ಲಕ್ನೋ: ಕುಡಿದ ಅಮಲಿನಲ್ಲಿದ್ದ ಯುವತಿಯರಿಬ್ಬರು ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಗುರುವಾರ ತಡರಾತ್ರಿ ಉತ್ತರ ಪ್ರದೇಶದ ಲಕ್ನೋದ ಅನ್ಪ್ಲಗ್ಡ್ ಕೆಫೆಯ ಹೊರಗೆ ಈ ಘಟನೆ ನಡೆದಿದ್ದು, ವ್ಯಕ್ತಿ ಮೇಲೆ ಯುವತಿಯರಿಬ್ಬರು ಹಲ್ಲೆ ನಡೆಸಿರುವ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಬಿದ್ದು ಬೆಂಕಿ – ಇಬ್ಬರು ಸುಟ್ಟು ಕರಕಲು, ಚಾಲಕ ಗಂಭೀರ
#लखनऊ:- #unplugged #कैफ़े के बाहर #युवती ने #युवक के बीच हुई #हाथापाई#थाना-विभूति खंड #वीडियो #वायरल है @lkopolice @LkoCp #Lucknow #UnpluggedCafe @Uppolice #UpNews #UPPInNews pic.twitter.com/O9EQQELZBB
— Shiv Kumar Maurya (@ShivKum60592848) July 22, 2022
33 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಪಬ್ ಹೊರಗೆ ಯುವತಿ ವ್ಯಕ್ತಿಗೆ ಮುಷ್ಟಿ ಮಾಡಿ ಹೊಡೆಯುತ್ತಿದ್ದರೆ, ಜನರು ತಮ್ಮ ಫೋನ್ಗಳಲ್ಲಿ ಗಲಾಟೆ ವೀಡಿಯೋವನ್ನು ರೆಕಾರ್ಡ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಪಬ್ನ ಪ್ರವೇಶ ದ್ವಾರದಲ್ಲಿ ಇರಿಸಲಾಗಿದ್ದ ಫ್ಲವರ್ ಪಾಟ್ನಿಂದಲೂ ವ್ಯಕ್ತಿ ಮೇಲೆ ಯುವತಿ ಹಲ್ಲೆ ನಡೆಸಿದ್ದಾಳೆ.
ವಿಭೂತಿ ಖಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮ್ಮಿಟ್ ಬಿಲ್ಡಿಂಗ್ನಲ್ಲಿ ಗುರುವಾರ ಈ ಘಟನೆ ನಡೆದಿದೆ. ಗಲಾಟೆ ಜೊತೆಗೆ ಕೆಲಕಾಲ ಮಾತಿನ ಚಕಮಕಿ ಮುಂದುವರಿದಿದ್ದರಿಂದ ಕೊನೆಗೆ ಬೌನ್ಸರ್ಗಳು ಮತ್ತು ಪಬ್ನ ಇತರ ನಿರ್ವಾಹಕರು ಯುವತಿಯರನ್ನು ತಡೆದಿದ್ದಾರೆ. ಇದೀಗ ವೀಡಿಯೋದಲ್ಲಿದ್ದ ಇಬ್ಬರು ಯುವತಿಯರನ್ನು ಗುರುತಿಸಿ ಪೊಲೀಸರು ಬಂಧಿಸಿದ್ದಾರೆ ಮತ್ತು ಇಬ್ಬರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಹಲ್ಲೆಗೊಳಗಾದ ವ್ಯಕ್ತಿ ಈ ಬಗ್ಗೆ ಯಾವುದೇ ದೂರು ದಾಖಲಿಸಲು ಬಂದಿಲ್ಲ.