ಆಪಲ್ ಐಫೋನ್‌ನ ಲೈವ್ ಲಿಸನ್ ಫೀಚರ್ ಬಳಸಿಕೊಂಡು ಗೋಡೆ ಹಿಂಬದಿಯ ಅಥವಾ ಗುಟ್ಟಾಗಿ ನಡೆಸುತ್ತಿರುವ ಚರ್ಚೆಯನ್ನು ಆಲಿಸಲು ಬಳಸಬಹುದು ಎಂಬುದು ತಿಳಿದು ಬಂದಿದೆ. ಟಿಕ್‌ಟಾಕ್ ಬಳಕೆದಾರ ದಲಿಲಮೌಹಿಬ್ ಐಫೋನಿನ ಈ ವಿಶೇಷ ಅನುಭವವನ್ನು ವಿವರಿಸಿದ್ದಾನೆ.
ಐ ಫೋನ್‌ನ ಏರ್‌ಪಾಡ್‌ಗಳಿಂದ ನೀವು ರಹಸ್ಯ ಕಾರ್ಯಾಚರಣೆಯನ್ನು ಸುಲಭವಾಗಿ ಮಾಡಬಹುದು. ಬೇರೆ ಕೋಣೆಯಲ್ಲಿ ಜನರು ಸಂಭಾಷಣೆಯನ್ನು ನಡೆಸುತ್ತಿರುವ ವೇಳೆ ನೀವು ನಿಮ್ಮ ಫೋನ್ ಮರೆತು ಬಂದರೆ ಮತ್ತೊಂದು ಕೋಣೆಯಲ್ಲಿ ನಿಮ್ಮ ಏರ್‌ಪಾಡ್‌ಗಳ ಮೂಲಕ ಮರೆತು ಬಂದಿರುವ ಕೋಣೆಯಲ್ಲಿ ಏನು ಸಂಭಾಷಣೆ ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು ಎಂದಿದ್ದಾನೆ.
Advertisement
Advertisement
ಹೌದು! ಐ ಫೋನ್‌ನ ಲೈವ್ ಲಿಸನ್ ಫೀಚರ್ ಮತ್ತೊಂದು ಕೋಣೆಯಲ್ಲಿದ್ದರೂ ಆ ಕೋಣೆಯ ರಹಸ್ಯ ಮಾತುಕತೆಯನ್ನು ಆಲಿಸಬಹುದು. ಆಪಲ್ ಗದ್ದಲದ ವಾತಾವರಣದಲ್ಲಿ ಚರ್ಚೆಯನ್ನು ಕೇಳಲು ಅಥವಾ ಅತೀ ಸಣ್ಣ ಧ್ವನಿಯ ಮಾತನ್ನು ಕೇಳಿಸಿಕೊಳ್ಳಲು ಈ ಫೀಚರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: ಜಾಹೀರಾತಿನಲ್ಲಿ ಸಹಾಯವಾಣಿ ನಂಬರ್ ತಪ್ಪಾಗಿದ್ದಕ್ಕೆ ಮಹಿಳೆಗೆ ಎಡಬಿಡದೇ ಬಂತು 4,500 ಫೋನ್ ಕಾಲ್!
Advertisement
ಬಳಕೆದಾರರು ತಮ್ಮ ಐಫೋನ್, ಐಪ್ಯಾಡ್ ಅಥವಾ ಐಪಾಡ್‌ಗಳನ್ನು ಮೈಕ್ರೋಫೋನ್‌ಗಳಾಗಿ ಮಾರ್ಪಡಿಸಬಹುದು. ಇದಕ್ಕಾಗಿ ಲೈವ್ ಲಿಸನ್ ಅನ್ನು ಬಳಸಿಕೊಂಡು ಏರ್ ಪಾಡ್ಸ್, ಏರ್ ಪಾಡ್ಸ್ ಪ್ರೋ, ಏರ್ ಪಾಡ್ಸ್ ಮ್ಯಾಕ್ಸ್, ಪವರ್ ಬೀಟ್ಸ್ ಪ್ರೋ ಅಥವಾ ಬೀಟ್ಸ್ ಫಿಟ್ ಪ್ರೋಗೆ ಸಂಪರ್ಕಗೊಳಿಸಬೇಕು.
Advertisement
ಈ ಫೀಚರ್‌ನಲ್ಲಿ ಜನರ ಸಂಭಾಷಣೆ ಜೋರಾಗಿ ಹಾಗೂ ಸ್ಪಷ್ಟವಾಗಿ ಕೇಳಿಸುತ್ತದೆ. ಮುಖ್ಯವಾಗಿ ಶ್ರವಣ ದೋಷವಿರುವ ಜನರಿಗೆ ಇದನ್ನು ವಿನ್ಯಾಸ ಮಾಡಲಾಗಿದೆ. ಆದರೆ ಈ ಫೀಚರ್ ಬ್ಲೂಟೂತ್ ಸಂಪರ್ಕದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಇದನ್ನೂ ಓದಿ: ಆಪಲ್ ಉದ್ಯೋಗಿಗಳು ಆಫಿಸ್‌ಗೆ ಮರಳುವ ಪ್ಲ್ಯಾನ್ ಕ್ಯಾನ್ಸಲ್ – WFH ಮುಂದುವರಿಕೆ
ಯಾರಾದರೂ ನಿಮ್ಮ ವಿರುದ್ಧ ಪಿತೂರಿಯಿಂದ ಈ ಫೀಚರ್ ಅನ್ನು ಬಳಸಿಕೊಂಡಿದ್ದಾರೆಯೇ ಎಂದು ತಿಳಿದುಕೊಳ್ಳಲು ಸಾಧ್ಯವಿದೆ. ಐಫೋನ್‌ನಲ್ಲಿ ಲೈವ್ ಲಿಸನ್ ಸಕ್ರಿಯ ಗೊಳಿಸಿದ್ದರೆ, ಅದರ ಪರದೆಯ ಮೇಲಿನ ಎಡ ಮೂಲೆಯಲ್ಲಿ ಮೈಕ್ರೊಫೋನ್ ಐಕಾನ್ ಕಾಣಿಸಿಕೊಳ್ಳುತ್ತದೆ.