ಕೆಜಿಎಫ್ 2 ಸಿನಿಮಾದ ನಂತರ ಯಶ್ ಬೇಡಿಕೆ ತುಂಬಾ ಹೆಚ್ಚಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಯ ಸಿನಿಮಾ ನಿರ್ಮಾಪಕರು, ನಿರ್ದೇಶಕರು ಯಶ್ ಹಿಂದೆ ಬಿದ್ದಿದ್ದಾರೆ. ಇಷ್ಟೊಂದು ಬೇಡಿಕೆ ಇರುವಾಗ ಯಶ್ ಮೌನವಹಿಸಿದ್ದಾರೆ. ತಮಿಳು, ತೆಲುಗು, ಕನ್ನಡ ಸಿನಿಮಾಗಳ ಬಗ್ಗೆ ಸುದ್ದಿ ಆಗುತ್ತಿದ್ದರೂ, ಯಾವುದಕ್ಕೂ ಪ್ರತಿಕ್ರಿಯಿಸದೆ ಬರುತ್ತಿರುವ ಸುದ್ದಿಗಳನ್ನು ಓದಿಕೊಂಡು ಸುಮ್ಮನಾಗಿದ್ದಾರೆ. ಆದರೂ, ಸುದ್ದಿಗಳು ಮಾತ್ರ ನಿಲ್ಲುತ್ತಿಲ್ಲ.
ಈವರೆಗೂ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂದು ಸುದ್ದಿ ಆಗಿತ್ತು. ಆ ಸಿನಿಮಾಗಾಗಿಯೇ ಯಶ್ ತಯಾರಿ ಆಗುತ್ತಿದ್ದಾರೆ ಎಂದೂ ಹೇಳಲಾಗಿತ್ತು. ಯಶ್ ಆಪ್ತರು ಕೂಡ ಈ ಸುದ್ದಿಯನ್ನು ಖಚಿತ ಪಡಿಸಿದ್ದರು. ಆದರೆ, ಒಂದು ವಾರದಿಂದ ನರ್ತನ್ ಸಿನಿಮಾದಲ್ಲಿ ಯಶ್ ನಟಿಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ನರ್ತನ್ ಸಿನಿಮಾಗೂ ಮುಂಚೆ, ಮತ್ತೊಂದು ಭಾರೀ ಬಜೆಟ್ ಸಿನಿಮಾದಲ್ಲಿ ಅವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್
ಈ ನಡುವೆ ನರ್ತನ್ ಮಾಧ್ಯಮವೊಂದರ ಜೊತೆ ಮಾತನಾಡಿ, ಸಿನಿಮಾ ರಂಗ ಅಂದರೆ, ಅಲ್ಲಿ ವದಂತಿಗಳು, ಗಾಸಿಪ್ ಗಳು ಇರಲೇಬೇಕು. ಯಶ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಒಂದು ವಾರದೊಳಗೆ ಗೊತ್ತಾಗಲಿದೆ. ಬಹುಶಃ ಒಂದು ವಾರದಲ್ಲಿ ಸಿನಿಮಾ ಬಗ್ಗೆ ಕ್ಲ್ಯಾರಿಟಿ ಸಿಗಬಹುದು ಎಂದು ಹೇಳಿದ್ದಾರೆ. ಅಲ್ಲಿಗೆ ಒಂದು ವಾರದಲ್ಲಿ ಯಶ್ ಅವರ ಹೊಸ ಸಿನಿಮಾದ ಅಪ್ ಡೇಟ್ ಏನಾದರೂ ಸಿಗಬಹುದಾ ಕಾದುನೋಡಬೇಕು.