ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಭಾರತದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ (Kapil Dev) ಬೆಂಬಲ ನೀಡಿದ್ದಾರೆ. ಅವರು ಇನ್ಸ್ಟಾಗ್ರಾಮ್‍ನಲ್ಲಿ ಪ್ರತಿಭಟನಾ ನಿರತರ ಫೋಟೋ ಹಂಚಿಕೊಂಡು ನ್ಯಾಯ ಸಿಗುತ್ತದೆಯೇ? ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ವಿನೇಶ್ ಫೋಗಟ್ (Vinesh Phogat), ಬಜರಂಗ್ ಪುನಿಯಾ (Bajrang Punia), ಸಾಕ್ಷಿ ಮಲಿಕ್ (Sakshi Malik) ಸೇರಿ ಹಲವಾರು ಕುಸ್ತಿ ಪಟುಗಳು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ದೇವ್ ಅವರಿಗೆ ಬೆಂಬಲ ನೀಡಿದ್ದು ಹೊಸ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಬಿಜೆಪಿ ಸಂಸದ, WFI ಅಧ್ಯಕ್ಷನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಪ್ರತಿಭಟನೆಗೆ ರಾಜಕೀಯ ಪಕ್ಷಗಳನ್ನು ಕರೆದ ಕುಸ್ತಿಪಟುಗಳು
Advertisement
Advertisement
ಇದಕ್ಕೂ ಮುನ್ನ ಒಲಿಂಪಿಕ್ಸ್ (Olympic) ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra) ಪ್ರತಿಭಟನಾ ನಿರತ ಕುಸ್ತಿ ಪಟುಗಳಿಗೆ ಬೆಂಬಲ ಸೂಚಿಸಿದ್ದರು. ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಒದಗಿಸುವಂತೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೆ ಕುಸ್ತಿಪಟುಗಳು ಬೀದಿಗಿಳಿದಿರುವುದು ದುಃಖದ ಸಂಗತಿ ಎಂದು ಹೇಳಿಕೊಂಡಿದ್ದರು.
ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (Indian Olympic Association) ಅಧ್ಯಕ್ಷೆ ಪಿ.ಟಿ ಉಷಾ (PT Usha) ಕುಸ್ತಿ ಪಟುಗಳ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದ್ದರು. ದೇಶದ ಘನತೆಗೆ ಧಕ್ಕೆ ತರಲು ಪ್ರತಿಭಟನೆ ನಡೆಸುತ್ತಿದ್ದಾರೆ. ಅಸೋಸಿಯೇಷನ್ ಬಳಿ ಬರುವುದು ಬಿಟ್ಟು ರಸ್ತೆಗಿಳಿದಿರುವುದ ಸರಿಯಲ್ಲ ಎಂದು ಟೀಕಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಕುಸ್ತಿಪಟುಗಳು ಬೀದಿಗಿಳಿದು ಪ್ರತಿಭಟನೆ ಮಾಡ್ತಿರೋದು ದೇಶದ ಘನತೆಗೆ ಧಕ್ಕೆ – ಪಿ.ಟಿ ಉಷಾ ಬೇಸರ