CinemaCrimeLatestMain PostSouth cinema

ಮಲಯಾಳಂ ನಟ ನೆಡುಂಬ್ರಂ ಗೋಪಿ ಇನ್ನಿಲ್ಲ

ತಿರುವನಂತಪುರಂ: ಮಲಯಾಳಂನ ಖ್ಯಾತ ನಟ ನೆಡುಂಬ್ರಂ ಗೋಪಿ(85) ಮಂಗಳವಾರ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ನಿನ್ನೆ ವಿಧಿವಶರಾಗಿದ್ದಾರೆ. ಇವರು ಕೇರಳ ರಾಜ್ಯ ವಿದ್ಯುತ್ ಮಂಡಳಿಯ (ಕೆಎಸ್‍ಇಬಿ) ಮಾಜಿ ನೌಕರರಾಗಿದ್ದರು.

ಮಲಯಾಳದ ಪ್ರಶಸ್ತಿ ವಿಜೇತ ಸಿನಿಮಾ ‘ಕಾಯ್ಚಾ’ದಲ್ಲಿ ನಟಿಸಿ ಮನೆ ಮಾತಾಗಿದ್ದರು. ಅಲ್ಲದೆ ಅಲಿಫ್, ಆನಂದ ಭೈರವಿ, ಅಶ್ವಾರೂಡನ್ ಮೊದಲಾದ ಸಿನಿಮಾಗಳಲ್ಲಿ ಅವರು ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸಿದ್ದರು.

Live Tv

Leave a Reply

Your email address will not be published.

Back to top button