BollywoodCinemaLatestNational

ಸೆಲ್ಫೀಗಾಗಿ ಬಂದ ಅಭಿಮಾನಿ ಮೇಲೆ ಕೋಪಗೊಂಡ ಜಯಾ ಬಚ್ಚನ್: ವಿಡಿಯೋ

ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ತಮ್ಮ ಜೊತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದ ಅಭಿಮಾನಿಯ ಮೇಲೆ ಸಾರ್ವಜನಿಕವಾಗಿ ಕೋಪಗೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಯಾ ಬಚ್ಚನ್ ಗಣೇಶ ಚತುರ್ಥಿಯಂದು ದೇವಾಸ್ಥನಕ್ಕೆ ತೆರಳಿದ್ದರು. ದೇವಾಸ್ಥನದಿಂದ ಹಿಂತಿರುವಾಗ ಅಭಿಮಾನಿಯೊಬ್ಬ ನಟಿ ಜಯಾ ಅವರ ಜೊತೆ ಸೆಲ್ಫೀ ತೆಗೆದುಕೊಳ್ಳಲು ಪ್ರಯತ್ನಿಸಿದ್ದನು. ಅದನ್ನು ನೋಡಿದ ಜಯಾ ಕೋಪಗೊಂಡು ಈ ರೀತಿ ಮಾಡಬೇಡಿ (ಡೋನ್ಟ್ ಡು ಡಟ್ ಸ್ಟುಪಿಡ್) ಎಂದು ಹೇಳಿ ಹೋಗಿದ್ದಾರೆ.

ಕಳೆದ ವಾರ ನಟಿ ಇಶಾ ಡಿಯೋಲ್ ಸೀಮಂತದ ಕಾರ್ಯಕ್ರಮದಲ್ಲಿ ಅಲ್ಲಿಗೆ ಬಂದ ಪುರೋಹಿತರು ಸೆಲೆಬ್ರೀಟಿಗಳ ಹತ್ತಿರ ಫೋಟೋ ತೆಗೆದುಕೊಳ್ಳುತ್ತಿದ್ದರು. ಅದನ್ನು ನೋಡಿದ ನಟಿ ಜಯಾ ಪೂಜೆಯ ಮೇಲೆ ಧ್ಯಾನವಿರಲಿ (ಆಪ್ ಪೂಜಾ ಮೇ ಧ್ಯಾನ್ ದೀಜಿಯೇ) ಎಂದು ಪುರೋಹಿತರಿಗೆ ಹೇಳಿದ್ದರು.

ಈ ಮೊದಲು ನಟಿ ಜಯಾ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಷಣವನ್ನು ಮಾಡುವಾಗ ಕಾಲೇಜಿನ ವಿದ್ಯಾರ್ಥಿಗಳು ನಟಿ ಜಯಾ ಅವರ ಫೋಟೋ ತೆಗೆದುಕೊಳುತ್ತಿದ್ದರು. ಅದನ್ನು ನೋಡಿದ ಜಯಾ ಫೋಟೋ ತೆಗೆಯುವುದನ್ನು ನಿಲ್ಲಿಸಿ. ನಿಮ್ಮ ಹತ್ತಿರ ಕ್ಯಾಮೆರಾ ಮತ್ತು ಮೊಬೈಲ್ ಇದೆ ಅಂತ ಆ ವ್ಯಕ್ತಿಯನ್ನು ಕೇಳದೆ ಅವರ ಫೋಟೋ ತೆಗೆದುಕೊಳ್ಳಲು ನಿಮಗೆ ಯಾವುದೇ ಹಕ್ಕಿಲ್ಲ ಎಂದು ವಿದ್ಯಾರ್ಥಿಗಳ ವಿರುದ್ಧ ಗರಂ ಆಗಿದ್ದರು.

 

Leave a Reply

Your email address will not be published.

Back to top button