ಟೆಹ್ರಾನ್: ಅಮೆರಿಕದ ಪಡೆಗಳು (US Forces) ಇರಾನಿನ (Iran) ಕ್ಷಿಪಣಿ ಮತ್ತು ಡ್ರೋನ್ ಸಂಗ್ರಹಣಾ ನೆಲೆಗಳು ಹಾಗೂ ಕರಾವಳಿ ರಾಡಾರ್ ನೆಲೆಗಳ ಮೇಲೆ ದಾಳಿ ನಡೆಸಿವೆ.
ಇರಾನಿನ ಪಡೆಗಳು ಕದನ ವಿರಾಮವನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ. ವಾಣಿಜ್ಯ ಸಾಗಣೆಯ ವಿರುದ್ಧ ಅನಗತ್ಯ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಈ ದಾಳಿಗಳು ನಡೆದಿವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿದೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಖಾತೆ ಬದಲು ನಿರೀಕ್ಷೆ – ಶೀಘ್ರ ಮೋದಿ ಸಂಪುಟ ಪುನಾರಚನೆ ಸಾಧ್ಯತೆ
ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ನಿನ್ನೆ ನಡೆದ ದಾಳಿಗೆ ಪ್ರಬಲ ಪ್ರತಿಕ್ರಿಯೆ ಎಂದು ಯುಎಸ್ ತನ್ನ ಕಾರ್ಯಾಚರಣೆ ಬಗ್ಗೆ ವಿವರಿಸಿದೆ.
ದಕ್ಷಿಣ ಬಂದರು ನಗರದ ತಹೆರೋಯೆ ಪಿಯರ್‌ನಲ್ಲಿ ಶುಕ್ರವಾರ ತಡರಾತ್ರಿ ಸ್ಫೋಟದ ಶಬ್ದ ಕೇಳಿಸಿದೆ ಎಂದು ಸಿರಿಕ್‌ನ ವರದಿಗಾರರನ್ನು ಉಲ್ಲೇಖಿಸಿ ಇರಾನ್ ರಾಜ್ಯ ದೂರದರ್ಶನ ತಿಳಿಸಿದೆ.
ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಡಗಿನ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿರುವುದನ್ನು ಖಂಡಿಸಿದ್ದರು. ಸ್ಪಷ್ಟವಾಗಿ, ಇದು ನಮ್ಮ ಕದನ ವಿರಾಮ ಒಪ್ಪಂದದ ಮೂರ್ಖತನದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದರು.
ಅನುಮತಿಯಿಲ್ಲದೆ ಹಾರ್ಮುಜ್ ಜಲಸಂಧಿಯ ಮೂಲಕ ಕೊಲ್ಲಿಯನ್ನು ಪ್ರವೇಶಿಸಬಾರದು ಅಥವಾ ಬಿಡಬಾರದು ಎಂದು ಇರಾನ್ ಹಡಗುಗಳಿಗೆ ಎಚ್ಚರಿಕೆ ನೀಡಿದೆ. ಆದರೆ, ಹಡಗುಗಳು ಚಲಿಸುತ್ತಲೇ ಇವೆ. ಕೆಲವು ಇರಾನ್ ಅನುಮತಿಸದ ಮಾರ್ಗವನ್ನು ಬಳಸುತ್ತಿವೆ. ಇದನ್ನೂ ಓದಿ: ಶೃಂಗಸಭೆ: ಮೊದಲ ಬಾರಿಗೆ ಭಾರತಕ್ಕೆ ಜಪಾನ್ ಪ್ರಧಾನಿ ಸನೇ ತಕೈಚಿ ಭೇಟಿ – ಜು.1ರಿಂದ 3 ದಿನ ಪ್ರವಾಸ
ಗುರುವಾರ ಸಾಗಿದ 42 ಹಡಗುಗಳಲ್ಲಿ ಅರ್ಧದಷ್ಟು ಹಡಗುಗಳು ಒಮಾನ್ ಕರಾವಳಿಯಲ್ಲಿ ಅನುಮೋದಿಸದ ದಕ್ಷಿಣ ಮಾರ್ಗವನ್ನು ಬಳಸಿದವು ಎಂದು ಕೆಪ್ಲರ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ತಿಳಿಸಿದೆ.
