ಕಾರವಾರ: ಆಶ್ರಯ ನೀಡಿದ್ದ ಅಭಿಮಾನಿಯೊಡನೆ ಕಿರಿಕ್ ಮಾಡಿಕೊಂಡು ಮನೆಯಲ್ಲಿ ಹಲ್ಲಿ ಕಾರಣ ಹೇಳಿ ನಟಿ ವಿಜಯಲಕ್ಷ್ಮಿ ಮನೆ ಬಿಟ್ಟು ಬಂದಿದ್ದಾರೆ.
Advertisement
ಕೊರೊನಾ ಬಂದು ಆಸ್ಪತ್ರೆಯ ಬಿಲ್ ಕಟ್ಟಲಾಗದೇ ತೊಂದರೆಗೊಳಗಾಗಿದ್ದ ವಿಜಯಲಕ್ಷ್ಮಿ, ತಾನು ಬದುಕುವುದಿಲ್ಲ ಸಹಾಯ ಬೇಕಿದೆ. ಉಳಿದುಕೊಳ್ಳಲು ನನಗೆ ಮನೆ ಬೇಕಿದೆ ಎಂದು ಫೇಸ್ ಬುಕ್ ಮೂಲಕ ತಮ್ಮ ನೋವು ತೋಡಿಕೊಂಡಿದ್ದರು. ಇದನ್ನೂ ಓದಿ: ಬ್ಯಾಂಕ್‍ನಲ್ಲಿ ಹಿಂದಿ ಬೇಡ, ಚೆಕ್ಕುಗಳು ಕನ್ನಡದಲ್ಲೇ ಇರಬೇಕು: ವಾಟಾಳ್
Advertisement
ಇದನ್ನು ಗಮನಿಸಿದ್ದ ಉತ್ತರ ಕನ್ನಡ ಜಿಲ್ಲೆಯ ದೀಪಾ ತುಕರಾಮ್ ನಾಯ್ಕ ಅವರು, ಫೇಸ್ ಬುಕ್ ಮೂಲಕ ವಿಜಯಲಕ್ಷ್ಮಿ ಅವರನ್ನು ಸಂಪರ್ಕ ಮಾಡಿ ಅವರ ಆಸ್ಪತ್ರೆ ಬಿಲ್ ಮೊತ್ತ 30,000 ರೂಪಾಯಿಯನ್ನು ತಾವೇ ಭರಿಸಿದ್ದರು. ನಂತರ ಹೊನ್ನಾವರದ ಕರ್ಕಿಯಲ್ಲಿದ್ದ ತಂದೆ ತುಕಾರಾಮ್ ಅವರಿಗೆ ಕರೆ ಮಾಡಿ ಮನೆಯ ವ್ಯವಸ್ಥೆ ಮಾಡಲು ತಿಳಿಸಿದ್ದರು. ಆದರಂತೆ ತುಕಾರಾಮ್ ಕರ್ಕಿಯಲ್ಲಿ ತಮ್ಮದೇ ವೆಚ್ಚದಲ್ಲಿ ನಾಲ್ಕು ಸಾವಿರ ರೂಪಾಯಿಗೆ ಬಾಡಿಗೆ ಮನೆ ಮಾಡಿ ಅವರ ಕುಟುಂಬವನ್ನು ತಮ್ಮದೇ ವೆಚ್ಚದಲ್ಲಿ ಆರು ದಿನಗಳ ಕಾಲ ನೋಡಿಕೊಂಡಿದ್ದಾರೆ. ಇದನ್ನೂ ಓದಿ: ಮಾತನಾಡುವ ನೆಪದಲ್ಲಿ ವಿದ್ಯಾರ್ಥಿಯಿಂದ ಮೊಬೈಲ್ ಪಡೆದ- ಹಲ್ಲೆ ಮಾಡಿ, ಫೋನ್ ಕದ್ದ
Advertisement
ಬಂದಾಗಿನಿಂದ ಕಿರಿಕ್ ಮಾಡಿಕೊಂಡು ತಾಯಿ ಅಕ್ಕನನ್ನು ವಿಜಯಲಕ್ಷ್ಮಿ ಸರಿಯಾಗಿ ಗಮನಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಕರ್ಕಿಗೆ ಬಂದಾಗಿನಿಂದ ಕಿರಿಕ್ ಮಾಡಿಕೊಂಡಿದ್ದ ವಿಜಯಲಕ್ಷ್ಮಿ, ಹಾಸಿಗೆಯಲ್ಲಿಯೇ ಇರುವ ಅಕ್ಕ, ತಾಯಿಯನ್ನು ನೋಡಿಕೊಳ್ಳುತ್ತಿರಲಿಲ್ಲ. ಅಕ್ಕ, ತಾಯಿಯ ಶೌಚ, ಸ್ವಚ್ಛ ಮಾಡುವುದು, ಊಟ ಮಾಡಿಸುವುದು ಸಹ ತುಕಾರಾಮ್ ಅವರ ಮನೆಯವರು ಹಾಗೂ ಅವರ ಮನೆಯ ಕೆಲಸದವರು ಮಾಡಿದ್ದಾರೆ.
Advertisement
ವಿಜಯಲಕ್ಷ್ಮಿ ಪರಿಸ್ಥಿತಿ ನೋಡಿ, ತಾಯಿ ಮತ್ತು ಅಕ್ಕನನ್ನು ಇಲ್ಲಿಯೇ ಬಿಡಿ, ಇಲ್ಲಿ ಆಶ್ರಮ ಇದೆ ನಾನು ಇರುತ್ತೇನೆ ನೋಡಿಕೊಳ್ಳುತ್ತೇನೆ. ನೀವು ಬೆಂಗಳೂರಿಗೆ ಹೋಗಿ ಸಿನಿಮಾದಲ್ಲಿ ಅವಕಾಶ ಪಡೆದು ನಿಮ್ಮ ವೃತ್ತಿ ಮುಂದುವರಿಸುವಂತೆ ತುಕರಾಮ್ ಹೇಳಿದ್ದಾರೆ. ಆದರೆ ಆದಕ್ಕೆ ಒಪ್ಪದ ವಿಜಯಲಕ್ಷ್ಮಿ ನನ್ನ ತಾಯಿ, ಅಕ್ಕ ನನ್ನೊಂದಿಗೆ ಇರುತ್ತಾರೆ. ಅವರನ್ನು ಬಿಟ್ಟು ಇರುವುದಿಲ್ಲ ಎಂದು ತಾಯಿ ಮತ್ತು ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ತುಕರಾಮ್, ಉಚಿತವಾಗಿ ಎಲ್ಲವನ್ನೂ ಮಾಡಿದರೂ ಮನೆ ಸರಿಯಿಲ್ಲ, ವ್ಯವಸ್ಥೆ ಸರಿಯಿಲ್ಲ. ನನಗೆ ಕೆಲಸದವರನ್ನು ನೇಮಿಸಿ, ಮನೆಗೆ ಬೇರೆ ವ್ಯವಸ್ಥೆ ಕಲ್ಪಿಸಿ ಎಂದು ಫೇಸ್ ಬುಕ್‍ನಲ್ಲಿ ನಟಿ ಕೇಳಿದ್ದರು. ಈ ಬಗ್ಗೆ ನಾನು ಅವರನ್ನು ವಿಚಾರಿಸಿದೆ. ಹೀಗೆ ವಿಚಾರಿಸಿದ್ದಕ್ಕೆ ಮನಸ್ಸಿಗೆ ಹಚ್ಚಿಕೊಂಡ ಅವರು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿದರು. ಅದಕ್ಕೆ ನಾನೇ ಕಾರನ್ನು ಮಾಡಿ ಕಳುಹಿಸಿದ್ದೇನೆ ಎಂದರು.