ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (JD Vance)ಮತ್ತು ಅವರ ಪತ್ನಿ ಉಷಾ ವ್ಯಾನ್ಸ್ ( Usha Vance) ದಂಪತಿಗೆ ನಾಲ್ಕನೇ ಮಗು ಜನಿಸಿದ್ದು, ಈ ಸಂತಸದ ಸುದ್ದಿಯನ್ನು ಕುಟುಂಬ ಅಧಿಕೃತವಾಗಿ ಹಂಚಿಕೊಂಡಿದೆ.
ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಎರಡನೇ ಮಹಿಳೆ ಉಷಾ ವ್ಯಾನ್ಸ್ ದಂಪತಿಗೆ ಗಂಡು ಮಗು ಜನಿಸಿದೆ. ಮಗುವಿಗೆ ಅಲೆಕ್ ನೀಲ್ ವ್ಯಾನ್ಸ್ (Alec Neil Vance) ಎಂದು ಹೆಸರಿಡಲಾಗಿದೆ. ಮೇರಿಲ್ಯಾಂಡ್‌ನ ವಾಲ್ಟರ್ ರೀಡ್ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ ಮಗು ಜನಿಸಿದೆ.
ಉಷಾ ಹಾಗೂ ಮಗುವಿನ ಆರೈಕೆ ಮಾಡಿದ ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರ ಮತ್ತು ಶ್ವೇತಭವನದ ವೈದ್ಯಕೀಯ ತಂಡಕ್ಕೆ ವ್ಯಾನ್ಸ್ ದಂಪತಿ ಧನ್ಯವಾದ ತಿಳಿಸಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿ ನೀಡಿದ ಸೇವೆಯನ್ನು ಅವರು ವಿಶೇಷವಾಗಿ ಮೆಚ್ಚಿದ್ದಾರೆ.
ಅಲೆಕ್ ನೀಲ್ ವ್ಯಾನ್ಸ್ ದಂಪತಿಯ ನಾಲ್ಕನೇ ಮಗು. ಈಗಾಗಲೇ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮಗಳಿದ್ದಾರೆ. ತಮ್ಮ ಮಕ್ಕಳನ್ನು ಸಾರ್ವಜನಿಕ ಜೀವನದಿಂದ ದೂರವಿಡಲು ಈ ಕುಟುಂಬ ಹೆಚ್ಚಿನ ಆದ್ಯತೆ ನೀಡುತ್ತದೆ.ಇದನ್ನೂ ಓದಿ:
ಈ ಜನನ ಅಮೆರಿಕ ರಾಜಕೀಯ ಇತಿಹಾಸದಲ್ಲೂ ವಿಶೇಷವಾಗಿದೆ. ಸುಮಾರು 150 ವರ್ಷಗಳ ಬಳಿಕ ಅಧಿಕಾರದಲ್ಲಿರುವ ಅಮೆರಿಕದ ಉಪಾಧ್ಯಕ್ಷರೊಬ್ಬರಿಗೆ ಮಗು ಜನಿಸಿರುವುದು ಇದೇ ಮೊದಲ ಘಟನೆ. ಕೊನೆಯದಾಗಿ 1870ರಲ್ಲಿ ಆಗಿನ ಉಪಾಧ್ಯಕ್ಷ ಶುಯ್ಲರ್ ಕೋಲ್ಫ್ಯಾಕ್ಸ್ ಅಧಿಕಾರದಲ್ಲಿದ್ದಾಗ ತಂದೆಯಾಗಿದ್ದರು.
41 ವರ್ಷದ ಜೆ.ಡಿ. ವ್ಯಾನ್ಸ್ ಅಮೆರಿಕದ ಕಿರಿಯ ಉಪಾಧ್ಯಕ್ಷರಲ್ಲಿ ಒಬ್ಬರಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಪ್ರಮುಖ ನಾಯಕರಲ್ಲಿ ಗುರುತಿಸಿಕೊಂಡಿದ್ದಾರೆ. ಉಷಾ ವ್ಯಾನ್ಸ್ ಭಾರತೀಯ ಮೂಲದವರಾಗಿದ್ದು, ಅವರ ಕುಟುಂಬದವರು ಮೂಲತಃ ಆಂಧ್ರಪ್ರದೇಶದವರಾಗಿದ್ದಾರೆ.ಇದನ್ನೂ ಓದಿ: ಜೋರ್ಡಾನ್ ಮೇಲೆ ಇರಾನ್ ಭೀಕರ ದಾಳಿ – ಇಬ್ಬರು ಯುಎಸ್ ಸೈನಿಕರು ಸಾವು, ಓರ್ವ ನಾಪತ್ತೆ
