LatestLeading NewsMain PostSports

ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದಿದ್ದ ಭಾರತದ ನೀರಜ್ ಚೋಪ್ರಾರಿಂದ ಮತ್ತೊಂದು ದಾಖಲೆ

ನವದೆಹಲಿ: ಒಲಿಂಪಿಕ್ಸ್‌ ನಲ್ಲಿ ಚಿನ್ನಗೆದ್ದು ದಾಖಲೆ ಬರೆದಿದ್ದ ಭಾರತೀಯ ಕ್ರೀಡಾ ತಾರೆ ನೀರಜ್ ಚೋಪ್ರಾ ಮತ್ತೊಂದು ದಾಖಲೆ ಮಾಡಿದ್ದಾರೆ.

ಫಿನ್‌ಲೆಂಡ್ ದೇಶದ ಪಾವೋ ನುರ್ಮಿ ಗೇಮ್ಸ್ ಕೂಟದಲ್ಲಿ 89.30 ಮೀಟರ್ ಜಾವೆಲಿನ್ (ಭರ್ಜಿ) ಎಸೆದು ಹಿಂದೆ ತಾವೇ ನಿರ್ಮಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಇದನ್ನೂ ಓದಿ: ಋತುರಾಜ್‌ – ಇಶಾನ್‌ ಶೈನ್‌, ಹರ್ಷಲ್‌ ಬೌಲಿಂಗ್‌ ಕಮಾಲ್‌ – ಭಾರತಕ್ಕೆ 48 ರನ್‌ಗಳ ಭರ್ಜರಿ ಜಯ

ಫಿನ್‌ಲೆಂಡ್‌ನಲ್ಲಿ ನಡೆದ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ರಾಷ್ಟ್ರೀಯ ದಾಖಲೆ ಮುರಿದರೂ ಚಿನ್ನದ ಪದಕ ಗೆಲ್ಲಲಾಗಲಿಲ್ಲ. ತಮ್ಮ ಈ ಸಾಧನೆಗೆ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಈ ಕ್ರೀಡಾಕೂಟದಲ್ಲಿ ಫಿನ್‌ಲೆಂಡ್ ದೇಶದ ಸ್ಥಳೀಯ ಜಾವೆಲಿನ್ ಪಟು ಓಲಿವರ್ ಹೆಲಂದರ್ 89.83 ಮೀ ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ IPL

24 ವರ್ಷದ ನೀರಜ್ ಚೋಪ್ರಾ ಜಪಾನ್‌ನಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್ ಬಳಿಕ ಪಾಲ್ಗೊಂಡ ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟ ಇದಾಗಿದೆ. 2021, ಆಗಸ್ಟ್ 7ರಂದು ಅವರು ಟೋಕಿಯೋ ಒಲಿಂಪಿಕ್ಸ್‌ ನಲ್ಲಿ 87.58 ಮೀಟರ್ ಜಾವೆಲಿನ್ ಎಸೆದು ದಾಖಲೆ ಬರೆದಿದ್ದರು.

ಫಿನ್‌ಲೆಂಡ್‌ನ ಪಾವೊ ನುರ್ಮಿ ಗೇಮ್ಸ್ನಲ್ಲಿ 90 ಮೀಟರ್ ಜಾವೆಲಿನ್ ಎಸೆದವರಿಗೆ ಫೋರ್ಡ್ನ ಒಂದು ಕಾರನ್ನು ಉಡುಗೊರೆ ನೀಡುವುದಾಗಿ ಸಂಘಟಕರು ಘೋಷಣೆ ಮಾಡಿದ್ದರು. ಯಾರೂ ಕೂಡ ಆ ಸಾಧನೆ ಮಾಡಲಾಗಲಿಲ್ಲ. ಇದನ್ನೂ ಓದಿ: ಕನ್ನಡ ಸಿನಿಮಾದಲ್ಲಿ ನಟಿಸಿದ್ರಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ?: ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮಾಜಿ ಕ್ರಿಕೆಟ್ ನಾಯಕ

ಕ್ರೀಡೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಚೋಪ್ರಾ, 90 ಮೀಟರ್‌ಗಿಂತ ಹೆಚ್ಚು ದೂರ ಜಾವೆಲಿನ್ ಎಸೆಯಬೇಕು ಎನ್ನುವ ಒತ್ತಡಕ್ಕೆ ನಾನು ಸಿಲುಕುವುದಿಲ್ಲ. ಮುಂದಿನ ತಿಂಗಳು ಜುಲೈ 15 ರಿಂದ 24ರ ವರೆಗೆ ಅಮೆರಿಕದ ಯುಜಿನ್‌ನಲ್ಲಿ ವಿಶ್ವಚಾಂಪಿಯನ್ ಶಿಪ್ ನಡೆಯಲಿದ್ದು, ಅದರಲ್ಲಿ ಉತ್ತುಂಗಕ್ಕೇರಲು ಪ್ರಯತ್ನಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೂ ಮುನ್ನ ಚೋಪ್ರಾ ಇದೇ ಜೂನ್ 30ರಂದು ಫಿನ್‌ಲೆಂಡ್‌ನಲ್ಲಿ ನಡೆಯಲಿರುವ ಸ್ಟಾಕ್‌ಹೋಮ್ ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ.

Leave a Reply

Your email address will not be published.

Back to top button