– ಪ್ರೀಮಿಯರ್ ಶೋನಲ್ಲೇ 52 ಕೋಟಿ ರೂ. ಬಾಚಿದ ಸಿನಿಮಾ
ಯುಗಾದಿ ಹಬ್ಬವಾದ ಇಂದು ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ, ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಪಾರ್ಟ್ 2ನಲ್ಲಿ ರಣವೀರ್ ಸಿಂಗ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಸೀನ್‌ಗಳಿಂದ ತುಂಬಿರುವ ಸಿನಿಮಾ ಪ್ರೇಕ್ಷಕರ ಮನಸ್ಸಲ್ಲಿ ಎರಡು ಪಟ್ಟು ಕೋಪ, ಹಿಂಸಾತ್ಮಕ ಭಾವವನ್ನು ಉದ್ರೇಕಿಸುತ್ತದೆ. ಪಾಕಿಸ್ತಾನ ಭಯೋತ್ಪಾದಕರ ಜಾಲವನ್ನು ನಾಶ ಮಾಡುವ ಜಸ್ಕಿರತ್ ಸಿಂಗ್ ರಂಗಿಯ ಕಥೆಯೇ ಮುಖ್ಯ ಕಥೆಯಾಗಿದೆ.
ಧುರಂಧರ್ 2: ದಿ ರಿವೆಂಜ್ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಅತ್ಯಂತ ದೀರ್ಘವಾದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಸಿನಿಮಾ ಪರದೆಯ ಮೇಲೆ 235 ನಿಮಿಷಗಳು ಅಂದರೆ ಸುಮಾರು 3 ಗಂಟೆ 55 ನಿಮಿಷಗಳ ಪ್ರದರ್ಶನವಿದೆ.
ಸಿನಿಮಾದಲ್ಲಿ ಸಂಜಯ್ ಧತ್, ಅರ್ಜುನ್ ರಾಂಪಾಲ್, ಆರ್.ಮಾಧವನ್, ಸಾರಾ ಅರ್ಜುನ್, ರಾಕೇಶ್ ಬೇಡಿ ಸೇರಿದಂತೆ ಅನೇಕ ದಿಗ್ಗಜ ತಾರಾಗಣ ನಟಿಸಿದ್ದು, ತಮ್ಮ ಪಾತ್ರಗಳ ಮೂಲಕ ಕಮಾಲ್ ಮಾಡಿದ್ದಾರೆ.
ಹಿಂದಿ, ತೆಲುಗು, ತಮಿಳು, ಕನ್ನಡ, ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಕಂಡಿದೆ. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಪ್ರೀಮಿಯರ್ ಶೋಗಳಿಂದ ಸಿನಿಮಾ 52 ಕೋಟಿ ರೂ. ಗಳಿಸಿದೆ.

