ವಾಷಿಂಗ್ಟನ್: ವ್ಯಾಪರ ಒಪ್ಪಂದ ಮಾತುಕತೆ ವಿಫಲವಾದ ಬೆನ್ನಲ್ಲೇ 20 ಬಿಲಿಯನ್ ಡಾಲರ್ ಮೌಲ್ಯದ ಕೆನಡಾದ (Canada) ಉತ್ಪನ್ನಗಳ ಮೇಲೆ ಅಮೆರಿಕ 50% ಸುಂಕವನ್ನು ವಿಧಿಸಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಆಮದು ತೆರಿಗೆಗಳು, ಕೆನಡಾ ಪ್ರತಿ ವರ್ಷ ಅಮೆರಿಕಕ್ಕೆ (America) ಸಾಗಿಸುವ ವಸ್ತುಗಳ ಸುಮಾರು 5% ರಷ್ಟು ಪರಿಣಾಮ ಬೀರುತ್ತವೆ. ಇದನ್ನೂ ಓದಿ: ಯೆಮೆನ್, ಸೊಮಾಲಿಯಾ ಬಳಿ 22 ಭಾರತೀಯರಿದ್ದ 2 ಹಡಗು ಹೈಜಾಕ್
ಅಮೆರಿಕದ ಹೊಸ ಸುಂಕಗಳು ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ. ವ್ಯಾಪಾರ ಮಾತುಕತೆ ವಿಫಲವಾಗುತ್ತಿದ್ದಂತೆ ಕೆನಡಾ ಪ್ರಧಾನಿ ಮಾರ್ಕೊ ಕಾರ್ನಿ, ಅಮೆರಿಕದ ಸುಂಕಕ್ಕೆ ನಾವು ಕೂಡ ಪ್ರತಿಸುಂಕ ವಿಧಿಸುತ್ತೇವೆಂದು ಎಚ್ಚರಿಸಿದ್ದಾರೆ.
ಯುಎಸ್ ಪ್ರಸ್ತಾಪಿಸಿದ ನಿಯಮಗಳು ಅನ್ಯಾಯ, ಆರ್ಥಿಕವಲ್ಲದವು ಮತ್ತು ಯಾವುದೇ ಒಪ್ಪಂದದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತವೆ ಎಂದು ಒಪ್ಪಂದ ನಿರಾಕರಿಸಿದ ಬಗ್ಗೆ ಕಾರ್ನಿ ಮಾತನಾಡಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್‌ನ ಬೌದ್ಧ ವಿಹಾರದ ಮೇಲೆ ಭೀಕರ ವಾಯುದಾಳಿ – 14 ಮಂದಿ ಸಾವು, 20 ಜನರಿಗೆ ಗಾಯ

