– ರಾಯಚೂರಿನಲ್ಲಿ ಎರಡು ಕಡೆ ಇಡಿ ದಾಳಿ
ರಾಯಚೂರು: ಕೆಪಿಎಸ್‌ಸಿ ಹಗರಣ ಹಿನ್ನೆಲೆ ರಾಜ್ಯದ ಹಲವೆಡೆ ನಡೆದ ಇಡಿ ಅಧಿಕಾರಿಗಳ ದಾಳಿ ರಾಯಚೂರಿನಲ್ಲಿ ಗ್ರಾಮಸ್ಥರನ್ನ ಅಚ್ಚರಿಗೊಳಿಸಿದೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮೂಲ ಜಿಲ್ಲೆ ರಾಯಚೂರಿನಲ್ಲಿ (Raichuru) ಎರಡು ಕಡೆಗಳಲ್ಲಿ ಮಂಗಳವಾರ (ಆ.18) ದಾಳಿ ನಡೆಸಿ, ಇಡಿ ಅಧಿಕಾರಿಗಳು (ED Officers) ಪರಿಶೀಲನೆ ಮಾಡಿದ್ದಾರೆ.
ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳ ಕುಟುಂಬಗಳ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರಿಂದ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ದೇವದುರ್ಗದ ಶಾವಂತಗೇರಾ ಹಾಗೂ ಮಸ್ಕಿ ತಾಲ್ಲೂಕಿನ ಚಿಕ್ಕಕಡಬೂರು ಗ್ರಾಮದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಷ್ಟ್ರಗೀತೆಗೂ ಮೊದಲು ತಮಿಳು ರಾಜ್ಯಗೀತೆ ಹಾಡಲು ಮದ್ರಾಸ್ ಹೈಕೋರ್ಟ್ ಅನುಮತಿ
ಶಾವಂತಗೇರಾದಲ್ಲಿ ಪಶುವೈದ್ಯಾಧಿಕಾರಿಯಾಗಿ ಆಯ್ಕೆಯಾಗಿರುವ ಸುಗೂರೇಶ್ ಮನೆ ಹಾಗು ಚಿಕ್ಕಕಡಬೂರಿನಲ್ಲಿ ಪಶುವೈದ್ಯಾಧಿಕಾರಿಯಾಗಿ ಆಯ್ಕೆಯಾಗಿರುವ ಅಮರೇಗೌಡ ವಿರುಪಾಪುರ ಮನೆ ಮೇಲೆ ಸಿಆರ್‌ಪಿಎಫ್ ಭದ್ರತೆಯಲ್ಲಿ ಪರಿಶೀಲನೆ ಮಾಡಲಾಗಿದೆ. ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳ ಪರಿಶೀಲನೆ ಹಿನ್ನೆಲೆ ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ.
ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದ ಸುಗೂರೇಶ್ ಮನೆ ಮೇಲೆ ದಾಳಿ ವಿಚಾರ ಹಿನ್ನೆಲೆ ಬದುಕಲು ಕಷ್ಟಪಡುತ್ತಿರುವ ಕುಟುಂಬ ಕೆಲಸಕ್ಕಾಗಿ ಲಕ್ಷಾಂತರ ರೂ. ಕೊಡಲು ಸಾಧ್ಯವಾ ಅಂತ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಡಿ ಅಧಿಕಾರಿಗಳ ದಾಳಿಯಿಂದ ಇಡೀ ಗ್ರಾಮಕ್ಕೆ ಅಚ್ಚರಿ ಉಂಟಾಗಿದೆ. ಒಂದೇ ಕೋಣೆಯ ಪುಟ್ಟ ಮನೆಯಲ್ಲಿರುವ ಕುಟುಂಬದ ಮೇಲೆ ಇಡಿ ದಾಳಿಗೆ ಗ್ರಾಮಸ್ಥರು ಅಸಮಧಾನ ಹೊರಹಾಕಿದ್ದಾರೆ.
ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೂ ಕುಟುಂಬಕ್ಕೂ ಸಂಬಂಧಿವಿಲ್ಲ, ಸಂಬಂಧಿಕರೂ ಅಲ್ಲ ಕೇವಲ ಪರಿಚಯವಿದೆ ಅಷ್ಟೇ. ಸುಮಾರು 6 ಗಂಟೆ ಮನೆಯಲ್ಲಿ ಪರಿಶೀಲನೆ ಮಾಡಿದ್ರೂ ಏನೂ ಸಿಕ್ಕಿಲ್ಲ. ಅಧಿಕಾರಿಗಳು ಸರಿಯಾದ ಮಾಹಿತಿ ಇಲ್ಲದೆ ದಾಳಿ ಮಾಡಿದ್ದಾರೆ ಅಂತ ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ರಾಯಬಾಗ | 45 ವರ್ಷಗಳಿಂದ ಉಳುಮೆ ಮಾಡ್ತಿದ್ದ ಜಮೀನು ನಮ್ಮದೆಂದು ಬಂದ PWD: ಅನ್ನದಾತರ ಆಕ್ರೋಶ

