ಮುಂಬೈ: ಮುಂಬರುವ ಐಪಿಎಲ್ ಲೀಗ್ ಮಾಧ್ಯಮ ಪ್ರಸಾರದ ಹಕ್ಕು ಪ್ರತಿ ಪಂದ್ಯಕ್ಕೆ 107.5 ಕೋಟಿ ರೂ.ಗೆ ಬಿಕಾರಿಯಾಗುವ ಮೂಲಕ ವಿಶ್ವದ 2ನೇ ದುಬಾರಿ ಕ್ರೀಡಾ ಲೀಗ್ ಆಗಿ ಹೊರಹೊಮ್ಮಿದೆ. ದೊಡ್ಡ ಕ್ರೀಡಾ ಲೀಗ್ ಆಗಿ ಹೊರಹೊಮ್ಮಿದ್ದರೂ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಇನ್ನೂ ಸೇರ್ಪಡೆಯಾಗಿಲ್ಲ ಯಾಕೆ ಎಂಬುದೇ ಪ್ರಶ್ನೆ.
ವಿಶ್ವದ ದುಬಾರಿ ಕ್ರೀಡೆಗಳಾದ ಅಮೆರಿಕದ ನ್ಯಾಷನಲ್ ಫುಟ್ಬಾಲ್ ಲೀಗ್ (NFL) ಹಾಗೂ ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್ಬಾಲ್(EPL) ಅನ್ನೂ ಹಿಂದಿಕ್ಕಿದೆ. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದಿದ್ದ ಭಾರತದ ನೀರಜ್ ಚೋಪ್ರಾರಿಂದ ಮತ್ತೊಂದು ದಾಖಲೆ
Advertisement
Advertisement
2018-2022ರ ಅವಧಿಗೆ 16,348 ಕೋಟಿ ರೂಪಾಯಿಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್ ಇಂಡಿಯಾ, ಪ್ರತಿ ಪಂದ್ಯದ ಪ್ರಸಾರಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈ ಬಾರಿ 5 ವರ್ಷಗಳ ಅವಧಿಗೆ ಒಟ್ಟು 370 ಪಂದ್ಯಗಳು ನಡೆಯಲಿದ್ದು, ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿತ್ತು. ಆದರೆ 2023-2027ರ ನಡುವಿನ ಮಾಧ್ಯಮ ಪ್ರಸಾರ ಹಕ್ಕಿಗೆ ಎರಡು ದಿನಗಳ ಕಾಲ ಹರಾಜು ಪ್ರಕ್ರಿಯೆ ನಡೆದಿದ್ದು ಟಿವಿ ಪ್ರಸಾರಕ್ಕೆ 57.5 ಕೋಟಿ ಡಿಜಿಟಲ್ ಪ್ರಸಾರಕ್ಕೆ 50 ಸಾವಿರ ಕೋಟಿ ಕೋಟಿ ಮೌಲ್ಯಕ್ಕೆ ಬಿಕರಿಯಾಗಿದೆ. ಆದರೂ ಕ್ರಿಕೆಟ್ ಒಲಿಂಪಿಕ್ಸ್‌ಗೆ ಏಕೆ ಸೇರ್ಪಡೆಯಾಗಿಲ್ಲ ಎನ್ನುವುದು ಹಲವರ ಪ್ರಶ್ನೆಯಾಗಿದೆ.
Advertisement
Advertisement
ಕ್ರಿಕೆಟ್ ಸೇರ್ಪಡೆ ಏಕಿಲ್ಲ?: ಏಕೆಂದರೆ ಒಲಿಂಪಿಕ್ಸ್‌ನಲ್ಲಿ ಪ್ರಾಬಲ್ಯ ಹೊಂದಿರುವ ದೇಶಗಳಲ್ಲಿ ಕ್ರಿಕೆಟ್ ತನ್ನದೇ ಛಾಪು ಮೂಡಿಸುವಲ್ಲಿ ವಿಫಲವಾಗಿದೆ. ಹಾಗಾಗಿ ಕ್ರಿಕೆಟ್ ಅನ್ನು ಒಲಿಂಪಿಕ್ಸ್‌ಗೆ ಸೇರಿಸುವ ಉದ್ದೇಶವನ್ನು ಕೈಬಿಡಲಾಗಿದೆ. 1896 ರಲ್ಲಿ ಅಥೆನ್ಸ್‌ನಲ್ಲಿ ನಡೆದ ಮೊದಲ ಆಧುನಿಕ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಅನ್ನು ಒಂದು ಭಾಗವಾಗಿ ಸೇರಿಸಲಾಗಿತ್ತು. ಆದರೆ ಹೆಚ್ಚಿನ ಜನರನ್ನು ಸೆಳೆಯುವಲ್ಲಿ ವಿಫಲವಾದ್ದರಿಂದ ಕ್ರೀಡಾಕೂಟದಿಂದ ಕೈಬಿಡಲಾಯಿತು.
ಕ್ರಿಕೆಟ್ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿದ್ದರೂ ಒಲಿಂಪಿಕ್ಸ್‌ನಲ್ಲಿ ಪ್ರಾಬಲ್ಯ ಹೊಂದಿರುವ ದೇಶಗಳಲ್ಲಿ ಛಾಪು ಮೂಡಿಸುವಲ್ಲಿ ವಿಫಲವಾಗಿದೆ. ಆತಿಥೇಯ ರಾಷ್ಟ್ರಗಳು ಕ್ರಿಕೆಟ್ ಇಲ್ಲದ ರಾಷ್ಟ್ರಗಳಾಗಿರುವುದರಿಂದ ಈವೆಂಟ್‌ಗಳಲ್ಲಿ ಸೇರ್ಪಡೆಗೊಳಿಸಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಡಿಸ್ನಿ ಸ್ಟಾರ್, ವಯಾಕಾಮ್ ತೆಕ್ಕೆಗೆ IPL ಪ್ರಸಾರ ಹಕ್ಕು – ಪ್ರತಿ ಪಂದ್ಯಕ್ಕೆ 107.5 ಕೋಟಿ
ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳಿಸಲು ಪ್ರತ್ಯೇಕ ಕ್ರೀಡಾಂಗಣದ ಅವಶ್ಯಕತೆಯಿದೆ. ಜೊತೆಗೆ ಸಮಯ ನಿಗದಿ ಮಾಡಬೇಕಾಗುತ್ತದೆ. ಮುಖ್ಯವಾಗಿ ಇದರ ತಾಂತ್ರಿಕ ನೆರವಿಗೆ ಆರ್ಥಿಕತೆಯೂ ಮುಖ್ಯವಾಗುತ್ತದೆ. ಇದೆಲ್ಲದರ ನಡುವೆ ದೀರ್ಘಕಾಲದ ಕ್ರೀಡೆ ವೀಕ್ಷಿಸಲು ಕೆಲವೇ ಆಸಕ್ತ ರಾಷ್ಟ್ರಗಳನ್ನು ಹೊಂದಿರುವುದರಿಂದ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಿಲ್ಲ. ಒಂದು ವೇಳೆ ಕ್ರಿಕೆಟ್ ಅಯೋಜಿಸಲೇಬೇಕಿದ್ದರೆ ಆತಿಥೇಯ ನಗರಗಳ ಕ್ರಿಕೆಟ್ ಸಂಸ್ಕೃತಿಯ ಆಧಾರದ ಮೇಲೆ ಕ್ರೀಡೆಯ ಸೇರ್ಪಡೆಗಾಗಿ ಬಿಡ್ ಮಾಡಬಹುದಾಗಿದೆ.
2028ರ ಒಲಿಂಪಿಕ್ಸ್ಗೆ ಕ್ರಿಕೆಟ್ ಸೇರ್ಪಡೆ: ವಿಶ್ವ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರ್ಪಡೆ ಮಾಡುವ ಕೂಗು ಮತ್ತೊಮ್ಮೆ ಎದ್ದಿದೆ. ಕಳೆದ ಟೋಕಿಯೋ ಒಲಿಂಪಿಕ್ಸ್ ನಲ್ಲೇ ಕ್ರಿಕೆಟ್ ಸೇರ್ಪಡೆ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೂ ಈಗ 2028ರ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅಧಿಕೃತವಾಗಿ ಸೇರ್ಪಡೆಯಾಗಲಿದೆ ಎಂದು ಐಸಿಸಿ ಅಧ್ಯಕ್ಷ ಗ್ರೆಗ್ ಬ್ಲಾರ್ಕೆ ಅವರು ತಿಳಿಸಿದ್ದಾರೆ. ಇದನ್ನೂ ಓದಿ: IPL: ಪ್ರತಿ ಪಂದ್ಯದ ಪ್ರಸಾರ ಹಕ್ಕು 100 ಕೋಟಿಗೂ ಅಧಿಕ – ಇಂದು ಮತ್ತಷ್ಟು ಏರಿಕೆ ಸಾಧ್ಯತೆ
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಹಿಂದೆ ಕ್ರಿಕೆಟ್ ಆಟವೂ ಒಂದು ಭಾಗವಾಗಿತ್ತಾದರೂ ನಂತರ ಹೆಚ್ಚು ಸಮಯ ಬೇಕಾಗಿರುವುದರಿಂದ ಜೊತೆಗೆ ಅದಕ್ಕಾಗಿಯೇ ಪ್ರತ್ಯೇಕವಾದ ಬೃಹತ್ ಕ್ರೀಡಾಂಗಣದ ಅವಶ್ಯಕತೆ ಇದ್ದರಿಂದ ಕ್ರಿಕೆಟ್ ಅನ್ನು ಒಲಿಂಪಿಕ್ಸ್ ನಿಂದ ಕೈಬಿಡಲಾಗಿತ್ತು. ಇದೀಗ 2028ರ ಒಲಿಂಪಿಕ್‌ನಲ್ಲಿ ಕ್ರಿಕೆಟ್ ಸೇರಿಸುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಕ್ರಿಕೆಟ್ ಸೇರ್ಪಡೆಯಾದರೆ ಅದನ್ನು ಯಾವ ಮಾದರಿಯಲ್ಲಿ ಆಡಿಸಬೇಕು ಎಂಬುದರ ರೂಪುರೇಷೆಗಳನ್ನು ರಚಿಸುವುದು ಮುಖ್ಯವಾಗಿದೆ.
2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್ ಸೇರಿದಂತೆ ಜಾಗತಿಕಮಟ್ಟದ 28 ಕ್ರೀಡೆಗಳು ಸೇರ್ಪಡೆಯಾಗಿದೆ. ಒಂದು ವೇಳೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಬೇಕಾದರೆ ಅದು ಕೂಡ ವಿಶ್ವಮಟ್ಟದಲ್ಲಿ ಪ್ರಚಲಿತಕ್ಕೆ ಬರಬೇಕು ಅದಕ್ಕಾಗಿ ಅನೇಕ ಕ್ರಮಗಳನ್ನು ಐಸಿಸಿ ಕಮಿಟಿಯು ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ.
ಅಮೆರಿಕಾದಲ್ಲೂ ಕೂಡ ಕ್ರಿಕೆಟ್ ಅನ್ನು ಪ್ರಚುರಪಡಿಸುವ ಸಲುವಾಗಿ 2024 ಚುಟುಕು ವಿಶ್ವಕಪ್ ಅನ್ನು ನಡೆಸಲು ಚಿಂತಿಸುತ್ತಿವೆ. ಆಸ್ಟ್ರೆಲಿಯಾ, ವೆಸ್ಟ್ಇಂಡೀಸ್ ನಡುವಿನ ಸರಣಿ ಅಲ್ಲದೆ, ಬರುವ ಆಗಸ್ಟ್‌ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಟಿ20 ಸರಣಿ ನಡೆಸುವುದಕ್ಕೂ ಐಸಿಸಿ ಚಿಂತನೆ ನಡೆಸಿದೆ.
ಐಸಿಸಿಯು ಟಿ20 ಮಾದರಿ ಕ್ರಿಕೆಟ್‌ಗೆ ಹೆಚ್ಚು ಒತ್ತು ಕೊಡುತ್ತಿರುವುದರಿಂದ ಒಂದು ವೇಳೆ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆ ಆದರೆ ಐಪಿಎಲ್‌ನಂತೆ ಟಿ20 ಮಾದರಿಯ ಕ್ರಿಕೆಟ್ ನಡೆಯಬಹುದು ಎಂದು ಅಭಿಮಾನಿಗಳ ಲೆಕ್ಕಾಚಾರ ಇದೆ.
ಪ್ಯಾಕೇಜ್ – ಎ (ಟಿವಿ ಪ್ರಸಾರಕ್ಕೆ)
- ಒಟ್ಟು ಪಂದ್ಯಗಳು – 410
- ನಿಗದಿತ ಮೌಲ್ಯ – 49 ಸಾವಿರ ಕೋಟಿ
- ಒಟ್ಟು ಮೌಲ್ಯ – 23,575 ಕೋಟಿ
- ಪ್ರತಿ ಪಂದ್ಯದ ಮೌಲ್ಯ – 57.5 ಕೋಟಿ
ಪ್ಯಾಕೇಜ್ – ಬಿ (ಡಿಜಿಟಲ್ ಪ್ರಸಾರಕ್ಕೆ)
- ಒಟ್ಟು ಪಂದ್ಯಗಳು – 410
- ನಿಗದಿತ ಮೌಲ್ಯ – 33 ಸಾವಿರ ಕೋಟಿ
- ಒಟ್ಟು ಮೌಲ್ಯ – 20,500 ಕೋಟಿ
- ಪ್ರತಿ ಪಂದ್ಯದ ಮೌಲ್ಯ – 50 ಕೋಟಿ