ನವದೆಹಲಿ: 2021ರ ನವೆಂಬರ್ ತಿಂಗಳಲ್ಲಿ ಭಾರತೀಯರ 17 ಲಕ್ಷ ಖಾತೆಗಳನ್ನು ವಾಟ್ಸಪ್ ಬ್ಯಾನ್ ಮಾಡಿದೆ. ಆದರೆ ಇದೇ ವೇಳೆ 602 ಕುಂದು ಕೊರತೆ ದೂರುಗಳನ್ನು ವಾಟ್ಸಪ್ ಸ್ವೀಕರಿಸಿದೆ.
ಮಾಸಿಕ ದೂರು ಸ್ವೀಕಾರ ವರದಿಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಒಂದು ತಿಂಗಳಲ್ಲಿ ಭಾರತೀಯರ 17,59,000 ಖಾತೆಗಳನ್ನು ವಾಟ್ಸಪ್ ನಿಷೇಧಿಸಿದೆ. ಇದನ್ನೂ ಓದಿ: ಇನ್ನು ಐದೇ ವರ್ಷಗಳಲ್ಲಿ ಮಾನವ ಮಂಗಳ ಗ್ರಹಕ್ಕೆ ಪ್ರಯಾಣಿಸಬಹುದು: ಎಲೋನ್ ಮಸ್ಕ್ ಭರವಸೆ
Advertisement
Advertisement
ನಿಯಮ ಉಲ್ಲಂಘಿಸಿದವರ ವಿರುದ್ಧ ಹಾಗೂ ದುರುಪಯೋಗ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಈ ಖಾತೆಗಳನ್ನು ಮರುಸ್ಥಾಪಿಸಿಕೊಳ್ಳುವ ಅವಕಾಶ ಬಳಕೆದಾರನಿಗೆ ಇಲ್ಲ. ಮುಂದೆ ಈ ಸಂಬಂಧ ಆಯ್ಕೆ ನೀಡಲಿದ್ದು, ಅದಕ್ಕೆ ಕಠಿಣ ನಿಯಮಗಳು ಇರಲಿವೆ.
Advertisement
ಐಟಿ ನಿಯಮ 2021ರ ಅನುಸಾರ, ನವೆಂಬರ್ ತಿಂಗಳಲ್ಲಿ 6ನೇ ಮಾಸಿಕ ವರದಿ ಪ್ರಕಟಿಸಲಾಗಿದೆ. ಷರತ್ತು ಹಾಗೂ ನಿಯಮ ಉಲ್ಲಂಘಿಸಿದ ಭಾರತೀಯರ ಖಾತೆಗಳನ್ನು ನಿಷೇಧ ಮಾಡಲಾಗಿದೆ. ಬಳಕೆದಾರರಿಂದ ಸ್ವೀಕರಿಸಿದ ದೂರುಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ. ಇದನ್ನೂ ಓದಿ: ಐಫೋನ್ ಬಳಸಿ ಈಗ ರಹಸ್ಯವಾಗಿ ಬೇರೆಯವರ ಮಾತುಗಳನ್ನು ಕೇಳಬಹುದು
Advertisement
ಅಕ್ಟೋಬರ್‌ನಲ್ಲಿ ಮೆಸೇಜಿಂಗ್ ವೇದಿಕೆಯಲ್ಲಿ ಸುಮಾರು 500 ಕುಂದು ಕೊರತೆ ದೂರುಗಳನ್ನು ಸ್ವೀಕರಿಸಲಾಗಿತ್ತು. ಆ ವೇಳೆ ಭಾರತೀಯರ 20 ಖಾತೆಗಳನ್ನು ನಿಷೇಧ ಮಾಡಲಾಗಿತ್ತು.