– ಎಸಿಬಿ ದಾಳಿ ವೇಳೆ ಪತ್ತೆಯಾಯ್ತು ಭಾರೀ ಆಸ್ತಿ
ತೆಲಂಗಾಣ: ಸರ್ಕಾರಿ ಎಂಜಿನಿಯರ್ಗೆ ಸೇರಿದ 10 ಸ್ಥಳಗಳಲ್ಲಿ ಎಸಿಬಿ ನಡೆಸಿದ ದಾಳಿ ವೇಳೆ ಭಾರೀ ಪ್ರಮಾಣದ ಸಂಪತ್ತು ಪತ್ತೆಯಾಗಿದೆ. 7 ಕೋಟಿ ಮೌಲ್ಯದ ವಿಲ್ಲಾ, 50 ಕೆಜಿ ಚಿನ್ನ, 25 ಎಕರೆ ಭೂಮಿ ಆಸ್ತಿ ಇರುವುದು ತಿಳಿದುಬಂದಿದೆ.
ನಾಗರಕರ್ನೂಲ್ ಜಿಲ್ಲೆಯ ನೀರಾವರಿ ಮತ್ತು ಕಮಾಂಡ್ ಏರಿಯಾ ಅಭಿವೃದ್ಧಿ (ಸಿಎಡಿ) ಇಲಾಖೆಯ ಉಪ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಸತ್ಯನಾರಾಯಣ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ (ACB) 10 ಸ್ಥಳಗಳಲ್ಲಿ ನಡೆಸಿದ ಶೋಧದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಗುರುತಿಸಿದೆ. ಇದನ್ನೂ ಓದಿ: ಮಹಿಳೆಯ ನಗ್ನ ಫೋಟೋಗಳ ಆಸೆಗೆ ಬಿದ್ದು ಪಾಕಿಗೆ ಯುದ್ಧ ತಂತ್ರ ಸೂಕ್ಷ್ಮ ಮಾಹಿತಿ ರವಾನೆ – IAF ಅಧಿಕಾರಿಯ ವಿರುದ್ಧ ಚಾರ್ಜ್
ಹೈದರಾಬಾದ್ನಲ್ಲಿರುವ ಸತ್ಯನಾರಾಯಣ ಅವರ ನಿವಾಸ, ವನಪರ್ತಿ ಜಿಲ್ಲೆಯ ಅವರ ಹುಟ್ಟೂರು ಶಾಪೂರ್ ಗ್ರಾಮ ಮತ್ತು ಅವರ ಸಂಬಂಧಿಕರು, ಸ್ನೇಹಿತರು, ಆರೋಪಿತ ಬೇನಾಮಿ ಮತ್ತು ಸಹಚರರ ಆವರಣದಲ್ಲಿ ಶೋಧ ನಡೆಸಲಾಯಿತು. ಸರ್ಕಾರಿ ಸೇವೆಯ ಅವಧಿಯಲ್ಲಿ ಭ್ರಷ್ಟಾಚಾರ, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ಎಸಿಬಿ ದಾಳಿ ನಡೆಸಿತ್ತು.
ಸತ್ಯನಾರಾಯಣ ಅವರು 2005 ರಲ್ಲಿ ಸಹಾಯಕ ಎಂಜಿನಿಯರ್ ಆಗಿ ಸರ್ಕಾರಿ ಸೇವೆಗೆ ಸೇರಿದರು. ಅವರು ತಮ್ಮ ಆದಾಯವನ್ನು ಮೀರಿ ಸಂಪತ್ತು ಗಳಿಸಿದ್ದಾರೆ ಎಂಬ ಆರೋಪದ ನಂತರ ಎಸಿಬಿ ತನಿಖೆ ಆರಂಭಿಸಿತು. ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಸೆಕ್ಷನ್ 13(1)(ಬಿ) ಮತ್ತು 13(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್ ಸೇವೆಯಲ್ಲಿ ವ್ಯತ್ಯಯ – ಭಾರತ ಸೇರಿ 74 ದೇಶಗಳಲ್ಲಿ ಸಮಸ್ಯೆ
