ವಾಷಿಂಗ್ಟನ್: ಓಮಿಕ್ರಾನ್ ಕೇಸ್‌ಗಳು ಹೆಚ್ಚಿದಂತೆ ವಿಶ್ವವ್ಯಾಪಿ ಹೆಚ್ಚಿನ ಕಂಪನಿಗಳು ಆಫಿಸ್‌ಗೆ ಮರಳುವ ಯೋಜನೆಯನ್ನು ಮುಂದೂಡಿದೆ. ಈ ಪಟ್ಟಿಯಲ್ಲಿ ಆಪಲ್ ಕಂಪನಿಯೂ ಒಂದಾಗಿದ್ದು, ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ವಿಧಾನವನ್ನೇ ಮುಂದುವರಿಸಲಾಗುತ್ತಿದೆ.
ಆಪಲ್ ಈ ಹಿಂದೆ ತನ್ನ ಉದ್ಯೋಗಿಗಳನ್ನು 2022ರ ಫೆಬ್ರವರಿ 1 ರಿಂದ ಆಫಿಸ್‌ಗೆ ಕರೆಸಿಕೊಳ್ಳುವ ಬಗ್ಗೆ ಯೋಜಿಸಿತ್ತು. ಆದರೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ವೈರಸ್‌ನ ಭೀತಿ ಎಲ್ಲೆಡೆ ಹೆಚ್ಚಾಗಿದ್ದು, ಈ ಗಡುವನ್ನು ಮುಂದಕ್ಕೆ ಹಾಕಲು ಯೋಜಿಸಿದೆ. ಇದನ್ನೂ ಓದಿ: ಜಪಾನ್‌ನ ಕ್ಲಿನಿಕ್‌ನಲ್ಲಿ ಅಗ್ನಿ ದುರಂತ – 27 ಜನರ ಸಾವು
Advertisement
Advertisement
ಪ್ರಪಂಚದ ಎಲ್ಲಾ ಭಾಗಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಆಫಿಸ್‌ಗೆ ಕರೆಸಿಕೊಳ್ಳುವ ಯೋಜನೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆಪಲ್ ಕಂಪನಿಯ ಸಿಇಒ ಟಿಮ್ ಕುಕ್ ಉದ್ಯೋಗಿಗಳಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ.
Advertisement
ಆಪಲ್ ತನ್ನ ಎಲ್ಲಾ ಉದ್ಯೋಗಿಗಳಿಗೂ ವ್ಯಾಕ್ಸಿನೇಷನ್ ಹಾಗೂ ಬೂಸ್ಟರ್ ಡೋಸ್‌ಗಳನ್ನು ಪಡೆಯಲು ಪ್ರೋತ್ಸಾಹಿಸುತ್ತಿರುವುದರೊಂದಿಗೆ ವರ್ಕ್ ಫ್ರಮ್ ಹೋಮ್ ವಿಧಾನ ದಿಂದ ಉದ್ಯೋಗಿಗಳು ಹಾಗೂ ಅವರ ಸಮುದಾಯದವರು ಸುರಕ್ಷಿತವಾಗಿ ಇರಬಹುದು ಎಂದು ಹೇಳಿದೆ. ಇದನ್ನೂ ಓದಿ: ಮಗನ ಕೈ ಹಿಡಿದಿರುವ ವೀಡಿಯೋ ಶೇರ್ ಮಾಡಿದ ನುಸ್ರತ್ ಜಹಾನ್
Advertisement
ಆಪಲ್ ಮಾತ್ರವಲ್ಲದೇ ಗೂಗಲ್, ಮೈಕ್ರೊಸಾಫ್ಟ್ಗಳಂತಹ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಕೂಡಾ ಉದ್ಯೋಗಿಗಳನ್ನು ಆಪಿಸ್‌ಗೆ ಕರೆಸುವ ಯೋಜನೆಯನ್ನು ಸದ್ಯ ಕೈ ಬಿಟ್ಟಿದೆ.