ಲಕ್ನೋ: ಉತ್ತರ ಪ್ರದೇಶದ (Uttara Pradesh) ಅಯೋಧ್ಯೆಯಲ್ಲಿ (Ayodhya) ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸರ ತಂಡ ನಡೆಸಿದ ಎನ್‌ಕೌಂಟರ್‌ಗೆ (Encounter) 40ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಸುಪಾರಿ ಕಿಲ್ಲರ್ ಬಲಿಯಾಗಿದ್ದಾನೆ. ಎನ್‌ಕೌಂಟರ್ ವೇಳೆ ಇಬ್ಬರೂ ಪೊಲೀಸರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಭಾನು ಪ್ರತಾಪ್ ಸಿಂಗ್ ಪೊಲೀಸರ ಗುಂಡಿಗೆ ಬಲಿಯಾದ ಕ್ರಿಮಿನಲ್. ಈತ ಸುಮಾರು 40 ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದ. ಈತನ ತಲೆಗೆ 1.65 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಎನ್‌ಕೌಂಟರ್‌ನಲ್ಲಿ ಭಾನು ಪ್ರತಾಪ್ ಸಿಂಗ್ ಗಾಯಗೊಂಡಿದ್ದ. ಆಸ್ಪತ್ರೆಗೆ ಕರೆತರುವಾಗ ಆತ ಸಾವನ್ನಪ್ಪಿದ್ದಾನೆ ಎಂದು ಎಸ್‌ಟಿಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಡುಗೋಡಿ ಬಾಲಕಿ ಮರ್ಡರ್ ಕೇಸ್‌ಗೆ ಟ್ವಿಸ್ಟ್ – ಹೊಸ ಜೀವನ ಶುರು ಮಾಡಲು ಅಡ್ಡಿಯಾಗಿದ್ದಳಾ ಮಗಳು?
ಸಿಂಗ್ ಅಪರಾಧ ಹಿನ್ನೆಲೆ ಹೊಂದಿದ್ದ. ಕೊಲೆ, ಸುಲಿಗೆ ಮತ್ತು ಡಕಾಯಿತಿ ಸೇರಿದಂತೆ ವಿವಿಧ ಕ್ರಿಮಿನಲ್ ಅಪರಾಧಗಳಲ್ಲಿ ಆತನ ಹೆಸರಿತ್ತು. ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಪೊಲೀಸರು ಆತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು.
ಅಜಮ್‌ಗಢ ಪೊಲೀಸರು ಸಿಂಗ್ ಸುಳಿವು ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಅಲ್ಲದೇ ಅಂಬೇಡ್ಕರ್ ನಗರ ಪೊಲೀಸರು ಪ್ರತ್ಯೇಕವಾಗಿ 50,000 ರೂ. ಘೋಷಿಸಿದ್ದರು. ಗೋರಖ್‌ಪುರ ಪೊಲೀಸರು ಕೂಡ ಆತನ ಸುಳಿವು ಕೊಟ್ಟವರಿಗೆ 15,000 ರೂ. ಬಹುಮಾನ ಘೋಷಿಸಿದ್ದರು. ಇದನ್ನೂ ಓದಿ: Vijayapura | ಪಾನ್ ಶಾಪ್‌ನಲ್ಲಿ ನಿಗೂಢ ಸ್ಫೋಟ – ಮೂವರಿಗೆ ಗಾಯ
