ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಹಿರಿಯ ಸಹೋದರ ಸೋಮಾಭಾಯಿ ಮೋದಿಯವರು (Somabhai Modi) ಮತದಾನದ ಬಳಿಕ ತಮ್ಮ ತಾಯಿ ದಿವಂಗತ ಹೀರಾಬೆನ್ ಅವರನ್ನು ಸ್ಮರಿಸಿ ಭಾವುಕರಾದರು. ಈ ವೇಳೆ, ನನ್ನ ತಾಯಿ ಈಗ ಇಲ್ಲ, ಆದರೆ ಅವರು ನರೇಂದ್ರಭಾಯಿ ಅವರಿಗೆ ಸ್ವರ್ಗದಿಂದಲೇ ಆಶೀರ್ವಾದ ಮಾಡುತ್ತಿರಬಹುದು ಎಂದರು.
ಸೋಮಾಭಾಯಿ ಮೋದಿ ಅವರು ರಾನಿಪ್‍ನ ಮತಗಟ್ಟೆಯ ಹೊರಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಇಬ್ಬರೂ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡರು. ಬಳಿಕ ಸೋಮಾಭಾಯಿಯವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, ತಮ್ಮ ತಾಯಿಯನ್ನು ನೆನೆದು ಭಾವುಕರಾದರು. ಇದನ್ನೂ ಓದಿ: ಮತ ಚಲಾಯಿಸಿದ ರಿತೇಶ್ ದೇಶ್‌ಮುಖ್, ಜೆನಿಲಿಯಾ ದಂಪತಿ
ಮೋದಿಯವರು ಹಿಂದೆ ಮತದಾನಕ್ಕೂ ಮುನ್ನ ಗುಜರಾತ್‍ನ (Gujarat) ಗಾಂಧಿನಗರದಲ್ಲಿರುವ (Gandhinagar) ಅವರ ನಿವಾಸದಲ್ಲಿ ತಮ್ಮ ತಾಯಿಯನ್ನು ಭೇಟಿಯಾಗುತ್ತಿದ್ದರು. ತಾಯಿಯವರ ಆಶೀರ್ವಾದ ಪಡೆದು ಮತ ಚಲಾಯಿಸುತ್ತಿದ್ದರು. ದೇಶದ ಜನ ನನ್ನ ಸಹೋದರ ಮೂರನೇ ಬಾರಿಗೆ ಪ್ರಧಾನಿಯಾಗಬೇಕು ಎಂದು ಬಯಸುತ್ತಾರೆ. ಅವರಂತೆ ನಾನು ಸಹ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಬಯಸುತ್ತೇನೆ ಎಂದರು.
ಮೋದಿಯವರ ತಾಯಿ ಹೀರಾಬೆನ್ ಅವರು 2022ರ ಡಿಸೆಂಬರ್ ತಿಂಗಳಲ್ಲಿ ನಿಧನರಾಗಿದ್ದಾರೆ. ಇದನ್ನೂ ಓದಿ: ಡಿಸಿಎಂ ಡಿಕೆಶಿಯನ್ನು ಕೂಡಲೇ ಕ್ಯಾಬಿನೆಟ್‌ನಿಂದ ಕೈಬಿಡಬೇಕು : ಹೆಚ್‌ಡಿಕೆ ಆಗ್ರಹ