ಬೆಂಗಳೂರು: ಮಿತವ್ಯಯಕ್ಕೆ ಪ್ರಧಾನಿ ಮೋದಿ (PM Modi) ಸಲಹೆಯನ್ನು ಪಾಲಿಸೋದಾಗಿ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ (V.Somanna) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತಾಡಿದ ವಿ.ಸೋಮಣ್ಣ, ನಾನೂ ರೈಲು, ಬಸ್‌ನಲ್ಲಿ ಓಡಾಡ್ತೇನೆ. ಎಲ್ಲೆಲ್ಲಿ ಅವಶ್ಯಕತೆ ಇದೆಯೋ, ಅನುಕೂಲ ಇದೆಯೋ ಅಲ್ಲೆಲ್ಲ ರೈಲು ಮೂಲಕ ಪ್ರಯಾಣ ಮಾಡ್ತೇನೆ. ಮೈಸೂರು, ಹುಬ್ಬಳ್ಳಿ, ತುಮಕೂರು ಮತ್ತಿತರ ಕಡೆ ರೈಲಿನಲ್ಲೇ ಹೋಗ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: PUBLiC TV Explained | ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬಿಕ್ಕಟ್ಟು – ಭಾರತದಿಂದ ರಫ್ತು ಬಂದ್, ದಿಢೀರ್ ಸಮಸ್ಯೆ ಶುರುವಾಗಿದ್ದೇಕೆ?
ಈಗಾಗಲೇ ವಾಹನಗಳ ಬಳಕೆ ಕಡಿಮೆ ಮಾಡಿದ್ದೇವೆ. ಸಿಬ್ಬಂದಿ ಬಳಕೆ ಕಡಿಮೆ ಮಾಡಿದ್ದೇನೆ. ದುಂದು ವೆಚ್ಚ ಏನೂ ಮಾಡಲ್ಲ. ರಾಜ್ಯದಲ್ಲಿ ಸರ್ಕಾರ ಒಂದು ಎಸ್ಕಾರ್ಟ್ ವಾಹನ ಕೊಟ್ಟಿದೆ. ದೆಹಲಿಗೆ ರೈಲಿನಲ್ಲಿ ಹೋಗಲು ಆಗಲ್ಲ, ಫ್ಲೈಟ್ ಅನಿವಾರ್ಯ. ಸ್ಥಳೀಯವಾಗಿ ರೈಲು ಪ್ರಯಾಣಕ್ಕೆ ಆದ್ಯತೆ ಕೊಡ್ತೇನೆ ಎಂದಿದ್ದಾರೆ.
ದುಂದು ವೆಚ್ಚ ಕಡಿಮೆ ಮಾಡಬೇಕು ಜನ. ರೈಲಿನಲ್ಲೇ ಓಡಾಡಿ, ಕಾರುಗಳಲ್ಲಿ ಬೇಡ ಅಂತ ಹೇಳೋ ಅಗತ್ಯ ಇಲ್ಲ. ಆದರೆ, ಜನ ದುಂದುವೆಚ್ಚ ಕಡಿಮೆ ಮಾಡಿಕೊಳ್ಳಲಿ ಸಾಕು. ರಾಜ್ಯ ಸರ್ಕಾರ ದರ ಏರಿಕೆ ಮಾಡಿ ಜನರ ಮೇಲೆ ದೊಡ್ಡ ಹೊರೆಯನ್ನೇ ಹೊರೆಸಿದೆ. ಹೀಗಾಗಿ, ರಾಜ್ಯ ಸರ್ಕಾರಕ್ಕೆ ಕೇಂದ್ರದ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬೊಕ್ಕಸ ಖಾಲಿ ಮಾಡಿದೆ. 8.24 ಲಕ್ಷ ಕೋಟಿ ಸಾಲ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

