ದುಬೈ: 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಅನುಭವಿ ಆಟಗಾರರಿಗಿಂತ ಅನ್ ಕ್ಯಾಪ್ಡ್ ಪ್ಲೇಯರ್ಸ್ ಸಖತ್ ಸೌಂಡ್ ಮಾಡುತ್ತಿದ್ದಾರೆ.
Advertisement
ಐಪಿಎಲ್ ಪ್ರತಿಭೆಗಳ ಅನಾವರಣಕ್ಕೆ ಒಂದು ವೇದಿಕೆ ಇದ್ದಂತೆ. ಇಲ್ಲಿ ಮಿಂಚು ಹರಿಸಿದರೆ ಭಾರತ ತಂಡಕ್ಕೆ ಮುಂದೊಂದು ದಿನ ಆಯ್ಕೆ ಆಗುವುದು ಖಚಿತ. ಇದೀಗ ನಡೆಯುತ್ತಿರುವ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಅನ್ ಕ್ಯಾಪ್ಡ್ ಪ್ಲೇಯರ್ಸ್(ಮೂರು ಮಾದರಿಯ ಕ್ರಿಕೆಟ್‍ನಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಆಟಗಾರರು) ಮಿಂಚುವ ಮೂಲಕ ರಾಷ್ಟ್ರೀಯ ತಂಡದ ಕದ ತಟ್ಟಿದ್ದಾರೆ. ಇದನ್ನೂ ಓದಿ: ಆರ್ಸಿಬಿಗೆ ಹರ್ಷ ತಂದ ಅನ್ಕ್ಯಾಪ್ಡ್ ಪ್ಲೇಯರ್
Advertisement
Advertisement
ಪ್ರಮುಖವಾಗಿ ಆರ್‌ಸಿಬಿ ತಂಡದ ಬೌಲರ್ ಹರ್ಷಲ್ ಪಟೇಲ್ ಭಾರತ ತಂಡಕ್ಕೆ ಪದಾರ್ಪಣೆ ಮಾಡದೆ ಇದ್ದರೂ ಕೂಡ ಈ ಬಾರಿಯ ಐಪಿಎಲ್‍ನಲ್ಲಿ 11 ಪಂದ್ಯವಾಡಿ 26 ವಿಕೆಟ್ ಪಡೆದು ಪರ್ಪಲ್ ಕ್ಯಾಪ್‍ನ ಒಡೆಯನಾಗಿದ್ದಾರೆ. ಇವರೊಂದಿಗೆ ಡೆಲ್ಲಿ ತಂಡದ ವೇಗಿ ಅವೇಶ್ ಖಾನ್ 12 ಪಂದ್ಯಗಳಿಂದ 21 ವಿಕೆಟ್ ಪಡೆದು ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಇವರು ಬೌಲಿಂಗ್ ಸರದಿಯಲ್ಲಿ ಮಿಂಚಿದರೆ, ಬ್ಯಾಟಿಂಗ್ ಸರದಿಯಲ್ಲಿ ಕೋಲ್ಕತ್ತಾ ತಂಡದ ವೆಂಕಟೇಶ್ ಅಯ್ಯರ್ 5 ಪಂದ್ಯಗಳಿಂದ 193 ರನ್ ಮತ್ತು 3 ವಿಕೆಟ್ ಕಿತ್ತು ಆಲ್‍ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ: ರೋಚಕ ಘಟ್ಟ ತಲುಪಿದ ಐಪಿಎಲ್ – ಪ್ಲೇ ಆಫ್‍ಗೆ ಏರಲು ಯಾವ ತಂಡ ಏನು ಮಾಡಬೇಕು?
Advertisement