ಬೆಂಗಳೂರು: ನಗರದ (Bengaluru) ಹಲವೆಡೆ ಭಾರೀ (Rain) ಮಳೆಯಾಗುತ್ತಿದೆ. ವಿಧಾನಸೌಧ, ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಕೆಆರ್ ಸರ್ಕಲ್ ಸುತ್ತಮುತ್ತ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು ಪರದಾಡುತ್ತಿದ್ದಾರೆ.
ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದ್ದು, ಸಿಟಿಯಿಂದ ಹೊರ ಹೋಗಲು ಹಾಗೂ ಸಿಟಿ ಒಳಗೆ ಓಡಾಡಲು ಜನರು ಹರಸಾಹಸಪಡುತ್ತಿದ್ದಾರೆ. ಕುಮಾರಕೃಪಾ ರೋಡ್, ಹೆಬ್ಬಾಳ, ಶಿವಾನಂದ, ಮೆಖ್ರಿ, ಕಾವೇರಿ ಜಂಕ್ಷನ್ನಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಹಬ್ಬಕ್ಕೆ ಊರುಗಳಿಗೆ ಹೊರಟಿರುವ ಜನ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆಯ ಟ್ರಾಫಿಕ್ ಜಾಮ್ – 6 ಗಂಟೆ ರಸ್ತೆಯಲ್ಲೇ ಸಿಲುಕಿದ ಪ್ರಯಾಣಿಕರು!
ಆನೇಕಲ್ ತಾಲೂಕಿನ ಹಲವೆಡೆ ಕಳೆದೊಂದು ವಾರದಿಂದ ಮಳೆಯಾಗುತ್ತಿದೆ. ಇಂದು ಸಹ ಆನೇಕಲ್, ಜಿಗಣಿ, ಅತ್ತಿಬೆಲೆ, ಚಂದಾಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಕಳೆದೊಂದು ಗಂಟೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ಮಳೆಯ ಅಬ್ಬರಕ್ಕೆ ಪಾದಚಾರಿಗಳು, ವಾಹನ ಸವಾರರ ಪರದಾಡುತ್ತಿದ್ದಾರೆ. ಜನ ಅಂಗಡಿ ಮುಂಗಟ್ಟುಗಳ ಬಳಿ ನಿಂತು ಆಶ್ರಯ ಪಡೆದಿದ್ದಾರೆ. ಇದನ್ನೂ ಓದಿ: ವೀಕೆಂಡ್, ಹಬ್ಬದ ಎಫೆಕ್ಟ್; ಊರುಗಳತ್ತ ಜನರು – ರಸ್ತೆಗಳಲ್ಲಿ ಕಿಲೋಮೀಟರ್ಗಟ್ಟಲೇ ಟ್ರಾಫಿಕ್
