ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

Public TV
1 Min Read
FotoJet 1 50

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ 3 ಡಿ ಟ್ರೈಲರ್ ನಿನ್ನೆಯಷ್ಟೇ ರಿಲೀಸ್ ಆಗಿದೆ. ಕೇವಲ ಮಾಧ್ಯಮದವರಿಗೆ ಮತ್ತು ಸಿಲಿಬ್ರಿಟಿಗಳಿಗೆ ಮಾತ್ರ ಟ್ರೈಲರ್ ತೋರಿಸಲಾಗಿದೆ. ಪ್ರತಿಯೊಬ್ಬರು ಟ್ರೈಲರ್ ಬಗ್ಗೆ ಹಾಡಿಹೊಗಳುತ್ತಿರುವ ಕಾರಣದಿಂದಾಗಿ ಅಭಿಮಾನಿಗಳಿಗೆ ಆ ಟ್ರೈಲರ್ ನೋಡುವ ಕಾತರ ಹೆಚ್ಚಾಗಿದೆ. ಅಲ್ಲದೇ, ಇಂದು ವಿಶೇಷವಾಗಿ ನಾಲ್ಕು ಸ್ಟಾರ್ ನಟರು ಆ ಟ್ರೈಲರ್ ಬಿಡುಗಡೆ ಮಾಡುತ್ತಿರುವುದರಿಂದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

vikranth rona 3 1

ಇಂದು ಸಂಜೆ 5.02 ನಿಮಿಷಕ್ಕೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಟ್ರೈಲರ್ ರಿಲೀಸ್ ಆಗುತ್ತಿದ್ದು, ಹಿಂದಿಯಲ್ಲಿ ಸಲ್ಮಾನ್ ಖಾನ್, ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ರಾಮ್ ಚರಣ್ ತೇಜ್, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಬಿಡುಗಡೆ ಮಾಡುತ್ತಿದ್ದಾರೆ. ನಿನ್ನೆ ಕನ್ನಡದಲ್ಲಿ ರವಿಚಂದ್ರನ್, ಶಿವರಾಜ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಟ್ರೈಲರ್ ಬಿಡುಗಡೆ ಮಾಡಿದ್ದರಿಂದ, ಬಹುಶಃ ಅದನ್ನು ಅಷ್ಟಕ್ಕೆ ಸೀಮಿತಗೊಳಿಸುತ್ತಾರಾ? ಅಥವಾ ಸಂಜೆಯೊಳಗೆ ಸ್ಟಾರ್ ನಟರೊಬ್ಬರ ಹೆಸರನ್ನು ಘೋಷಿಸುತ್ತಾರೆ ಎನ್ನುವುದು ಸಸ್ಪನ್ಸ್. ಇದನ್ನೂ ಓದಿ:ಪತಿ ದಿಗಂತ್ ನೆನೆದು ಭಾವುಕರಾದ ನಟಿ ಐಂದ್ರಿತಾ ರೇ : ಈಗ ಹೇಗಿದ್ದಾರೆ ನಟ ದಿಗಂತ್?

vikranth rona 1

ಅಭಿಮಾನಿಗಳ ಉಡಿಗೆ ಟ್ರೈಲರ್ ಹಾಕಿ ಇತ್ತ ಸಿನಿಮಾದ ಪ್ರಚಾರಕ್ಕಾಗಿ ದೇಶಾದ್ಯಂತ ಪ್ರವಾಸಕ್ಕೆ ಹೊರಟಿದ್ದಾರೆ ಸುದೀಪ್ ಮತ್ತು ಟೀಮ್. ಕನ್ನಡದಲ್ಲಿ ಈಗಾಗಲೇ ಪ್ರಚಾರ ಶುರು ಮಾಡಿದ್ದರಿಂದ, ಬೇರೆ ನಾಲ್ಕು ಭಾಷೆಯ ಸಿನಿಮಾಗಾಗಿ ಅವರು ಕೊಚ್ಚಿ, ಹೈದರಾಬಾದ್, ಮುಂಬೈ, ಚೆನ್ನೈ ಸುತ್ತಲಿದ್ದಾರೆ. ಇಂದು ಮುಂಬೈನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿದ್ದು, ಜೂ.24 ರಂದು ಚೆನ್ನೈ ಮತ್ತು ಕೊಚ್ಚಿಯಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಲಾಗಿದೆ. ಜೂ.25 ರಂದು ಹೈದಾರಾಬಾದ್ ನಲ್ಲಿ ಇರಲಿದೆ ಕಿಚ್ಚ ಅಂಡ್ ಟೀಮ್.

Live Tv

Share This Article