Bengaluru City

ಬ್ಯಾಂಕ್‍ನಲ್ಲಿ ಹಿಂದಿ ಬೇಡ, ಚೆಕ್ಕುಗಳು ಕನ್ನಡದಲ್ಲೇ ಇರಬೇಕು: ವಾಟಾಳ್

Published

on

Share this

ಬೆಂಗಳೂರು: ಕರ್ನಾಟಕ ರಾಜ್ಯದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಭಾರಿ ಚಳವಳಿ ನೆಡೆಸಿದರು.

ವಾಟಾಳ್ ನಾಗರಾಜ್ ಜೊತೆಗೂಡಿದ ಹಲವು ಕನ್ನಡ ಪರ ಸಂಘಟನೆಗಳ ನಾಯಕರು ಭಾರತೀಯ ಸ್ಟೇಟ್ ಬ್ಯಾಂಕ್ ಮುಂಭಾಗ ಹಿಂದಿ ಭಾಷೆ ಹೊಂದಿರುವ ಚೆಕ್ ಸುಡುವ ಮೂಲಕ ಶುಕ್ರವಾರ ವಿಭಿನ್ನ ಪ್ರತಿಭಟನೆಗೆ ಮುಂದಾದರು.

ಕನ್ನಡವೇ ಸಾರ್ವಭೌಮ, ಕನ್ನಡವೇ ಚಕ್ರವರ್ತಿ: ಇಡೀ ರಾಜ್ಯದಲ್ಲಿ ಎಲ್ಲಾ ಬ್ಯಾಂಕುಗಳ ಚೆಕ್ಕುಗಳು ಕನ್ನಡದಲ್ಲಿಯೇ ಇರಬೇಕು. ನಮಗೆ ಹಿಂದಿ ಬೇಡವೇ ಬೇಡ. ಈ ನಾಡಿನ ಭಾಷೆ ಕನ್ನಡ ಹೀಗಾಗಿ ಎಲ್ಲೆಲ್ಲೂ ಕನ್ನಡವಾಗಬೇಕು. ಬ್ಯಾಂಕ್‍ಗಳಲ್ಲಿ ಸಂಪೂರ್ಣ ಕನ್ನಡ ಬಳಸಬೇಕು. ಕನ್ನಡವೇ ಸಾರ್ವಭೌಮ, ಕನ್ನಡವೇ ಚಕ್ರವರ್ತಿ, ಬ್ಯಾಂಕುಗಳಲ್ಲಿ ಹಿಂದಿ ಬೇಡ, ಚೆಕ್ಕುಗಳು ಕನ್ನಡದಲ್ಲೇ ಇರಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ:  ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು: ಆನಂದ್ ಸ್ವರೂಪ್ ಶುಕ್ಲಾ

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ ನಾಗರಾಜ್ ರೈಲ್ವೆ, ಅಂಚೆ ಕಛೇರಿಗಳಲ್ಲಿ ಹಿಂದಿ ಬೇಡ. ಕನ್ನಡಿಗರಿಗೆ ಬ್ಯಾಂಕ್‍ಗಳಲ್ಲಿ ಅತೀ ಹೆಚ್ಚು ಉದ್ಯೋಗವಕಾಶ ಸಿಗಬೇಕು. ಬ್ಯಾಂಕ್ ಅಧಿಕಾರಿಗಳು ಕನ್ನಡಿಗರಾಗಿಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದರು.

Click to comment

Leave a Reply

Your email address will not be published. Required fields are marked *

Advertisement
Advertisement