ಅಗರ್ತಲಾ: ಬಿಜೆಪಿ ಉಪಾಧ್ಯಕ್ಷೆ ಪತಲ್ ಕನ್ಯಾ ಜಮಾತಿಯಾ ಅವರ ಮೇಲೆ ಗುರುವಾರ ಸೆಪಹಿಜಾಲಾ ಜಿಲ್ಲೆಯ ಜಂಪೂಯಿಜಾಲಾದಲ್ಲಿ ಜನರ ಗುಂಪೊಂದು ದಾಳಿ ನಡೆಸಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಗೋಮತಿ ಜಿಲ್ಲೆಯ ತೈಡುವಿನಲ್ಲಿ ಸ್ಥಳೀಯ ಜನರ ಮೇಲೆ ದಬ್ಬಾಳಿಕೆ ನಡೆಸಿದವರಿಗೆ ಸೂಕ್ತ ಉತ್ತರ ನೀಡಲಾಗುವುದು ಎಂದು ತಿಪ್ರಾ ಮೋಥಾ ಅಧ್ಯಕ್ಷ ಪ್ರದ್ಯೋತ್ ಕಿಶೋರ್ ದೆಬ್ಬರ್ಮಾ ಹೇಳಿದ ಕೆಲವೇ ಗಂಟೆಗಳ ನಂತರ ಪತಲ್ ಕನ್ಯಾ ಜಮಾತಿಯಾ ಅವರ ಮೇಲೆ ದಾಳಿ ನಡೆದಿದೆ. ಇದನ್ನೂ ಓದಿ: ಆ ಮನುಷ್ಯನಿಗೆ ಮಾನ, ಮರ್ಯಾದೆ ಇದ್ರೆ ರಾಜೀನಾಮೆ ಕೊಡಲಿ: ಶ್ರೀನಿವಾಸ್ ಗೌಡ ವಿರುದ್ಧ ಹೆಚ್ಡಿಕೆ ಕಿಡಿ
ಜಂಪೈಜಾಲಾದಲ್ಲಿ ಪತಲ್ ಕನ್ಯಾ ಜಮಾತಿಯಾದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬುಡಕಟ್ಟು ಕಲ್ಯಾಣ ಸಚಿವ ರಾಮಪಾದ, ಜಮಾತಿಯಾ ಮತ್ತು ಬಿಜೆಪಿ ಸಂಸದ ರೆಬಾಟಿ ತ್ರಿಪುರ ಅವರ ಬೆಂಗಾವಲು ಪಡೆಯನ್ನು ತಡೆದು ದಾಳಿ ನಡೆಸಲಾಗಿದೆ.
ತೈಡು, ಜಂಪೂಯಿಜಾಲ ಹಾಗೂ ಸುತ್ತಲಿನ ಜಾಗಗಳು ಬುಡಕಟ್ಟು ಪ್ರಾಬಲ್ಯ ಹೊಂದಿರುವ ಪ್ರದೇಶಗಳಾಗಿವೆ. ಜಂಪೂಯಿಜಾಲದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬುಡಕಟ್ಟು ಕಲ್ಯಾಣ ಸಚಿವ ರಾಂಪದ ಜಮಾತಿಯಾ ಹಾಗೂ ಬಿಜೆಪಿ ಸಂಸದ ರೇಬತಿ ತ್ರಿಪುರಾ ಅವರ ಜತೆ ಪತಲ್ ಕನ್ಯಾ ಜಮಾತಿಯಾ ತೆರಳುತ್ತಿದ್ದರು. ಈ ಸಂದರ್ಭದಲ್ಲಿ, ಗುಂಪೊಂದು ಬೆಂಗಾವಲು ಪಡೆ ವಾಹನಗಳನ್ನು ತಡೆಯಲು ಮುಂದಾಗಿದೆ. ಇದೇ ವೇಳೆ ಪತಲ್ ಕನ್ಯಾ ಮೇಲೆ ಹಲ್ಲೆ ನಡೆದಿದೆ ಎಂದು ಇನ್ಸ್ಪೆಕ್ಟರ್ ಜನರಲ್ (ಕಾನೂನು ಸುವ್ಯವಸ್ಥೆ) ಅರಿಂದಮ್ ನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ
ಗುಂಪಿನಲ್ಲಿ ಮಹಿಳೆಯರು ಸೇರಿದಂತೆ ನೂರಾರು ಜನ ಇದ್ದರು. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಎರಡು ವಾಹನಗಳಿಗೆ ಹಾನಿಯಾಗಿವೆ ಎಂದು ತಿಳಿಸಿದ್ದಾರೆ.
ಹಲ್ಲೆ ನಡೆಯುತ್ತಿದ್ದಂತೆಯೇ ಪತಲ್ ಕನ್ಯಾ ಅವರನ್ನು ಸುತ್ತುವರಿದು ರಕ್ಷಿಸಿದ ಪೊಲೀಸರು ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್ಆರ್) ಪ್ರಧಾನ ಕಚೇರಿಗೆ ಕರೆದೊಯ್ದರು. ಬಳಿಕ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು ಎಂದು ಅವರು ಹೇಳಿದ್ದಾರೆ. ಇತ್ತೀಚೆಗಷ್ಟೇ ಪತಲ್ ಕನ್ಯಾ ಅವರು ತ್ರಿಪುರಾ ಪೀಪಲ್ಸ್ ಫ್ರಂಟ್ ತೊರೆದು ಬಿಜೆಪಿ ಸೇರಿದ್ದರು.