ ವಿವಿಧ ರಾಜ್ಯಗಳ ಬಿಜೆಪಿ ಸಿಎಂಗಳೂ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ, ಉದ್ಯಮಿಗಳು, ಬಾಲಿವುಡ್ ನಟ, ನಟಿಯರು ಭಾಗವಹಿಸಿದ್ದು, ವಿಶೇಷವಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರತಂಡ ಭಾಗಿಯಾಗಿತ್ತು. ಇದನ್ನೂ ಓದಿ: ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ – ಸಚಿವ ಮುಖೇಶ್ ನಾಮಫಲಕ ನಾಪತ್ತೆ
Advertisement
— Yogi Adityanath (@myogiadityanath) March 25, 2022
403 ಸದಸ್ಯರ ವಿಧಾನಸಭೆಯಲ್ಲಿ 255 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 1987 ರಿಂದೀಚೆಗೆ ತನ್ನ ಮೊದಲ ಅವಧಿಯನ್ನು ಪೂರ್ಣಗೊಳಿಸಿ ಪುನರಾಯ್ಕೆಯಾದ ಬಿಜೆಪಿ ಉತ್ತರಪ್ರದೇಶದ ಮೊದಲ ಸರ್ಕಾರವಾಗಿ ಇತಿಹಾಸವನ್ನು ಸೃಷ್ಟಿಸಿತು. ಈ ಮೂಲಕ 3 ದಶಕಗಳ ಬಳಿಕ 2ನೇ ಬಾರಿ ಒಂದೇ ಪಕ್ಷ ಅಧಿಕಾರಕ್ಕೆ ಬಂದಿದೆ.