CinemaKarnatakaLatestMain PostSandalwood

ಪತಿ ದಿಗಂತ್ ನೆನೆದು ಭಾವುಕರಾದ ನಟಿ ಐಂದ್ರಿತಾ ರೇ : ಈಗ ಹೇಗಿದ್ದಾರೆ ನಟ ದಿಗಂತ್?

Advertisements

ಗೋವಾ ಟ್ರಿಪ್ ಗೆ ಹೋಗಿ ಸಮರ್ ಸಾಲ್ಟ್ ನಿಂದಾಗಿ ಆಸ್ಪತ್ರೆ ಸೇರಿಕೊಂಡಿದ್ದ ದಿಗಂತ್ ಅವರ ಆರೋಗ್ಯದಲ್ಲಿ ಭಾರೀ ಚೇತರಿಕೆ ಕಾಣಿಸಿಕೊಂಡಿದೆ. ನಿನ್ನೆ ಅವರಿಗೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು. ಇಂದು ಅವರನ್ನು ಐಸಿಯುನಲ್ಲಿ ಆಬ್ಸರ್ವೇಶನ್ ಇಡಲಾಗಿತ್ತು. ಗೋವಾದಿಂದ ಏರ್ ಅಂಬ್ಯುಲೆನ್ಸ್ ನಲ್ಲಿ ದಿಗಂತ್ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು ಎನ್ನುವ ಕಾರಣಕ್ಕಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು.

ಈ ಕುರಿತು ಮಾತನಾಡಿರುವ ದಿಗಂತ್ ಪತ್ನಿ, ನಟಿ ಐಂದ್ರಿತಾ ರೇ, ‘ದಿಗಂತ್ ನಾವು ಗೋವಾಗೆ ವೆಕೆಷನ್ ಟ್ರಿಪ್ ಹೋಗಿದ್ದೆವು. ಅಲ್ಲಿ ಅವರಿಗೆ ಸಮರ್ ಸಾಲ್ಟ್ ಆಗಿ ಸ್ವಲ್ಪ ರಾಂಗ್ ಆಗಿ ಪೆಟ್ಟಾಗಿದೆ. ಮೊದಲಿಗೆ ಗೋವಾ ಮಣಿಪಾಲ್ ಆಸ್ಪತ್ರೆ ಗೆ ಹೋದೆವು. ಡ್ಯಾಮೇಜ್ ಜಾಸ್ತಿ ಆಗ್ಬೇಕಾಗಿತ್ತು ಆದರೆ, ಸದ್ಯ ಆಗಿಲ್ಲ. ಚಿಕಿತ್ಸೆಗಾಗಿ  ಏರ್ ಲಿಫ್ಟ್ ಮಾಡುತ್ತೇವೆ ಎಂದಾಗ ಅದಕ್ಕೆ ಗೋವಾ ಸರ್ಕಾರ ತುಂಬಾನೇ ಸಹಕಾರ ನೀಡಿತು. ಸರ್ಜರಿ ಆಗಿದೆ, ದಿಗಂತ್ ಚೇತರಿಸಿಕೊಳ್ತಿದ್ದಾನೆ  ಗೋವಾದಲ್ಲಿ ಇದ್ದಾಗ ತುಂಬಾ ಟೆನ್ಷನ್ ಆಗಿದ್ದ ದಿಗಂತ್, ಆಪರೇಷನ್ ಆದ್ಮೆಲೆ ನಗ್ತಿದ್ದಾನೆ. ಇನ್ಮೇಲೆ ದಿಗಂತ್ ನ ಟೇಕ್ ಕೇರ್ ಮಾಡ್ತೀನಿ’ ಎಂದಿದ್ದಾರೆ. ಇದನ್ನೂ ಓದಿ:ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

ದಿಗಂತ್ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರ ಪ್ರಕಾರ “ನಟ ದಿಗಂತ್ ಕುತ್ತಿಗೆ ಪ್ಯಾಕ್ಚರ್ ಆಗಿತ್ತು. ಅದನ್ನ ಆಪರೇಷನ್ ಮಾಡಿದ್ದೇವೆ. ನಿನ್ನೆಗಿಂತ ಇಂದು ಆಕ್ಟೀವ್ ಆಗಿದ್ದಾರೆ. ಅವ್ರೆ ಎದ್ದು ಟಾಯ್ಲೆಟ್ ಹೋಗ್ತಿದ್ದಾರೆ, ಊಟ ಮಾಡ್ತಿದ್ದಾರೆ ಯಾವುದೇ ಸ್ಪೋರ್ಟ್ ನಲ್ಲಿ ಭಾಗಿಯಾಗಬಹುದು. ಪಿಸಿಷಿಯನ್ ಹಾಗೂ ನ್ಯುರಾಜಿಸ್ಟ್ ಗಳ ಅಭಿಪ್ರಾಯ ಕೇಳಿಕೊಂಡು ಡಿಸ್ಚಾರ್ಜ್ ಮಾಡಲಾಗುತ್ತದೆ. ಇಂದು ಅಥವಾ ನಾಳೆ ಡಿಸ್ಚಾರ್ಜ್ ಮಾಡಲಾಗುವುದು’ ಎಂದಿದ್ದಾರೆ ಡಾ. ವಿದ್ಯಾಧರ್.

Live Tv

Leave a Reply

Your email address will not be published.

Back to top button