ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವಕಾಶ ಸಿಕ್ಕಾಗಲೆಲ್ಲಾ ಜನರೊಂದಿಗೆ ಆತ್ಮೀಯವಾಗಿ ಬೆರೆಯುತ್ತಾರೆ. ಈ ಹಿಂದೆ ಪಾನಿಪುರಿ ವಿಚಾರವಾಗಿ ಸುದ್ದಿ ಆಗಿದ್ದ ದೀದಿ, ಈ ಬಾರಿ ಮೊಮೊಸ್ ತಯಾರು ಮಾಡುವ ಮೂಲಕ ಪ್ರಚಲಿತದಲ್ಲಿದ್ದಾರೆ.
Advertisement
ಹೌದು. ಇಂದು ಮುಂಜಾನೆ ಡಾರ್ಜಲಿಂಗ್‍ನ ಸ್ಥಳೀಯ ಸ್ಟಾಲ್ ಒಂದರಲ್ಲಿ ಮೊಮೊಸ್ ತಯಾರಿಸುವ ಮೂಲಕ ದೀದಿ ತಮ್ಮ ಪಾಕ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಮುಖ್ಯಮಂತ್ರಿಯವರ ಕೆಲಸ ಕಂಡ ಜನ ಬೆರಗಾಗಿದ್ದಾರೆ.
Advertisement
#WATCH | West Bengal CM Mamata Banerjee displayed her culinary skills as she prepared momos at a local stall in Darjeeling earlier today pic.twitter.com/rcd10keMwt
— ANI (@ANI) July 14, 2022
Advertisement
ಇತ್ತೀಚೆಗಷ್ಟೇ ಡಾರ್ಜಿಲಿಂಗ್‍ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸ್ಟಾಲ್‍ನಲ್ಲಿ ಮಮತಾ ಬ್ಯಾನರ್ಜಿಯವರು ತಮ್ಮ ಕೈಯಾರೆ ಜನರಿಗೆ ಪಾನಿಪುರಿ ಬಡಿಸಿ ಸುದ್ದಿಯಾಗಿದ್ದರು. ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಸ್ವತಃ ಬ್ಯಾನರ್ಜಿ ಪಾನಿಪುರಿಯನ್ನು ಬಡಿಸಿದ್ದಾರೆ. ಮಮತಾ ಕೈಯಾರೇ ಬಡಿಸಿದ ಪಾನಿಪುರಿಯನ್ನು ಸವಿಯಲು ಜನರು ಸ್ಥಳದಲ್ಲಿ ಮುಗಿಬಿದ್ದಿದ್ದರು.