ಉಡುಪಿ: ದೇವಾಲಯದ ಕೆರೆಗೆ ಬಿದ್ದು ಒಂಬತ್ತನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಡುಪಿ (Udupi) ನಗರದ ತೆಂಕಪೇಟೆಯಲ್ಲಿರುವ ವೆಂಕಟರಮಣ ದೇವಾಲಯದಲ್ಲಿ ನಡೆದಿದೆ.
ಮೃತನನ್ನು ಕುಕ್ಕಿಕಟ್ಟೆ ನಿವಾಸಿ ಆದಿತ್ಯ ನಾಯಕ್ (13) ಎಂದು ಗುರುತಿಸಲಾಗಿದೆ. ದೇವಾಲಯದಲ್ಲಿ ನಡೆಯುತ್ತಿದ್ದ ಭಜನಾ ಸಪ್ತಾಹ ಕಾರ್ಯಕ್ರಮದ ವೇಳೆ ಘಟನೆ ಸಂಭವಿಸಿದೆ. ಇದನ್ನೂ ಓದಿ: ವಿಜಯಪುರ | ಭೂತನಾಳ ಕೆರೆಯಲ್ಲಿ 6 ಶವ ಪತ್ತೆ – ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಶಂಕೆ
ಅಕ್ಕನ ಮಗನ ಒತ್ತಾಯದ ಮೇರೆಗೆ ಈಜಲು ಕೆರೆಗೆ ಇಳಿದಿದ್ದ ಆದಿತ್ಯನಿಗೆ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ. ಸುಮಾರು 20 ಅಡಿ ಆಳದ ಕೆರೆಯಲ್ಲಿ ಮುಳುಗಿ ಬಾಲಕ ಮೃತಪಟ್ಟಿದ್ದಾನೆ.
ಪೋಷಕರ ಮಾತನ್ನು ತಳ್ಳಿ ಹಾಕಿ ಈಜಲು ತೆರಳಿದ್ದ ಬಾಲಕ ದುರಂತಕ್ಕೀಡಾಗಿದ್ದಾನೆ. ಮುಳುಗುತಜ್ಞ ಈಶ್ವರ ಮಲ್ಪೆ ಅವರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ – ತಲೆ ಮೇಲೆ ಟ್ರಕ್ ಹರಿದು ಕಟ್ಟಡ ಕಾರ್ಮಿಕ ಸಾವು
