– ಅಮೆರಿಕ ಪಡೆಗಳ ಮೇಲೆ ಡ್ರೋನ್ ಹಾರಿಸಿದ ಇರಾನ್
ಟೆಹ್ರಾನ್: ಅಮೆರಿಕ (America) ತನ್ನ ನೌಕಾ ದಿಗ್ಬಂಧನದ ಭಾಗವಾಗಿ ಕೊಲ್ಲಿಯಲ್ಲಿ ಇರಾನ್ (Iranian-Flagged Cargo Ship) ಧ್ವಜ ಹೊತ್ತ ಸರಕು ಹಡಗನ್ನು ತಡೆದಿದೆ ಎಂದು ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ಟೌಸ್ಕಾ ಹಡಗನ್ನು ಅಮೆರಿಕದ ನೌಕಾಪಡೆಯು ನಿಲ್ಲಿಸುವಂತೆ ನೀಡಿದ ಎಚ್ಚರಿಕೆಗೆ ಸ್ಪಂದಿಸದ ಕಾರಣ ವಶಪಡಿಸಿಕೊಳ್ಳಲಾಗಿದೆ ಎಂದು ಅಮೆರಿಕದ ಅಧ್ಯಕ್ಷರು ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ತಿಳಿಸಿದ್ದಾರೆ. ಇದು ಕದನ ವಿರಾಮದ ಉಲ್ಲಂಘನೆಯಾಗಿದ್ದು, ಸಶಸ್ತ್ರ ಕಡಲ್ಗಳ್ಳತನದ ಕೃತ್ಯಕ್ಕೆ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಎಚ್ಚರಿಸಿದೆ. ಇದನ್ನೂ ಓದಿ: ಹಾರ್ಮುಜ್ ಆಯ್ತು, ಈಗ ಮಲಕ್ಕಾ ಟಾರ್ಗೆಟ್? – ಭಾರತ, ಚೀನಾ ಬುಡಕ್ಕೆ ಬಂತ ಅಮೆರಿಕಾ?
ಪಾಕಿಸ್ತಾನದಲ್ಲಿ ಇರಾನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವ ಕುರಿತು ಎರಡನೇ ಸುತ್ತಿನ ಮಾತುಕತೆಗೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತೊಂದು ನಿಯೋಗದ ನೇತೃತ್ವ ವಹಿಸಲಿದ್ದಾರೆ ಎಂದು ಶ್ವೇತಭವನ ದೃಢಪಡಿಸಿತ್ತು. ಆದರೆ, ಹಾರ್ಮುಜ್‌ನಲ್ಲಿ ಮತ್ತೆ ಇರಾನ್ ಮತ್ತು ಅಮೆರಿಕ ನಡುವೆ ಸಂಘರ್ಷ ಜೋರಾಗಿದೆ.
ಕದನ ವಿರಾಮ ಒಪ್ಪಂದ ಮಾತುಕತೆಗೆ ಇರಾನ್ ನಕಾರ ವ್ಯಕ್ತಪಡಿಸಿದೆ. ಅಮೆರಿಕದ ದಿಗ್ಬಂಧನ ಜಾರಿಯಲ್ಲಿರುವವರೆಗೆ ಶಾಂತಿ ಮಾತುಕತೆ ಸಾಧ್ಯವಿಲ್ಲ. ಎರಡನೇ ಸಭೆಗೆ ಹಾಜರಾಗುವುದಿಲ್ಲ. ಇರಾನ್ ಬಂದರುಗಳ ಸುತ್ತಲೂ ನೌಕಾ ದಿಗ್ಬಂಧನ ಮುಂದುವರಿದಿದೆ. ಇದು ಕದನ ವಿರಾಮ ಒಪ್ಪಂದದ ಉಲ್ಲಂಘಿಸುತ್ತದೆ. ಈ ಹಿನ್ನೆಲೆ ಮಾತುಕತೆಗಳಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಇರಾನ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಹಾರ್ಮುಜ್‌ನಿಂದ ಹೈವೇವರೆಗೆ – ಇರಾನ್ ಯುದ್ಧದಿಂದ ಭಾರತದ ಹೆದ್ದಾರಿ ಯೋಜನೆಯಲ್ಲೂ ಸಮಸ್ಯೆ
ಹಾರ್ಮುಜ್‌ನಲ್ಲಿ ಗುಂಡಿನ ಮೊರೆತದ ಸದ್ದು ಜೋರಾಗಿದೆ. ಅಮೆರಿಕದ ದಾಳಿಗೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ ಕಡೆಯಿಂದ ಪ್ರತಿದಾಳಿ ನಡೆದಿದೆ. ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಪಡೆಗಳ ಮೇಲೆ ಇರಾನ್ ಡ್ರೋನ್‌ಗಳನ್ನು ಹಾರಿಸಿದೆ.

