ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ತಾವು ಎಷ್ಟೇ ಬ್ಯುಸಿಯಿದ್ದರು ಕುಟುಂಬಕ್ಕಾಗಿ ಒಂದಿಷ್ಟು ಸಮಯವನ್ನು ಯಶ್ ಮೀಸಲಿಡುತ್ತಾರೆ. ಈಗ ತಮ್ಮ ಪುಟ್ಟ ಮಗ ಯಥರ್ವ್‌ನಿಂದ ಹೊಸ ಆರೋಪವೊಂದನ್ನ ಯಶ್ ಎದುರಿಸುತ್ತಿದ್ದಾರೆ. ಅಪ್ಪ ಬ್ಯಾಡ್ ಬಾಯ್ ಎಂದು ಆರೋಪಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
View this post on Instagram
Advertisement
ರಾಧಿಕಾ ಪಂಡಿತ್ ಮಡಿಲಿನಲ್ಲಿ ಯಥರ್ವ್ ಸಪ್ಪೆ ಮುಖ ಮಾಡಿಕೊಂಡು ಕುಳಿತಿದ್ದಾನೆ. ಅಪ್ಪ ಬ್ಯಾಡ್ ಬಾಯ್ ಅಂತಾ ವಾದಿಸಿದ್ದಾನೆ. ಈ ಸ್ಪೆಷಲ್ ವಿಡಿಯೋವನ್ನ ನಟಿ ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ. ಅಮ್ಮ ಗುಡ್ ಗರ್ಲ್, ಅಪ್ಪ ಬ್ಯಾಡ್ ಬಾಯ್ ಎಂದು ಮಗ ಯಥರ್ವ್ ಆರೋಪ ಮಾಡಿದ್ದಾನೆ. ಮಗನಿಂದ ಗುಡ್ ಬಾಯ್ ಎಂದು ಕರೆಯಿಸಿಕೊಳ್ಳಲು ಯಶ್ ಸಖತ್ ಪ್ರಯತ್ನ ಪಟ್ಟು ಸೋತಿದ್ದಾರೆ. ಅಪ್ಪ ಬ್ಯಾಡ್ ಬಾಯ್ ಎಂದೇ ಪದೇ ಪದೇ ಯಥರ್ವ್ ವಾದ ಮಾಡಿದ್ದಾನೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:`ಪಂಚತಂತ್ರ’ ನಟನಿಗೆ ರಕ್ಷಿತ್ ಶೆಟ್ಟಿ ಸಾಥ್: ವಿಹಾನ್‌ಗೆ ನಾಯಕಿಯಾದ ಅಂಕಿತಾ ಅಮರ್
Advertisement
View this post on Instagram
Advertisement
ಬಳಿಕ ಹೋಗಲೇ ಬಂದ್ಬಿಟ್ಟ, ಇವನೊಬ್ಬ ಬಾಕಿ ಇದ್ದ ಎಂದು ಮಗನಿಗೆ ಪ್ರೀತಿಯಿಂದ ಯಶ್ ಆವಾಜ್ ಹಾಕಿದ್ದಾರೆ. ಈ ವಿಡಿಯೋವನ್ನ ಶೇರ್ ಮಾಡಿರುವ ರಾಧಿಕಾ ಪಂಡಿತ್, ತೀರ್ಪು ಹೊರಬಿದ್ದಿದೆ ಎಂದು ಅಡಿಬರಹ ನೀಡಿದ್ದಾರೆ. ಈ ವಿಡಿಯೋ ನೋಡಿ ಫ್ಯಾನ್ಸ್ ತುಂಬಾ ಕ್ಯೂಟ್ ಆಗಿದೆ ಅಂತಾ ಕಾಮೆಂಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ.