ಇಂಗ್ಲೆಂಡ್: ಯುಎಇನಲ್ಲಿ ನಡೆಯಲಿರುವ ಐಪಿಎಲ್ 14ನೇ ಅವೃತ್ತಿಯ ಟೂರ್ನಿಗಾಗಿ ನಾಯಕ ವಿರಾಟ್ ಕೊಹ್ಲಿ ಮ್ಯಾಂಚೆಸ್ಟರ್‍ನಿಂದ ದುಬೈಗೆ ಹಾರಲಿದ್ದಾರೆ.
ನಾಯಕ ವಿರಾಟ್ ಕೊಹ್ಲಿಗಾಗಿ ಆರ್‍ಸಿಬಿಯ ಫ್ರಾಂಚೈಸಿ ಪ್ರತ್ಯೆಕ ವಿಮಾನವೊಂದನ್ನು ನಿಯೋಜನೆ ಮಾಡಿದೆ. ಕೊಹ್ಲಿಯ ಜೊತೆ ಮತ್ತೊಬ್ಬ ಆಟಗಾರ ಸಿರಾಜ್ ಕೂಡ ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ. ದುಬೈ ತಲುಪಿದ ಬಳಿಕ ಆಟಗಾರರು ಆರು ದಿನಗಳ ಕಾಲ ಕ್ವಾರಂಟೈನ್‍ಗೆ ಒಳಪಡಲಿದ್ದಾರೆ. ಇದನ್ನೂ ಓದಿ: ಇದೇ ಧೋನಿಯ ಕೊನೆಯ ಐಪಿಎಲ್?
ಕಳೆದ ಏಪ್ರಿಲ್ 9 ರಂದು 14ನೇ ಅವೃತ್ತಿಯ ಐಪಿಎಲ್ ಪಂದ್ಯಗಳು ಆರಂಭಗೊಂಡಿದ್ದವು. ಕೊರೊನಾ ಕಾರಣದಿಂದಾಗಿ ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಗಳನ್ನು ಬಿಸಿಸಿಐ ಅರ್ಧಕ್ಕೆ ಮೊಟಕುಗೊಳಿಸಿತ್ತು. ಉಳಿದ ಅರ್ಧ ಪಂದ್ಯಗಳನ್ನು ಬಿಸಿಸಿಐ ಯುಎಇ ನಲ್ಲಿ ನಡೆಸುವುದಾಗಿ ತಿಳಿಸಿತ್ತು. ಅದರಂತೆ ಇದೀಗ ಸೆಪ್ಟೆಂಬರ್ 19ರಿಂದ ಮತ್ತೆ ಟೂರ್ನಿಗೆ ಚಾಲನೆ ಸಿಗಲಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ
ಮೊದಲಾರ್ಧ ನಡೆದ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿ ಅಭಿಮಾನಿಗಳಲ್ಲಿ ಈ ಸಲ ಕಪ್ ನಮ್ಮದೆ ಎಂಬ ಭರವಸೆಯನ್ನು ಮೂಡಿಸಿತ್ತು. ಈಗ ಮತ್ತೆ ಐಪಿಎಲ್ ಪಂದ್ಯಾವಳಿಗಳು ಶುರುವಾಗಲಿದ್ದು, ನಾಯಕ ವಿರಾಟ್ ಕೊಹ್ಲಿ ಸಾರಥ್ಯದ ಬೆಂಗಳೂರು ತಂಡ ಅಭಿಮಾನಿಗಳಲ್ಲಿ ಕಾತರತೆಯನ್ನು ಹೆಚ್ಚಿಸಿದೆ.